AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

₹1 ಕೋಟಿ ಲಂಚ ಪ್ರಕರಣ: ಕಾರ್ ಚೇಸ್ ಮಾಡಿ ತನಿಖಾ ಸಂಸ್ಥೆ ಅಧಿಕಾರಿಯನ್ನು ಬಂಧಿಸಿದ ತಮಿಳುನಾಡು ಪೊಲೀಸ್

ಮಧುರೈನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾರಿ ನಿರ್ದೇಶನಾಲಯದ ಅಂಕಿತ್ ತಿವಾರಿ ಎಂಬ ಅಧಿಕಾರಿ, ಪ್ರಕರಣವನ್ನು ಕೈಬಿಡಲು ₹ 1 ಕೋಟಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಅಧಿಕಾರಿ ಲಂಚದ ಹಣದ ಒಂದು ಭಾಗ 20ಕೋಟಿ ಸ್ವೀಕರಿಸುತ್ತಿದ್ದಾಗ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

₹1 ಕೋಟಿ ಲಂಚ ಪ್ರಕರಣ: ಕಾರ್ ಚೇಸ್ ಮಾಡಿ ತನಿಖಾ ಸಂಸ್ಥೆ ಅಧಿಕಾರಿಯನ್ನು ಬಂಧಿಸಿದ ತಮಿಳುನಾಡು ಪೊಲೀಸ್
ಇಡಿ
ರಶ್ಮಿ ಕಲ್ಲಕಟ್ಟ
|

Updated on: Dec 01, 2023 | 8:00 PM

Share

ಚೆನ್ನೈ ಡಿಸೆಂಬರ್ 01 : ₹ 20 ಲಕ್ಷ ಲಂಚ (Bribe Case) ಪಡೆದ ಆರೋಪದ ಮೇಲೆ ದಕ್ಷಿಣ ತಮಿಳುನಾಡಿನ (Tamil nadu) ಮಧುರೈನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಯನ್ನು ಬಂಧಿಸಲಾಗಿದೆ. ಈ ಅಧಿಕಾರಿಯು ನೆರೆಯ ದಿಂಡಿಗಲ್ ಜಿಲ್ಲೆಯ ಸರ್ಕಾರಿ ವೈದ್ಯರನ್ನು ಒಳಗೊಂಡಿರುವ ಅಕ್ರಮ ಆದಾಯದ ಪ್ರಕರಣವನ್ನು ತನಿಖೆ ಮಾಡುತ್ತಿದ್ದರು. ಅಂಕಿತ್ ತಿವಾರಿ ಎಂಬ ಅಧಿಕಾರಿ, ಪ್ರಕರಣವನ್ನು ಕೈಬಿಡಲು ₹ 1 ಕೋಟಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದಿಂದ ಶೀಘ್ರದಲ್ಲೇ ಹೇಳಿಕೆಯನ್ನು ನಿರೀಕ್ಷಿಸಲಾಗಿದೆ. ಆದಾಗ್ಯೂ, ತಿವಾರಿಯನ್ನು ಹೆಚ್ಚಿನ ವೇಗದ ಕಾರ್ ಚೇಸ್ ನಂತರ ಬಂಧಿಸಲಾಯಿತು ಎಂದು ನಿರ್ದೇಶನಾಲಯದ ಮೂಲಗಳು ತಿಳಿಸಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಅಧಿಕಾರಿಗಳು ಆತನಿಗಾಗಿ ಬಲೆ ಬೀಸಿದ್ದು ರಾಜ್ಯ ಹೆದ್ದಾರಿಯಲ್ಲಿ ಡ್ರಾಪ್-ಆಫ್ ಪಾಯಿಂಟ್‌ನಲ್ಲಿ ಲಂಚದ ಮೊದಲ ಭಾಗವಾದ ₹ 20 ಲಕ್ಷವನ್ನು ಸ್ವೀಕರಿಸಿದ ನಂತರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

ಮದ್ರಾಸ್ ಹೈಕೋರ್ಟ್‌ನಲ್ಲಿ ರಾಜ್ಯ Vs ಇಡಿ

ರಾಜ್ಯ ಸರ್ಕಾರ ಮತ್ತು ಕೇಂದ್ರ ತನಿಖಾ ಸಂಸ್ಥೆಯು ಐದು ಜಿಲ್ಲಾಧಿಕಾರಿಗಳಿಗೆ ನೀಡಿದ ಸಮನ್ಸ್‌ ಬಗ್ಗೆ ವಿವಾದ ಆಗಿರುವ ಹೊತ್ತಲ್ಲೇ ತಿವಾರಿಯವರ ಬಂಧನ ನಡೆದಿದೆ. ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ತನಿಖೆಗೆ ಸಂಬಂಧಿಸಿದಂತೆ ಐದು ಜಿಲ್ಲಾಧಿಕಾರಿಗಳಿಗೆ ನೀಡಿದ ಸಮನ್ಸ್‌ ನೀಡಲಾಗಿತ್ತು. ಕೆಲವು ದಿನಗಳ ಹಿಂದೆಯಷ್ಟೇ ಮದ್ರಾಸ್ ಹೈಕೋರ್ಟ್ ಈ ವಾರ ಮೂರು ವಾರಗಳ ಕಾಲ ಸಮನ್ಸ್‌ಗೆ ತಡೆ ನೀಡಿದೆ.

ಇಡಿಗೆ ಪ್ರತಿಕ್ರಿಯೆ ನೀಡಲು ಅರಿಯಲೂರು, ವೆಲ್ಲೂರು, ತಂಜಾವೂರು, ಕರೂರ್ ಮತ್ತು ತಿರುಚಿರಾಪಳ್ಳಿ ಜಿಲ್ಲೆಗಳ ಕಲೆಕ್ಟರ್‌ಗಳು ಮತ್ತು ರಾಜ್ಯ ಸರ್ಕಾರಕ್ಕೆ ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ.

ಆದಾಗ್ಯೂ, ಇಡಿ ಅಂತಹ ಬೇಡಿಕೆಗಳನ್ನು ಮಾಡುವ ಅಧಿಕಾರವನ್ನು ಹೊಂದಿಲ್ಲ. ಐದು ಜಿಲ್ಲಾಧಿಕಾರಿಗಳಿಗೆ ಅದರ ಸಮನ್ಸ್ ಫೆಡರಲಿಸಂನ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ರಾಜ್ಯವು ವಾದಿಸಿತು. ಕೇಂದ್ರ ಏಜೆನ್ಸಿಯು ಅಂತಹ ವಿವರಗಳನ್ನು ಅಗತ್ಯವಿದ್ದಲ್ಲಿ, ರಾಜ್ಯ ಸರ್ಕಾರದ ಮೂಲಕ ಮಾತ್ರ ಪಡೆಯಬೇಕು ಮತ್ತು ನಂತರದ ಒಪ್ಪಿಗೆಯಿಲ್ಲದೆ ಅದು ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ವಾದಿಸಲಾಯಿತು.

ಇದನ್ನೂ ಓದಿ: ತಮಿಳುನಾಡು: ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯ, ವೆಂಟಿಲೇಟರ್​ನಲ್ಲಿದ್ದ ಮಹಿಳೆ ಸಾವು

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರ ಸಮೀಕ್ಷೆಯನ್ನು ಉಲ್ಲೇಖಿಸಿ, ಎರಡು ವರ್ಷಗಳಲ್ಲಿ ತಮಿಳುನಾಡಿನಾದ್ಯಂತ ₹ 4,500 ಕೋಟಿ ಅಕ್ರಮ ಮರಳು ಗಣಿಗಾರಿಕೆ ನಡೆದಿದೆ ಎಂದು ಇಡಿ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ