ಉಗ್ರರ ಸದೆಬಡಿಯಲು ಅಖಾಡಕ್ಕಿಳಿದ Lady ಸಿಂಗಂ ಚಾರು ಸಿನ್ಹಾ
ಶ್ರೀನಗರ: ಇದೇ ಮೊದಲ ಬಾರಿಗೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಭಯೋತ್ಪಾದನೆಯಿಂದ ಬಳಲುತ್ತಿರುವ ಜಮ್ಮು ಮತ್ತು ಶ್ರೀನಗರ ವಿಭಾಗದ ಸಿಆರ್‌ಪಿಎಫ್‌ನ ಮುಖ್ಯಸ್ಥೆಯಾಗಿ ನೇಮಕಗೊಂಡಿದ್ದಾರೆ. ತೆಲಂಗಾಣ ಕೆಡರ್‌ನ ಚಾರು ಸಿನ್ಹಾ ಈ ಸಾಧನೆ ಮಾಡಿದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ. ತಮ್ಮ ದಕ್ಷತೆ ಮತ್ತು ಟಫ್ ನಿಲುವಿನಿಂದಾಗಿ ಸಮಾಜ ವಿರೋಧಿ ಶಕ್ತಿಗಳಲ್ಲಿ ನಡುಕ ಹುಟ್ಟಿಸಿರುವ ಖ್ಯಾತಿ ಚಾರು ಸಿನ್ಹಾಗಿದ್ದು, ಈ ಮೊದಲು ಬಿಹಾರ ವಿಭಾಗದ ಸಿಆರ್‌ಪಿಎಫ್‌ನ ಮುಖ್ಯಸ್ಥೆಯಾಗಿ ಕಾರ್ಯನಿರ್ಹಹಿಸಿದ್ದಾರೆ. ಬಿಹಾರದಲ್ಲಿ ನಕ್ಸಲ್ ನಿಗ್ರಹ ಕಾರ್ಯದಳದ ಮುಖ್ಯಸ್ಥೆಯಾಗಿ ನಕ್ಸಲ್‌ರ ಹಾವಳಿಯನ್ನು ಯಶಸ್ವಿಯಾಗಿ […]
ಶ್ರೀನಗರ: ಇದೇ ಮೊದಲ ಬಾರಿಗೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಭಯೋತ್ಪಾದನೆಯಿಂದ ಬಳಲುತ್ತಿರುವ ಜಮ್ಮು ಮತ್ತು ಶ್ರೀನಗರ ವಿಭಾಗದ ಸಿಆರ್‌ಪಿಎಫ್‌ನ ಮುಖ್ಯಸ್ಥೆಯಾಗಿ ನೇಮಕಗೊಂಡಿದ್ದಾರೆ.
ತೆಲಂಗಾಣ ಕೆಡರ್‌ನ ಚಾರು ಸಿನ್ಹಾ ಈ ಸಾಧನೆ ಮಾಡಿದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ. ತಮ್ಮ ದಕ್ಷತೆ ಮತ್ತು ಟಫ್ ನಿಲುವಿನಿಂದಾಗಿ ಸಮಾಜ ವಿರೋಧಿ ಶಕ್ತಿಗಳಲ್ಲಿ ನಡುಕ ಹುಟ್ಟಿಸಿರುವ ಖ್ಯಾತಿ ಚಾರು ಸಿನ್ಹಾಗಿದ್ದು, ಈ ಮೊದಲು ಬಿಹಾರ ವಿಭಾಗದ ಸಿಆರ್‌ಪಿಎಫ್‌ನ ಮುಖ್ಯಸ್ಥೆಯಾಗಿ ಕಾರ್ಯನಿರ್ಹಹಿಸಿದ್ದಾರೆ.
ಬಿಹಾರದಲ್ಲಿ ನಕ್ಸಲ್ ನಿಗ್ರಹ ಕಾರ್ಯದಳದ ಮುಖ್ಯಸ್ಥೆಯಾಗಿ ನಕ್ಸಲ್‌ರ ಹಾವಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಕೀರ್ತಿ ಈಗಾಗಲೇ ಇವರದಾಗಿದೆ. ಹೀಗಾಗಿಯೇ ಈಗ ಭಯೋತ್ಪಾದಕರ ಹಾವಳಿಯಿಂದ ನಡುಗಿರುವ ಜಮ್ಮು ಮತ್ತು ಕಾಶ್ಮಿರ ವಿಭಾಗದ ಸಿಆರ್‌ಪಿಎಫ್ ಮುಖ್ಯಸ್ಥೆಯಾಗಿ ಇವರನ್ನು ನೇಮಕ ಮಾಡಲಾಗಿದೆ.
ಹೀಗಾಗಿ ಎಲ್ಲರ ಕಣ್ಣು ಈಗ IG ಚಾರು ಸಿನ್ಹಾ ಮೇಲಿದ್ದು, ಭಯೋತ್ಪಾದಕರನ್ನು ಹಿಮ್ಮೆಟ್ಟಿಸಲು ಅದೇಷ್ಟು ಮಟ್ಟಿಗೆ ಯಶ ಸಾಧಿಸುತ್ತಾರೆ ಎನ್ನೋದನ್ನ ಕಾದು ನೋಡಬೇಕಿದೆ.
In a first, female IPS officer to head terrorist-hit Srinagar sector for CRPF
Read @ANI Story | https://t.co/w7uMfvfq99 pic.twitter.com/h8Nb1rj5i6
— ANI Digital (@ani_digital) September 1, 2020