ಕೊರೊನಾ ಭೀತಿ, ಡ್ರ್ಯಾಗನ್ ಫ್ರೂಟ್ಗೆ ಮುಗಿಬಿದ್ದ ಜನ! ಬೆಲೆ ಗಗನಕ್ಕೆ..
ಕೊಲ್ಕತ್ತಾ: ದೇಶದಲ್ಲಿ ಕೊರೊನಾ ಮಹಾಮಾರಿ ಎಗ್ಗಿಲ್ಲದೆ ಹರಡುತ್ತಿದೆ. ಮಾನವಕುಲವನ್ನು ತನ್ನ ಕಬಂಧಬಾಹುವಿನಲ್ಲಿ ಅಪ್ಪಿಕೊಳ್ಳುತ್ತಾ ಉಸಿರುಗಟ್ಟುವಂತೆ ಮಾಡುತ್ತಿದೆ. ಇತ್ತ ಅದನ್ನು ಬಗ್ಗುಬಡಿಯುವ ಔಷಧಿಯನ್ನು ಕಂಡುಹಿಡಿಯುವ ಕಾರ್ಯ ಭರದಿಂದ ಸಾಗಿದೆ. ಆದರೆ, ತಜ್ಞರ ಪ್ರಕಾರ ಅದು ಪೂರ್ಣ ಪ್ರಮಾಣದಲ್ಲಿ ದೊರಕಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ, ಜನರು ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಾನಾ ದಾರಿಗಳನ್ನು ಹುಡುಕುತ್ತಿದ್ದಾರೆ. ಅಂತೆಯೇ, ಇದೀಗ ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಂದಿರುವ ಮತ್ತೊಂದು ಅಸ್ತ್ರವೆಂದರೆ ಅದು ಡ್ರ್ಯಾಗನ್ ಫ್ರೂಟ್. ಹೌದು, […]
ಕೊಲ್ಕತ್ತಾ: ದೇಶದಲ್ಲಿ ಕೊರೊನಾ ಮಹಾಮಾರಿ ಎಗ್ಗಿಲ್ಲದೆ ಹರಡುತ್ತಿದೆ. ಮಾನವಕುಲವನ್ನು ತನ್ನ ಕಬಂಧಬಾಹುವಿನಲ್ಲಿ ಅಪ್ಪಿಕೊಳ್ಳುತ್ತಾ ಉಸಿರುಗಟ್ಟುವಂತೆ ಮಾಡುತ್ತಿದೆ. ಇತ್ತ ಅದನ್ನು ಬಗ್ಗುಬಡಿಯುವ ಔಷಧಿಯನ್ನು ಕಂಡುಹಿಡಿಯುವ ಕಾರ್ಯ ಭರದಿಂದ ಸಾಗಿದೆ. ಆದರೆ, ತಜ್ಞರ ಪ್ರಕಾರ ಅದು ಪೂರ್ಣ ಪ್ರಮಾಣದಲ್ಲಿ ದೊರಕಲು ಸಾಕಷ್ಟು ಸಮಯ ಬೇಕಾಗುತ್ತದೆ.
ಹೀಗಾಗಿ, ಜನರು ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಾನಾ ದಾರಿಗಳನ್ನು ಹುಡುಕುತ್ತಿದ್ದಾರೆ. ಅಂತೆಯೇ, ಇದೀಗ ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಂದಿರುವ ಮತ್ತೊಂದು ಅಸ್ತ್ರವೆಂದರೆ ಅದು ಡ್ರ್ಯಾಗನ್ ಫ್ರೂಟ್.
ಹೌದು, ಕಳೆದ ಕೆಲವು ವರ್ಷಗಳ ಹಿಂದೆ ದೇಶಕ್ಕೆ ಕಾಲಿಟ್ಟ ಈ ಸ್ಪೆಷಲ್ ಹಣ್ಣು ಇದೀಗ ಬಹುಬೇಡಿಕೆಯಲ್ಲಿದೆ. ಅದರಲ್ಲೂ ಕೊರೊನಾ ಬಂದ ಮೇಲಂತೂ ಇದು ಏನಿಲ್ಲ ಅಂದ್ರೂ ಕೆ.ಜಿ. ಗೆ 400 ರೂಪಾಯಿಯಂತೆ ಮಾರಾಟವಾಗುತ್ತಿದೆ.
ಅಂದ ಹಾಗೆ, ಈ ಹಣ್ಣಿನ ವಿಶೇಷತೆ ಏನಂತಿರಾ? ಡ್ರ್ಯಾಗನ್ ಫ್ರೂಟ್ನಲ್ಲಿ ಉರಿ ಹೊನ್ನು (ಮ್ಯಾಗ್ನೀಷಿಯಂ) ಮತ್ತು ವಿಟಮಿನ್ ಸಿ ಸೇರಿದಂತೆ ಹಲವಾರು ಬೇರೆ ಬೇರೆ ಪೋಷಕಾಂಶಗಳಿವೆ. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕೊರೊನಾ ಸೋಂಕು ತಗುಲದಂತೆ ಸಹಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಇದರಿಂದ ಈ ಹಣ್ಣು ಸಾಕಷ್ಟು ಬೇಡಿಕೆ ಬಂದಿದ್ದು ಪಶ್ಚಿಮ ಬಂಗಾಳದ ಸಿಲಿಗುರಿ ಪ್ರಾಂತ್ಯದ ರೈತರು ಇದನ್ನು ಬೆಳೆಯಲು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಸ್ಥಳೀಯ ಕೃಷಿ ವಿದ್ಯಾಯಲಗಳ ಸಹ ರೈತರಿಗೆ ತರಬೇತಿ ನೀಡಲು ಮುಂದಾಗಿದ್ದು ಅವರ ಆದಾಯ ಹೆಚ್ಚಿಸಲು ನೆರವಾಗುತ್ತಿದೆ.