ಸಿಎಂ ಚಂದ್ರಶೇಖರರಾವ್,​ ನಡ್ಡಾ ಅವರ ಕ್ಷಮೆಯಾಚಿಸಬೇಕು -ಆಡಳಿತಾರೂಢ ಟಿಆರ್‌ಎಸ್ ವಿರುದ್ಧ ಕೇಂದ್ರ ಸಚಿವ ಜೋಶಿ ತೀವ್ರ ವಾಗ್ದಾಳಿ

ನಡ್ಡಾ ಸಾಂಕೇತಿಕ ಸಮಾಧಿಗೆ ಸಿಎಂ ಚಂದ್ರಶೇಖರರಾವ್ ನಾಯಕತ್ವದ ಟಿಆರ್‌ಎಸ್ ಪಕ್ಷವನ್ನು ದೂಷಿಸಿದ ಸಚಿವ ಜೋಶಿ, ಇದು ರಾಜ್ಯದ ಆಡಳಿತ ಪಕ್ಷದ "ಮಟ್ಟ" ಮಾತ್ರ ತೋರಿಸುತ್ತದೆ ಎಂದು ಹೇಳಿದರು. ರಾಜಕೀಯದಲ್ಲಿ ಟೀಕೆ ಸಹಜ ಆದರೆ ಸಮಾಧಿ ಕಟ್ಟುವುದು ಪಕ್ಷ ಮತ್ತು ನಾಯಕನ ಸಂಸ್ಕೃತಿಯ ಬಗ್ಗೆ ಹೇಳುತ್ತದೆ ಎಂದರು.

ಸಿಎಂ ಚಂದ್ರಶೇಖರರಾವ್,​ ನಡ್ಡಾ ಅವರ ಕ್ಷಮೆಯಾಚಿಸಬೇಕು -ಆಡಳಿತಾರೂಢ ಟಿಆರ್‌ಎಸ್ ವಿರುದ್ಧ ಕೇಂದ್ರ ಸಚಿವ ಜೋಶಿ ತೀವ್ರ ವಾಗ್ದಾಳಿ
ಸಚಿವ ಪ್ರಲ್ಹಾದ್ ಜೋಶಿ
Follow us
TV9 Web
| Updated By: ಆಯೇಷಾ ಬಾನು

Updated on:Oct 22, 2022 | 8:01 AM

ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಚಿತ್ರವಿರುವ ಸಾಂಕೇತಿಕ ಸಮಾಧಿಯ ಬಗ್ಗೆ ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Union Minister Pralhad Joshi) ಆಡಳಿತಾರೂಢ ಟಿಆರ್‌ಎಸ್ (TRS in Telangana) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಡ್ಡಾ ಅವರು (J P Nadda) ಕೇಂದ್ರ ಆರೋಗ್ಯ ಸಚಿವರಾಗಿದ್ದಾಗ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಸಂಶೋಧನಾ ಕೇಂದ್ರ (Research centre on fluorosis) ಸ್ಥಾಪಿಸುವುದಾಗಿ ಭರವಸೆ ನೀಡಿದ್ದರೂ ಕೇಂದ್ರ ಭರವಸೆ ಈಡೇರಿಸದಿರುವುದನ್ನು ವಿರೋಧಿಸಿ ಸಾಂಕೇತಿಕ ಸಮಾಧಿ ಮೇಲೆ ಪ್ರತಿಭಟನೆ ನಡೆಸಲಾಗಿತ್ತು. ಬಿಜೆಪಿಯ ‘ಲೋಕಸಭಾ ಪ್ರವಾಸ ಯೋಜನೆ’ಯ ಭಾಗವಾಗಿ ಶುಕ್ರವಾರ ಹೈದರಾಬಾದ್‌ಗೆ ಭೇಟಿ ನೀಡಿದ್ದ ಜೋಶಿ ಅವರು ಕೇಂದ್ರದ ಸ್ಥಾಪನೆಗೆ ಎನ್‌ಡಿಎ ಸರ್ಕಾರ ಬದ್ಧವಾಗಿದೆ ಮತ್ತು ಟಿಆರ್‌ಎಸ್ ಸರ್ಕಾರ ಅದಕ್ಕೆ ಭೂ ಮಂಜೂರಾತಿ ಮಾಡಿಲ್ಲ ಎಂದು ಆರೋಪಿಸಿದರು.

“ಫ್ಲೋರೋಸಿಸ್ ಬಗ್ಗೆ ಸಂಶೋಧನಾ ಕೇಂದ್ರ ಸ್ಥಾಪನೆಗಾಗಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬಹುಶಃ ಅಂದಿನ ಆರೋಗ್ಯ ಸಚಿವರಾಗಿ ಭರವಸೆ ನೀಡಿದ್ದರು. ಇಂದು ಭಾರತ ಸರ್ಕಾರದ ಭಾಗವಾಗಿ ನಾವು ಆ ಭರವಸೆಗೆ ತುಂಬಾ ಬದ್ಧರಾಗಿದ್ದೇವೆ. ಆದರೆ ಅವರು ಭೂಮಿಯನ್ನು ಒದಗಿಸಿಲ್ಲ. ಅಂತಿಮವಾಗಿ ಭೂಮಿ ರಾಜ್ಯ ವಿಷಯವಾಗಲಿದೆ,’’ ಎಂದು ಸುದ್ದಿಗಾರರಿಗೆ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.

ಸಿಎಂ ಚಂದ್ರಶೇಖರ್ ರಾವ್ ನಡ್ಡಾ ಅವರ ಕ್ಷಮೆಯಾಚಿಸಬೇಕು- ಸಚಿವ ಜೋಶಿ

ಸಾಂಕೇತಿಕ ಸಮಾಧಿಗೆ ಸಿಎಂ ಚಂದ್ರಶೇಖರರಾವ್ ನಾಯಕತ್ವದ ಟಿಆರ್‌ಎಸ್ ಪಕ್ಷವನ್ನು ದೂಷಿಸಿದ ಅವರು, ಇದು ರಾಜ್ಯದ ಆಡಳಿತ ಪಕ್ಷದ “ಮಟ್ಟ” ಮಾತ್ರ ತೋರಿಸುತ್ತದೆ ಎಂದು ಹೇಳಿದರು. ರಾಜಕೀಯದಲ್ಲಿ ಟೀಕೆ ಸಹಜ ಆದರೆ ಸಮಾಧಿ ಕಟ್ಟುವುದು (Nadda grave) ಪಕ್ಷ ಮತ್ತು ನಾಯಕನ ಸಂಸ್ಕೃತಿಯ ಬಗ್ಗೆ ಹೇಳುತ್ತದೆ ಎಂದರು. ಸಾಂಕೇತಿಕ ಸಮಾಧಿಯನ್ನು ಖಂಡಿಸಿದ ಕೇಂದ್ರ ಸಚಿವ ಜೋಶಿ, ಟಿಆರ್‌ಎಸ್ ಅಧ್ಯಕ್ಷ ಮತ್ತು ಸಿಎಂ ಚಂದ್ರಶೇಖರ್ ರಾವ್ ಇದಕ್ಕಾಗಿ ನಡ್ಡಾ ಅವರ ಕ್ಷಮೆಯಾಚಿಸಬೇಕು ಎಂದು ಹೇಳಿದರು.

ಅವರು ಇತ್ತೀಚೆಗೆ ಸರ್ಕಾರಿ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದಾಗ ಕೆಲವು ಮಹಿಳಾ ಅಭ್ಯರ್ಥಿಗಳು ತಮ್ಮ ಪವಿತ್ರ ‘ಮಂಗಲಸೂತ್ರ’ವನ್ನು ತೆಗೆದುಹಾಕಲು ಕೇಳಿದರು. ಇದರಿಂದ ಎಐಎಂಐಎಂ ಮುಂದೆ ಟಿಆರ್‌ಎಸ್ ಶರಣಾಯಿತು ಎಂದು ಜೋಶಿ ಆರೋಪಿಸಿದ್ದಾರೆ.

ಟಿಆರ್‌ಎಸ್ ಕುಟುಂಬ ಪಕ್ಷ – ಅದನ್ನು ‘ರಾವ್ ಸಮಿತಿ’ ಎಂದು ಹೆಸರಿಸಬಹುದು

ಟಿಆರ್‌ಎಸ್‌ಗೆ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಮರುನಾಮಕರಣ ಮಾಡಿದ ಮೇಲೆ, ಟಿಆರ್‌ಎಸ್ ಕುಟುಂಬದ ಪಕ್ಷವಾಗಿರುವುದರಿಂದ ಅದನ್ನು ‘ರಾವ್ ಸಮಿತಿ’ ಎಂದು ಹೆಸರಿಸಬಹುದು ಎಂದು ಪ್ರತಿಪಾದಿಸಿದರು. ಟಿಆರ್‌ಎಸ್ ಆಡಳಿತದಲ್ಲಿ ತೆಲಂಗಾಣದಲ್ಲಿ ಯಾವುದೇ ಉತ್ತಮ ಬದಲಾವಣೆಯಾಗಿಲ್ಲ, ಆದರೆ ಪಕ್ಷದ ಹೆಸರು ಬದಲಾಗಿದೆ ಎಂದು ಆರೋಪಿಸಿದರು

ತೆಲಂಗಾಣದ ಜನರ ಬದುಕನ್ನು ಬದಲಾಯಿಸುವ ಭರವಸೆ ನೀಡಿ ಟಿಆರ್‌ಎಸ್ ಅಧಿಕಾರಕ್ಕೆ ಬಂದಿದೆ. ಅವರು ರಾಜ್ಯವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದಾರೆ ಮತ್ತು BRS ಎಂದು ಹೆಸರನ್ನು ಮಾತ್ರ ಬದಲಾಯಿಸಿದ್ದಾರೆ. ಇದು ಹೇಗೆ ಸಹಾಯ ಮಾಡುತ್ತದೆ? ಪಕ್ಷದ ಹೆಸರು ಬದಲಿಸುವ ಬದಲು ಜನರಿಗಾಗಿ ಕೆಲಸ ಮಾಡುವತ್ತ ಗಮನ ಹರಿಸಬೇಕಿತ್ತು.

ಚಂದ್ರಶೇಖರ ರಾವ್ ಅವರ ನೇತೃತ್ವದಲ್ಲಿ ಬಿಆರ್‌ಎಸ್ ಪಕ್ಷದ ಸುಳ್ಳು ಭರವಸೆಗಳಿಂದ ತೆಲಂಗಾಣದ ಜನರು ಮೋಸ ಹೋಗಿದ್ದಾರೆ. ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದು, ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ. ನವೆಂಬರ್ 3ರಂದು ನಡೆಯಲಿರುವ ತೆಲಂಗಾಣದ ಮುನುಗೋಡು ಅಸೆಂಬ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Published On - 7:51 am, Sat, 22 October 22