ನವದೆಹಲಿ: ಭಾರತ ಮತ್ತು ಚೀನಾ ನಡುವೆ ಮತ್ತೆ ಗಡಿ ಉದ್ವಿಗ್ನತೆ ತಲೆದೋರಿದ್ದು, ಮೂರು ತಿಂಗಳ ಹಿಂದೆ ತಲುಪಿದ್ದ ಗಡಿ ಕಾವು ಮರುಕಳಿಸುವ ಸಾಧ್ಯತೆ ದಟ್ಟವಾಗಿದೆ.
ಹೌದು ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಕ್ ಬಳಿ ಮತ್ತೆ ಗಡಿ ವಿವಾದ ತಾರಕಕ್ಕೇರುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಪೊಂಗಾಂಗ್ ಸರೋವರದ ದಕ್ಷಿಣ ಭಾಗದ ಶಿಖರಗಳಲ್ಲಿ ಚೀನಾ ಹಾಕಿದ್ದ ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳ ಕಣ್ತಪ್ಪಿಸಿ ಭಾರತೀಯ ಸೇನಾ ಯೋಧರು ಮಹತ್ವದ ಶಿಖರಗಳನ್ನು ತಲುಪಿ ಮಹತ್ವದ ಘಟ್ಟಗಳಲ್ಲಿ ಸೇನಾ ಜಮಾವಣೆ ಮಾಡಿದ್ದಾರೆ.
ಈ ಅನಿರೀಕ್ಷಿತ ಬೆಳವಣಿಗೆ ಮತ್ತು ಭಾರತೀಯ ಸೇನೆಯ ಚಾಕಚಕ್ಯತೆಯಿಂದ ದಂಗಾಗಿರುವ ಚೀನಾ, ಭಾರತದ ಈ ಕ್ರಮ ಸರಿಯಾದುದಲ್ಲ. ಈ ಪ್ರದೇಶ ತನಗೆ ಸೇರಿದ್ದು ಎಂದು ತಗಾದೆ ತೆಗೆದಿದೆ. ಈ ಪಾಂಗಾಂಗ್ ದಕ್ಷಿಣದ ಈ ಎತ್ತರದ ಶಿಖರಗಳಲ್ಲಿ ಸರ್ವೆಲೆನ್ಸ್ ಕ್ಯಾಮೆರಾಗಳನ್ನು ಅಳವಡಿಸಿದ್ದ ಚೀನಾ, ಭಾರತದ ಪ್ರತಿಯೊಂದು ಚಲನವಲನಗಳ ಮೇಲೆ ನೀಗಾ ಇರಿಸಿತ್ತು.
ಇದು ಭಾರತಕ್ಕೆ ಭಾರೀ ಹಿನ್ನಡೆಯಾಗಲು ಕಾರಣವಾಗಿತ್ತು. ಹೀಗಾಗಿ ಈ ಅಡೆತಡೆಯನ್ನು ನಿವಾರಿಸಲು ಮುಂದಾದ ಭಾರತೀಯ ಸೇನೆಯ ವಿಶೇಷ ತಂಡ, ವಿಶೇಷ ಕಾರ್ಯಾಚರಣೆ ನಡೆಸಿ ಚೀನಾದ ಸರ್ವೆಲೆನ್ಸ್ ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳ ಕಣ್ತಪ್ಪಿಸಿ ಶಿಖರವನ್ನು ಕಬ್ಜಾ ಮಾಡಿಕೊಂಡಿವೆ. ಅಷ್ಟೇ ಅಲ್ಲ ಅಲ್ಲಿಂದ ಈ ಸರ್ವೆಲೆನ್ಸ್ ಕ್ಯಾಮೆರಾಗಳನ್ನು ಕಿತ್ತೊಗೆದಿದೆ.
ಭಾರತೀಯ ಸೇನೆಯ ಈ ಕ್ರಮದಿಂದ ಚೀನಾಕ್ಕೆ ಭಾರೀ ಮಖಭಂಗವಾಗಿದ್ದು, ಭಾರತ ತಕ್ಷಣವೆ ಈ ಭಾಗದಿಂದ ಹಿಂದಕ್ಕೆ ಸರಿಯಬೇಕು. ಗಡಿಯಲ್ಲಿ ವಾತಾವರಣ ಉದ್ವಿಗ್ನಗೊಳ್ಳಲು ಅನುವು ಮಾಡಿಕೊಡಬಾರದು ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರೆ ವ್ಹಾ ಚುನ್‌ಯಿಂಗ್ ಆಗ್ರಹಿಸಿದ್ದಾರೆ.
ಆದ್ರೆ ಚೀನಾದ ಚಲನವಲನಗಳ ಮೇಲೆ ಕಣ್ಣಿಡಲು ಭಾರೀ ಸಹಾಯಕವಾಗಿರುವ ಈ ಅನುಕೂಲಕರ ಸ್ಥಳವನ್ನು ಭಾರತ ಒತ್ತಡಕ್ಕೆ ಸಿಲುಕಿ ಬಿಟ್ಟುಕೊಡುತ್ತಾ ಅಥವಾ ಗಟ್ಟಿಯಾಗಿ ತಳವುರುತ್ತಾ ಎನ್ನೋದನ್ನ ಕಾದು ನೋಡಬೇಕಿದೆ.
Also Read: ಭಾರತದ ಬ್ರಹ್ಮಾಸ್ತ್ರ ಈ ‘ಸ್ಪೇಷಲ್ ಫೋರ್ಸ್ 22’ ಹೇಗೆ ಕಾರ್ಯ ನಿರ್ವಹಿಸುತ್ತೆ ಗೊತ್ತಾ ?
Despite Chinese cameras and sensors, Indian troops managed to beat PLA in occupying height
Read @ANI Story | https://t.co/cQD7yXYifI pic.twitter.com/eSTviMZBv9
— ANI Digital (@ani_digital) September 1, 2020
I think both sides should stick to facts and have goodwill in maintaining the bilateral relations & take concrete measures to safeguard peace, tranquillity along the border: Hua Chunying, Chinese Foreign Ministry Spokesperson https://t.co/kwiuUk3M0x
— ANI (@ANI) September 1, 2020
Published On - 4:17 pm, Tue, 1 September 20