ನಾಗಾಲ್ಯಾಂಡ್​ನ ಪೂರ್ವ ಭಾಗದ ಜನರಿಂದ ಪ್ರತ್ಯೇಕ ರಾಜ್ಯದ ಬೇಡಿಕೆ ತಪ್ಪೇನಲ್ಲ; ಸಿಎಂ ನೆಫಿಯು ರಿಯೋ

ನಾಗಾಗಳಾದ ನಾವು ನಮ್ಮ ಮನಸ್ಸಿನಿಂದ ಮಾತನಾಡುತ್ತೇವೆ. ಪೂರ್ವ ನಾಗಾಲ್ಯಾಂಡ್ ಭಾಗದ ಜನರು ಅವರ ಆಲೋಚನೆ ಮತ್ತು ಬಯಕೆ ಏನೆಂದು ಹೇಳುವುದು ತಪ್ಪಲ್ಲ. ಅವರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಸಿಎಂ ನೆಫಿಯು ರಿಯೋ ಹೇಳಿದ್ದಾರೆ.

ನಾಗಾಲ್ಯಾಂಡ್​ನ ಪೂರ್ವ ಭಾಗದ ಜನರಿಂದ ಪ್ರತ್ಯೇಕ ರಾಜ್ಯದ ಬೇಡಿಕೆ ತಪ್ಪೇನಲ್ಲ; ಸಿಎಂ ನೆಫಿಯು ರಿಯೋ
ನಾಗಾಲ್ಯಾಂಡ್ ಸಿಎಂ ನೆಫಿಯು ರಿಯೋ
Edited By:

Updated on: Oct 22, 2022 | 9:56 AM

ನಾಗಾಲ್ಯಾಂಡ್: ನಾಗಾಲ್ಯಾಂಡ್​ನ ಪೂರ್ವ ಭಾಗದ (Eastern Nagaland) ಜನರ ಪ್ರತ್ಯೇಕ ರಾಜ್ಯದ ಬೇಡಿಕೆ ತಪ್ಪೇನಲ್ಲ ಎಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೋ (CM Neiphiu Rio) ಹೇಳಿದ್ದಾರೆ. ನಾಗಾಗಳಾದ ನಾವು ನಮ್ಮ ಮನಸ್ಸಿನಿಂದ ಮಾತನಾಡುತ್ತೇವೆ. ಪೂರ್ವ ನಾಗಾಲ್ಯಾಂಡ್ ಭಾಗದ ಜನರು ಅವರ ಆಲೋಚನೆ ಮತ್ತು ಬಯಕೆ ಏನೆಂದು ಹೇಳುವುದು ತಪ್ಪಲ್ಲ. ಅವರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ನೆಫಿಯು ರಿಯೋ ಹೇಳಿದ್ದಾರೆ.

ಪೂರ್ವ ನಾಗಾಲ್ಯಾಂಡ್ 6 ಜಿಲ್ಲೆಗಳನ್ನು ಒಳಗೊಂಡಿದೆ. ಮೋನ್, ತುಯೆನ್ಸಾಂಗ್, ಕಿಫಿರ್, ಲಾಂಗ್ಲೆಂಗ್, ನೋಕ್ಲಾಕ್ ಮತ್ತು ಶಮಾಟರ್ ಈ ಜಿಲ್ಲೆಗಳಲ್ಲಿ 7 ಬುಡಕಟ್ಟುಗಳಾದ ಚಾಂಗ್, ಖಿಯಾಮ್ನಿಯುಂಗಾನ್, ಕೊನ್ಯಾಕ್, ಫೋಮ್, ಸಾಂಗ್ಟಮ್, ಟಿಖಿರ್ ಮತ್ತು ಯಿಮ್ಖಿಯುಂಗ್ ವಾಸಿಸುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ನಾಗಾಲ್ಯಾಂಡ್: ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಮಹಿಳಾ ಮೋರ್ಚಾ ಮುಖ್ಯಸ್ಥೆ; ಇದು ಕ್ರೈಸ್ತರ ರಾಜ್ಯಕ್ಕಾದ ಅವಮಾನ ಎಂದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ

ಇಲ್ಲಿನ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ (ENPO) ನಂತರದ ಹಾರ್ನ್‌ಬಿಲ್ ಉತ್ಸವದಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ. ಹಾಗೇ, ಪ್ರತ್ಯೇಕ ರಾಜ್ಯಕ್ಕಾಗಿ ತಮ್ಮ ಬೇಡಿಕೆಯನ್ನು ಬೆಂಬಲಿಸಿ ಈ ಪ್ರದೇಶದ 20 ಶಾಸಕರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ನಾವು ಅವರೊಂದಿಗೆ ಮಾತನಾಡಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಗಾಲ್ಯಾಂಡ್​ಗೆ ಭೇಟಿ ನೀಡುವ ಸಂದರ್ಭದಲ್ಲಿ ENPOಗೆ ಅಪಾಯಿಂಟ್‌ಮೆಂಟ್ ನೀಡುತ್ತೇವೆ. ಪ್ರಧಾನಿ ಕೂಡ ಬಂದರೆ ಅವರೊಂದಿಗೆ ಮಾತುಕತೆ ನಡೆಸುವಂತೆ ಮನವಿ ಮಾಡುತ್ತೇವೆ ಎಂದು ರಿಯೊ ಹೇಳಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮೊದಲೇ ಪೂರ್ವ ನಾಗಾಲ್ಯಾಂಡ್‌ನಲ್ಲಿ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಾಗಿದೆ. ಈ ಪ್ರದೇಶದ 20 ಶಾಸಕರು ತಮ್ಮ ಬೇಡಿಕೆ ಈಡೇರುವವರೆಗೆ ಯಾವುದೇ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ನಾಗಾಲ್ಯಾಂಡ್​​ನ ಸಾಂಪ್ರದಾಯಿಕ ನೃತ್ಯ ತಂಡದೊಂದಿಗೆ ಹೆಜ್ಜೆ ಹಾಕಿದ ಸಚಿವ ತೆಮ್ಜೆನ್ ಇಮ್ನಾ

ಕೇಂದ್ರ ಗೃಹ ಸಚಿವರು ಅಥವಾ ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶಿತ ಭೇಟಿಗೆ ಸಂಬಂಧಿಸಿದಂತೆ ನಾಗಾಲ್ಯಾಂಡ್​ ಸರ್ಕಾರಕ್ಕೆ ಯಾವುದೇ ಅಂತಿಮ ವೇಳಾಪಟ್ಟಿ ಸಿಕ್ಕಿಲ್ಲ ಎಂದು ಸಿಎಂ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ