ದೆಹಲಿ: ಎರಡು ದಿನದಿಂದ ಮಳೆಯಾಗುತ್ತಿದ್ದರೂ, ಗಾಳಿಯ ಗುಣಮಟ್ಟ ಕಳಪೆಯಾಗಿಯೇ ಉಳಿದಿದೆ

ದೆಹಲಿಯಲ್ಲಿ ವಾಯುಮಾಲಿನ್ಯ ಅತ್ಯಂತ ಕಳಪೆ ಮಟ್ಟಕ್ಕೇರಿದೆ. ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿರುವ ಕಾರಣ, ಗಾಳಿಯ ಗುಣಮಟ್ಟ ಸುಧಾರಿಸಬಹುದು ಎಂದು ಅಂದಾಜಿಸಲಾಗಿತ್ತು, ಆದರೆ ಯಾವುದೇ ಬದಲಾವಣೆ ಕಂಡುಬಂದಿಲ್ಲ. ದೆಹಲಿಯಾದ್ಯಂತ ಗಾಳಿಯ ಗುಣಮಟ್ಟವು 'ಕಳಪೆ' ವಿಭಾಗದಲ್ಲಿ ಮುಂದುವರೆದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹೇಳಿದೆ.

ದೆಹಲಿ: ಎರಡು ದಿನದಿಂದ ಮಳೆಯಾಗುತ್ತಿದ್ದರೂ, ಗಾಳಿಯ ಗುಣಮಟ್ಟ ಕಳಪೆಯಾಗಿಯೇ ಉಳಿದಿದೆ
ದೆಹಲಿ ವಾಯುಮಾಲಿನ್ಯ Image Credit source: Mint
Follow us
ನಯನಾ ರಾಜೀವ್
|

Updated on:Nov 12, 2023 | 11:41 AM

ದೆಹಲಿಯಲ್ಲಿ ವಾಯುಮಾಲಿನ್ಯ ಅತ್ಯಂತ ಕಳಪೆ ಮಟ್ಟಕ್ಕೇರಿದೆ. ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿರುವ ಕಾರಣ, ಗಾಳಿಯ ಗುಣಮಟ್ಟ ಸುಧಾರಿಸಬಹುದು ಎಂದು ಅಂದಾಜಿಸಲಾಗಿತ್ತು, ಆದರೆ ಯಾವುದೇ ಬದಲಾವಣೆ ಕಂಡುಬಂದಿಲ್ಲ. ದೆಹಲಿಯಾದ್ಯಂತ ಗಾಳಿಯ ಗುಣಮಟ್ಟವು ‘ಕಳಪೆ’ ವಿಭಾಗದಲ್ಲಿ ಮುಂದುವರೆದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹೇಳಿದೆ.

ಆನಂದ್ ವಿಹಾರದಲ್ಲಿ AQI 266 ರಷ್ಟಿದ್ದರೆ, ಆರ್‌ಕೆ ಪುರಂನಲ್ಲಿ ಭಾನುವಾರ ಬೆಳಗ್ಗೆ 07.00 ಗಂಟೆಗೆ 241 ರಲ್ಲಿ ದಾಖಲಾಗಿದೆ. ಅದೇ ರೀತಿ, ಪಂಜಾಬಿ ಬಾಗ್ ಪ್ರದೇಶದಲ್ಲಿ ಇದು 233 ನಲ್ಲಿತ್ತು ಮತ್ತು ITO ಪ್ರದೇಶದಲ್ಲಿ ಇದು 227 ನಲ್ಲಿ ದಾಖಲಾಗಿದೆ. ಶುಕ್ರವಾರದ ಮಳೆಯ ನಂತರ ಶನಿವಾರ ದೆಹಲಿಯ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆಯಾಗಿದೆ.

ಮಳೆಯು ಸ್ವಲ್ಪ ಬಿಡುವು ನೀಡಿದೆ, ದೆಹಲಿಯ ಗಾಳಿಯ ಗುಣಮಟ್ಟವು ನಿವಾಸಿಗಳಿಗೆ ಆತಂಕದ ವಿಷಯವಾಗಿದೆ. ದೆಹಲಿ ಸರ್ಕಾರವು ಮಾಲಿನ್ಯ-ವಿರೋಧಿ ಕ್ರಮಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಗಳನ್ನು ಮಾಡುತ್ತಿದೆ. ಕೃತಕ ನೀರಿವ ಸಿಂಪಡಣೆ ಬಗ್ಗೆಯೂ ಆಲೋಚಿಸಿದೆ.

ಮತ್ತಷ್ಟು ಓದಿ: ಹೆಚ್ಚು ಹೊಗೆ ಬಿಡುವ ವಾಹನಗಳು ಯುಪಿಯಿಂದ ದೆಹಲಿಗೆ ಬರುತ್ತಿದೆ, ತಕ್ಷಣವೇ ನಿಲ್ಲಿಸಿ: ಯೋಗಿಗೆ ದೆಹಲಿ ಸರ್ಕಾರ ಮನವಿ

ದೆಹಲಿಯ ಅಪಾಯಕಾರಿ ಗಾಳಿಯ ಗುಣಮಟ್ಟದ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿದೆ ಮತ್ತು ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ರೈತರು ಹುಲ್ಲು ಸುಡುವುದನ್ನು ತಕ್ಷಣವೇ ನಿಲ್ಲಿಸಬೇಕು, ಇದು ವಾಯುಮಾಲಿನ್ಯಕ್ಕೆ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದೆ ಎಂದು ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:40 am, Sun, 12 November 23