ಡ್ರ್ಯಾಗನ್‌ ಕಣ್ತಪ್ಪಿಸಿ ಮಹತ್ವದ ಶಿಖರಗಳು ಭಾರತೀಯ ಸೇನೆ ವಶಕ್ಕೆ, ಚೀನಾಗೆ ಮುಖಭಂಗ

ನವದೆಹಲಿ: ಭಾರತ ಮತ್ತು ಚೀನಾ ನಡುವೆ ಮತ್ತೆ ಗಡಿ ಉದ್ವಿಗ್ನತೆ ತಲೆದೋರಿದ್ದು, ಮೂರು ತಿಂಗಳ ಹಿಂದೆ ತಲುಪಿದ್ದ ಗಡಿ ಕಾವು ಮರುಕಳಿಸುವ ಸಾಧ್ಯತೆ ದಟ್ಟವಾಗಿದೆ. ಹೌದು ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಕ್‌ ಬಳಿ ಮತ್ತೆ ಗಡಿ ವಿವಾದ ತಾರಕಕ್ಕೇರುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಪೊಂಗಾಂಗ್‌ ಸರೋವರದ ದಕ್ಷಿಣ ಭಾಗದ ಶಿಖರಗಳಲ್ಲಿ ಚೀನಾ ಹಾಕಿದ್ದ ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳ ಕಣ್ತಪ್ಪಿಸಿ ಭಾರತೀಯ ಸೇನಾ ಯೋಧರು ಮಹತ್ವದ ಶಿಖರಗಳನ್ನು ತಲುಪಿ ಮಹತ್ವದ ಘಟ್ಟಗಳಲ್ಲಿ ಸೇನಾ ಜಮಾವಣೆ […]

ಡ್ರ್ಯಾಗನ್‌ ಕಣ್ತಪ್ಪಿಸಿ ಮಹತ್ವದ ಶಿಖರಗಳು ಭಾರತೀಯ ಸೇನೆ ವಶಕ್ಕೆ, ಚೀನಾಗೆ ಮುಖಭಂಗ
Follow us
Guru
|

Updated on:Sep 01, 2020 | 6:38 PM

ನವದೆಹಲಿ: ಭಾರತ ಮತ್ತು ಚೀನಾ ನಡುವೆ ಮತ್ತೆ ಗಡಿ ಉದ್ವಿಗ್ನತೆ ತಲೆದೋರಿದ್ದು, ಮೂರು ತಿಂಗಳ ಹಿಂದೆ ತಲುಪಿದ್ದ ಗಡಿ ಕಾವು ಮರುಕಳಿಸುವ ಸಾಧ್ಯತೆ ದಟ್ಟವಾಗಿದೆ.

ಹೌದು ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಕ್‌ ಬಳಿ ಮತ್ತೆ ಗಡಿ ವಿವಾದ ತಾರಕಕ್ಕೇರುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಪೊಂಗಾಂಗ್‌ ಸರೋವರದ ದಕ್ಷಿಣ ಭಾಗದ ಶಿಖರಗಳಲ್ಲಿ ಚೀನಾ ಹಾಕಿದ್ದ ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳ ಕಣ್ತಪ್ಪಿಸಿ ಭಾರತೀಯ ಸೇನಾ ಯೋಧರು ಮಹತ್ವದ ಶಿಖರಗಳನ್ನು ತಲುಪಿ ಮಹತ್ವದ ಘಟ್ಟಗಳಲ್ಲಿ ಸೇನಾ ಜಮಾವಣೆ ಮಾಡಿದ್ದಾರೆ.

ಈ ಅನಿರೀಕ್ಷಿತ ಬೆಳವಣಿಗೆ ಮತ್ತು ಭಾರತೀಯ ಸೇನೆಯ ಚಾಕಚಕ್ಯತೆಯಿಂದ ದಂಗಾಗಿರುವ ಚೀನಾ, ಭಾರತದ ಈ ಕ್ರಮ ಸರಿಯಾದುದಲ್ಲ. ಈ ಪ್ರದೇಶ ತನಗೆ ಸೇರಿದ್ದು ಎಂದು ತಗಾದೆ ತೆಗೆದಿದೆ. ಈ ಪಾಂಗಾಂಗ್‌ ದಕ್ಷಿಣದ ಈ ಎತ್ತರದ ಶಿಖರಗಳಲ್ಲಿ ಸರ್ವೆಲೆನ್ಸ್‌ ಕ್ಯಾಮೆರಾಗಳನ್ನು ಅಳವಡಿಸಿದ್ದ ಚೀನಾ, ಭಾರತದ ಪ್ರತಿಯೊಂದು ಚಲನವಲನಗಳ ಮೇಲೆ ನೀಗಾ ಇರಿಸಿತ್ತು.

ಇದು ಭಾರತಕ್ಕೆ ಭಾರೀ ಹಿನ್ನಡೆಯಾಗಲು ಕಾರಣವಾಗಿತ್ತು. ಹೀಗಾಗಿ ಈ ಅಡೆತಡೆಯನ್ನು ನಿವಾರಿಸಲು ಮುಂದಾದ ಭಾರತೀಯ ಸೇನೆಯ ವಿಶೇಷ ತಂಡ, ವಿಶೇಷ ಕಾರ್ಯಾಚರಣೆ ನಡೆಸಿ ಚೀನಾದ ಸರ್ವೆಲೆನ್ಸ್‌ ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳ ಕಣ್ತಪ್ಪಿಸಿ ಶಿಖರವನ್ನು ಕಬ್ಜಾ ಮಾಡಿಕೊಂಡಿವೆ. ಅಷ್ಟೇ ಅಲ್ಲ ಅಲ್ಲಿಂದ ಈ ಸರ್ವೆಲೆನ್ಸ್‌ ಕ್ಯಾಮೆರಾಗಳನ್ನು ಕಿತ್ತೊಗೆದಿದೆ.

ಭಾರತೀಯ ಸೇನೆಯ ಈ ಕ್ರಮದಿಂದ ಚೀನಾಕ್ಕೆ ಭಾರೀ ಮಖಭಂಗವಾಗಿದ್ದು, ಭಾರತ ತಕ್ಷಣವೆ ಈ ಭಾಗದಿಂದ ಹಿಂದಕ್ಕೆ ಸರಿಯಬೇಕು. ಗಡಿಯಲ್ಲಿ ವಾತಾವರಣ ಉದ್ವಿಗ್ನಗೊಳ್ಳಲು ಅನುವು ಮಾಡಿಕೊಡಬಾರದು ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರೆ ವ್ಹಾ ಚುನ್‌ಯಿಂಗ್‌ ಆಗ್ರಹಿಸಿದ್ದಾರೆ.

ಆದ್ರೆ ಚೀನಾದ ಚಲನವಲನಗಳ ಮೇಲೆ ಕಣ್ಣಿಡಲು ಭಾರೀ ಸಹಾಯಕವಾಗಿರುವ ಈ ಅನುಕೂಲಕರ ಸ್ಥಳವನ್ನು ಭಾರತ ಒತ್ತಡಕ್ಕೆ ಸಿಲುಕಿ ಬಿಟ್ಟುಕೊಡುತ್ತಾ ಅಥವಾ ಗಟ್ಟಿಯಾಗಿ ತಳವುರುತ್ತಾ ಎನ್ನೋದನ್ನ ಕಾದು ನೋಡಬೇಕಿದೆ.

Also Read: ಭಾರತದ ಬ್ರಹ್ಮಾಸ್ತ್ರ ಈ ‘ಸ್ಪೇಷಲ್‌ ಫೋರ್ಸ್‌ 22‌’ ಹೇಗೆ ಕಾರ್ಯ ನಿರ್ವಹಿಸುತ್ತೆ ಗೊತ್ತಾ ?

Published On - 4:17 pm, Tue, 1 September 20

ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ