ಡೆಮಾಕ್ರಸಿ ಅಲ್ಲ, ಡೆಮೊ ಕುರ್ಸಿ: ಮೋದಿ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ

|

Updated on: Jun 07, 2024 | 5:37 PM

ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಜೈರಾಮ್ ರಮೇಶ್, "2024 ರ ಚುನಾವಣೆ ನರೇಂದ್ರ ಮೋದಿಯವರಿಗೆ ಭಾರೀ ಸೋಲು ಆಗಿದೆ. ಅವರು 1/3 ನೇ ಪ್ರಧಾನಿ -ನರೇಂದ್ರ-ನಾಯ್ಡು-ನಿತೀಶ್... ಅವರು ಮೈತ್ರಿ ನಡೆಸಲು ಸಾಧ್ಯವಾಗುವುದಿಲ್ಲ. ಅವರು (ಬಿಜೆಪಿ) ಡೆಮೊ-ಕುರ್ಸಿಯನ್ನು ನಂಬುತ್ತಾರೆ, ಆದರೆ ಡೆಮಾಕ್ರಸಿಯನ್ನು ನಂಬುವುದಿಲ್ಲ ಎಂದಿದ್ದಾರೆ.

ಡೆಮಾಕ್ರಸಿ ಅಲ್ಲ, ಡೆಮೊ ಕುರ್ಸಿ: ಮೋದಿ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ
ಜೈರಾಮ್ ರಮೇಶ್
Follow us on

ದೆಹಲಿ ಜೂನ್ 07: 2024 ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಬಿಜೆಪಿಗೆ “ಪ್ರಚಂಡ ಹಾರ್” (ಭಾರೀ ಸೋಲು) ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Jairam Ramesh) ಶುಕ್ರವಾರ ಚುನಾಯಿತ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಬಿಜೆಪಿಯನ್ನು (BJP) ಟೀಕಿಸಿದ್ದಾರೆ. ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಜತೆ ಸೇರಿ ಸರ್ಕಾರ ರಚಿಸುತ್ತಿರುವ ಮೋದಿಯನ್ನು “ಮೂರನೇ ಒಂದು ಭಾಗದ ಪ್ರಧಾನಿ” ಎಂದು ಕಾಂಗ್ರೆಸ್ ನಾಯಕ ಲೇವಡಿ ಮಾಡಿದ್ದಾರೆ. ಬಿಜೆಪಿಯು ‘ಡೆಮೊ-ಕುರ್ಸಿ’ಯನ್ನು ನಂಬುತ್ತದೆಯೇ ಹೊರತು ಡೆಮಾಕ್ರಸಿಯನ್ನು ಅಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದು, ಎನ್‌ಡಿಎ ತನ್ನ ಮೈತ್ರಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಕಾಂಗ್ರೆಸ್ ನಾಯಕ, “2024 ರ ಚುನಾವಣೆ ನರೇಂದ್ರ ಮೋದಿಯವರಿಗೆ ಭಾರೀ ಸೋಲು ಆಗಿದೆ. ಅವರು 1/3 ನೇ ಪ್ರಧಾನಿ -ನರೇಂದ್ರ-ನಾಯ್ಡು-ನಿತೀಶ್… ಅವರು ಮೈತ್ರಿ ನಡೆಸಲು ಸಾಧ್ಯವಾಗುವುದಿಲ್ಲ. ಅವರು (ಬಿಜೆಪಿ) ಡೆಮೊ-ಕುರ್ಸಿಯನ್ನು ನಂಬುತ್ತಾರೆ, ಆದರೆ ಡೆಮಾಕ್ರಸಿಯನ್ನು ನಂಬುವುದಿಲ್ಲ ಎಂದಿದ್ದಾರೆ.

ಜೈರಾಮ್ ರಮೇಶ್ ಮಾತು

ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಬೆಂಬಲದೊಂದಿಗೆ ನರೇಂದ್ರ ಮೋದಿ ಅವರು ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ರಮೇಶ್ ಈ ಹೇಳಿಕೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸದೇ ಇರುವ ಕಾರಣ ಮೂರನೇ ಅವಧಿಗೆ ಎನ್‌ಡಿಎ ಸರ್ಕಾರ ರಚನೆಯಲ್ಲಿ ಇಬ್ಬರು ರಾಜಕೀಯ ನಾಯಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ.

‘ಅದ್ಭುತ ಬಹುಮತ ಗಳಿಸಿದ್ದಕ್ಕೆ ನಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇವೆ’ ಎಂದು ಹೇಳಿದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಚುನಾವಣಾ ಪ್ರಚಾರದ ವೇಳೆ ಮೂರು ತಿಂಗಳ ಕಾಲ ಪ್ರಧಾನಿ ಮೋದಿಯವರು ವಿಶ್ರಾಂತಿ ತೆಗೆದುಕೊಳ್ಳಲಿಲ್ಲ, ಹಗಲು ರಾತ್ರಿ ಎನ್ನದೇ ಉತ್ಸಾಹದಲ್ಲಿ ಪ್ರಚಾರ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಆಂಧ್ರಪ್ರದೇಶದಲ್ಲಿ ನಾವು ಮೂರು ಸಾರ್ವಜನಿಕ ಸಭೆಗಳು ಮತ್ತು ಒಂದು ದೊಡ್ಡ ರ‍್ಯಾಲಿಯನ್ನು ನಡೆಸಿದ್ದೇವೆ. ಇದು ಆಂಧ್ರಪ್ರದೇಶದಲ್ಲಿ ಚುನಾವಣೆಯನ್ನು ಗೆಲ್ಲುವಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ.

ಗುರುವಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ₹ 30 ಲಕ್ಷ ಕೋಟಿ ಮೌಲ್ಯದ ಭಾರತದ ‘ಅತಿದೊಡ್ಡ ಷೇರು ಮಾರುಕಟ್ಟೆ ಹಗರಣ’ದ ಹಿಂದೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇದ್ದಾರೆ ಎಂದು ಆರೋಪಿಸಿದ್ದು ಈ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಕೆಲವರು ಮತ ನೀಡುತ್ತಾರೆ, ಇನ್ನು ಕೆಲವರು ಕಪಾಳಕ್ಕೆ ಹೊಡೆಯುತ್ತಾರೆ: ಸಂಜಯ್ ರಾವತ್

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚುನಾವಣಾ ಫಲಿತಾಂಶ ಪ್ರಕಟವಾಗುವ ಕೆಲವೇ ದಿನಗಳ ಮೊದಲು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಜೂನ್ 4 ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದಾಗ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 6 ಪ್ರತಿಶತದಷ್ಟು ಕುಸಿದಿದ್ದರಿಂದ ಮಾರುಕಟ್ಟೆ ಹೂಡಿಕೆದಾರರು ₹ 31 ಲಕ್ಷ ಕೋಟಿ ನಷ್ಟವನ್ನು ಎದುರಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ