ದಕ್ಷಿಣ ದೆಹಲಿಯಲ್ಲಿ ಶಸ್ತ್ರಚಿಕಿತ್ಸೆ ವೇಳೆ ರೋಗಿಗಳು ಸಾವು, ನಕಲಿ ವೈದ್ಯರ ಬಂಧನ

|

Updated on: Nov 16, 2023 | 10:01 PM

ಅಗರ್ವಾಲ್ ಮೆಡಿಕಲ್ ಸೆಂಟರ್ ನಡೆಸುತ್ತಿರುವ ಡಾ ಅಗರ್ವಾಲ್ ಮತ್ತು ಇತರ ಮೂವರು ಸ್ಥಾಪಿತ ವೈದ್ಯಕೀಯ ಪ್ರೋಟೋಕಾಲ್ಗಳನ್ನು ಅನುಸರಿಸದೆ ಹಲವು ರೋಗಿಗಳ ಪ್ರಮುಖ ಅಂಗಗಳ ಮೇಲೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ರೋಗಿಗಳ ಕುಟುಂಬಗಳು ಆರೋಪಿಸಿದ್ದಾರೆ. ದೂರುದಾರರ ಪ್ರಕಾರ, ಡಾ ಅಗರ್ವಾಲ್ ಫಿಸಿಷನ್ ಆಗಿದ್ದು ನಕಲಿ ದಾಖಲೆಗಳನ್ನು ಹೊಂದಿದ್ದರಿಂದ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆ.

ದಕ್ಷಿಣ ದೆಹಲಿಯಲ್ಲಿ ಶಸ್ತ್ರಚಿಕಿತ್ಸೆ ವೇಳೆ ರೋಗಿಗಳು ಸಾವು, ನಕಲಿ ವೈದ್ಯರ ಬಂಧನ
ಅಗರ್ವಾಲ್ ಆಸ್ಪತ್ರೆ
Follow us on

ದೆಹಲಿ ನವೆಂಬರ್ 16: ದೆಹಲಿಯ ಐಷಾರಾಮಿ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ (Greater Kailash) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ದಕ್ಷಿಣ ದೆಹಲಿ (South Delhi) ಪ್ರದೇಶದ ಕ್ಲಿನಿಕ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ರೋಗಿಗಳ ಸಾವಿಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಡಾ ನೀರಜ್ ಅಗರ್ವಾಲ್ (Dr Neeraj Agarwal), ಅವರ ಪತ್ನಿ ಪೂಜಾ ಅಗರ್ವಾಲ್ ಮತ್ತು ಡಾ ಜಸ್ಪ್ರೀತ್ ಸಿಂಗ್ ಅವರನ್ನು ಮಂಗಳವಾರ ಮಾಜಿ ಲ್ಯಾಬ್ ಟೆಕ್ನಿಶನ್ ಮಹೇಂದರ್ ಸಿಂಗ್ ಅವರೊಂದಿಗೆ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಅಸ್ಗರ್ ಅಲಿ ಎಂಬ ರೋಗಿಯನ್ನು 2022 ರಲ್ಲಿ ಪಿತ್ತಕೋಶದ ಚಿಕಿತ್ಸೆಗಾಗಿ ಕ್ಲಿನಿಕ್‌ಗೆ ದಾಖಲಿಸಲಾಗಿತ್ತು. ಆರಂಭದಲ್ಲಿ, ಕ್ವಾಲಿಫೈಡ್ ಸರ್ಜನ್ ಡಾ ಜಸ್ಪ್ರೀತ್ ಅವರು ಶಸ್ತ್ರಚಿಕಿತ್ಸೆ ನಡೆಸುತ್ತಾರೆ ಎಂದು ಅಲಿ ಅವರಿಗೆ ತಿಳಿಸಲಾಯಿತು. ಆದಾಗ್ಯೂ, ಸರ್ಜರಿಯ ಸ್ವಲ್ಪ ಮೊದಲು, ಡಾ.ಜಸ್ಪ್ರೀತ್ ಬದಲಿಗೆ ಪೂಜಾ ಮತ್ತು ಮಹೇಂದ್ರ ಅವರನ್ನು ನೇಮಿಸಲಾಯಿತು. ಶಸ್ತ್ರಚಿಕಿತ್ಸಾ ಕೊಠಡಿಯಿಂದ ನಿರ್ಗಮಿಸಿದ ನಂತರ, ಅಲಿ ಅವರು ತೀವ್ರವಾದ ನೋವನ್ನು ಅನುಭವಿಸಿದರು ಮತ್ತು ತಕ್ಷಣವೇ ಸಫ್ದರ್‌ಜಂಗ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಆಗಮನದ ನಂತರ ಮೃತಪಟ್ಟರು ಎಂದು ಘೋಷಿಸಲಾಯಿತು.

ಅಗರ್ವಾಲ್ ಮೆಡಿಕಲ್ ಸೆಂಟರ್ ನಡೆಸುತ್ತಿರುವ ಡಾ ಅಗರ್ವಾಲ್ ಮತ್ತು ಇತರ ಮೂವರು ಸ್ಥಾಪಿತ ವೈದ್ಯಕೀಯ ಪ್ರೋಟೋಕಾಲ್ಗಳನ್ನು ಅನುಸರಿಸದೆ ಹಲವು ರೋಗಿಗಳ ಪ್ರಮುಖ ಅಂಗಗಳ ಮೇಲೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ರೋಗಿಗಳ ಕುಟುಂಬಗಳು ಆರೋಪಿಸಿದ್ದಾರೆ. ದೂರುದಾರರ ಪ್ರಕಾರ, ಡಾ ಅಗರ್ವಾಲ್ ಫಿಸಿಷನ್ ಆಗಿದ್ದು ನಕಲಿ ದಾಖಲೆಗಳನ್ನು ಹೊಂದಿದ್ದರಿಂದ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆ.

ಪ್ರಕರಣದ ತನಿಖೆಯ ಪ್ರಕಾರ 2016 ರಿಂದ, ಡಾ ಅಗರ್ವಾಲ್, ಪೂಜಾ ಮತ್ತು ಅಗರ್ವಾಲ್ ಮೆಡಿಕಲ್ ಸೆಂಟರ್ ವಿರುದ್ಧ ಕನಿಷ್ಠ ಒಂಬತ್ತು ದೂರುಗಳು ಬಂದಿವೆ ಎಂದು ತಿಳಿದುಬಂದಿದೆ. ಪೊಲೀಸರ ಪ್ರಕಾರ, ಎಲ್ಲಾ ಏಳು ಪ್ರಕರಣಗಳಲ್ಲಿ, ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

“ನವೆಂಬರ್ 1 ರಂದು, ವೈದ್ಯಕೀಯ ಕೇಂದ್ರವನ್ನು ಪರೀಕ್ಷಿಸಲು ನಾಲ್ವರು ವೈದ್ಯರನ್ನೊಳಗೊಂಡ ವೈದ್ಯಕೀಯ ಮಂಡಳಿಯನ್ನು ಕರೆಯಲಾಯಿತು ಮತ್ತು ಬಹಳಷ್ಟು ನ್ಯೂನತೆಗಳು ಗಮನಿಸಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಚಂದನ್ ಚೌಧರಿ ಹೇಳಿದ್ದಾರೆ. ತನಿಖೆಯು ಅಗರ್ವಾಲ್ ಇಂಥಾ ಸುಳ್ಳು ದಾಖಲೆಗಳನ್ನು ತೋರಿಸಿ ರೋಗಿಗಳ ಸರ್ಜರಿ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ದೆಹಲಿ: ಎರಡು ದಿನದಿಂದ ಮಳೆಯಾಗುತ್ತಿದ್ದರೂ, ಗಾಳಿಯ ಗುಣಮಟ್ಟ ಕಳಪೆಯಾಗಿಯೇ ಉಳಿದಿದೆ

ಪೊಲೀಸರು ವೈದ್ಯರ ಸಹಿಯನ್ನು ಹೊಂದಿರುವ 414 ಪ್ರಿಸ್ಕ್ರಿಪ್ಷನ್ ಸ್ಲಿಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೇಲ್ಭಾಗದಲ್ಲಿ ಸಾಕಷ್ಟು ಜಾಗವನ್ನು ಖಾಲಿ ಬಿಡಲಾಗಿದೆ, ಕ್ಲಿನಿಕ್‌ನಲ್ಲಿ ನಡೆಸಲಾದ ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ (MTP) ಕಾರ್ಯವಿಧಾನಗಳ ರೋಗಿಗಳ ವಿವರಗಳನ್ನು ಹೊಂದಿರುವ ಎರಡು ರೆಜಿಸ್ಟರ್‌ಗಳು ಮತ್ತು ಹಲವಾರು ನಿಷೇಧಿತ ಔಷಧಿಗಳು ಮತ್ತು ಚುಚ್ಚುಮದ್ದುಗಳನ್ನು ಇಲ್ಲಿಂದ ವಶ ಪಡಿಸಲಾಗಿದೆ .

ಅಗರ್ವಾಲ್ ಅವರ ನಿವಾಸ ಮತ್ತು ಕ್ಲಿನಿಕ್‌ನಿಂದ ಅವಧಿ ಮೀರಿದ ಸರ್ಜಿಕಲ್ ಬ್ಲೇಡ್‌ಗಳು, ಹಲವಾರು ರೋಗಿಗಳ ಮೂಲ ಪ್ರಿಸ್ಕ್ರಿಪ್ಷನ್ ಸ್ಲಿಪ್‌ಗಳು, 47 ವಿವಿಧ ಬ್ಯಾಂಕ್‌ಗಳ ಚೆಕ್‌ಬುಕ್‌ಗಳು, ವಿವಿಧ ಬ್ಯಾಂಕ್‌ಗಳ 54 ಎಟಿಎಂ ಕಾರ್ಡ್‌ಗಳು, ಬ ಅಂಚೆ ಕಚೇರಿಗಳ ಪಾಸ್‌ಬುಕ್‌ಗಳು ಮತ್ತು ಆರು ಪಿಒಎಸ್ ಟರ್ಮಿನಲ್ ಕ್ರೆಡಿಟ್ ಕಾರ್ಡ್ ಯಂತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ