ವಾರಣಾಸಿಯಲ್ಲಿ 2200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಪಿಎಂ ಕಿಸಾನ್ 20ನೇ ಕಂತಿನ ಹಣ ಬಿಡುಗಡೆ
ಪ್ರಧಾನಿ ಮೋದಿ ಅವರು ಇಂದು ಉತ್ತರಪ್ರದೇಶದ ವಾರಣಾಸಿಯಲ್ಲಿ 2200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದರು. ಇದರ ಜತೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20 ನೇ ಕಂತಿನ 20000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು 9.7 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ.

ಉತ್ತರಪ್ರದೇಶ ಆ.2: ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉತ್ತರಪ್ರದೇಶದ (Uttar Pradesh) ವಾರಣಾಸಿಯಲ್ಲಿ 2200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದರು. ಇದು ಅವರ ಲೋಕಸಭೆ ಕ್ಷೇತ್ರವಾದ ವಾರಣಾಸಿಗೆ 51ನೇ ಭೇಟಿಯಾಗಿದೆ. ಮೋದಿ ಅವರು ಬಹುದೊಡ್ಡ ಮಟ್ಟದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಮೋಹನ್ ಸರಾಯ್ ಛಿತೌನಿ-ಶೂಲ್ ಟಂಕೇಶ್ವರ ರಸ್ತೆಯ ಅಗಲೀಕರಣ, ಹರ್ದತ್ ಪುರದಲ್ಲಿ ರೈಲ್ವೆ ಓವರ್ ಬ್ರಿಡ್ಜ್ ಅನ್ನು ಉದ್ಘಾಟನೆದರು. ಇದರ ಜತೆಗೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20 ನೇ ಕಂತಿನ 20000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು 9.7 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದಾರೆ.
ದಲ್ಮಂಡಿ, ಲಹರ್ತಾರಾ-ಕೋಟ್ವಾ. ಗಂಗಾಪುರ , ಬಬತ್ಪುರ ಸೇರಿದಂತೆ ಹಲವು ಗ್ರಾಮೀಣ ಮತ್ತು ನಗರ ಕಾರಿಡಾರ್ಗಳಲ್ಲಿ ಸಮಗ್ರ ರಸ್ತೆ ವಿಸ್ತರಣೆ, ಲೆವೆಲ್ ಕ್ರಾಸಿಂಗ್ 22 ಸಿ ಮತ್ತು ಖಾಲಿಸ್ಪುರ್ ಯಾರ್ಡ್ನಲ್ಲಿ ರೈಲ್ವೆ ಓವರ್ ಬ್ರಿಡ್ಜ್ಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಇನ್ನು ಈ ಪ್ರದೇಶದಲ್ಲಿ ವಿದ್ಯುತ್ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಸ್ಮಾರ್ಟ್ ವಿತರಣಾ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಮತ್ತು 880 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿದ್ಯುತ್ ಮೂಲಸೌಕರ್ಯಗಳ ಭೂಗತೀಕರಣಕ್ಕೆ ಶುಂಕಸ್ಥಾಪನೆ ಕೂಡ ಮಾಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
#WATCH | Varanasi, UP: Prime Minister Narendra Modi lays the foundation stone and inaugurates multiple development projects worth around Rs 2200 crores.
Source: DD pic.twitter.com/m7fKAvi3g5
— ANI (@ANI) August 2, 2025
ಪ್ರವಾಸೋಧ್ಯಮಕ್ಕೆ ಹೆಚ್ಚಿನ ಉತ್ತೇಜನೆಯನ್ನು ಕೂಡ ಈ ಯೋಜನೆಯಲ್ಲಿ ನೀಡಲಾಗಿದೆ. ಎಂಟು ನದಿ ದಂಡೆಯ ಕಚ್ಚಾ ಘಾಟ್ಗಳ ಪುನರಾಭಿವೃದ್ಧಿ, ಕಾಳಿಕಾ ಧಾಮದ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಶಿವಪುರದ ರಂಗಿಲ್ ದಾಸ್ ಕುಟಿಯಾದಲ್ಲಿ ಕೊಳ ಮತ್ತು ಘಾಟ್ನ ಸುಂದರೀಕರಣ ಮತ್ತು ದುರ್ಗಾಕುಂಡ್ನ ಪುನಃಸ್ಥಾಪನೆ ಮತ್ತು ಜಲಶುದ್ಧೀಕರಣವನ್ನು ಉದ್ಘಾಟಿಸಿದ್ದಾರೆ. ಕರ್ದಮೇಶ್ವರ ಮಹಾದೇವ ದೇವಾಲಯದ ಪುನಃಸ್ಥಾಪನೆ ಕಾರ್ಯ, ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಜನ್ಮಸ್ಥಳವಾದ ಕಾರ್ಖಿಯಾನ್ ಅಭಿವೃದ್ಧಿ , ಸಾರನಾಥ, ಋಷಿ ಮಾಂಡ್ವಿ ಮತ್ತು ರಾಮನಗರ ವಲಯಗಳಲ್ಲಿನ ನಗರ ಸೌಲಭ್ಯ ಕೇಂದ್ರಗಳು, ಲಮಾಹಿಯಲ್ಲಿರುವ ಮುನ್ಷಿ ಪ್ರೇಮ್ಚಂದ್ ಅವರ ಪೂರ್ವಜನ ಮನೆ ಪುನರಾಭಿವೃದ್ಧಿ ಮತ್ತು ವಸ್ತುಸಂಗ್ರಹಾಲಯದ ಮೇಲ್ದಾರ್ಜೆಕರಣ ಸೇರಿದಂತೆ ಇತರ ಕಾರ್ಯಗಳಿಗೆ ಶಂಕುಸ್ಥಾಪನೆಯನ್ನು ಮಾಡಿದ್ದಾರೆ.
ಸಾಂಸ್ಕೃತಿ ವಿಚಾರಗಳಿಗೂ ಕೂಡ ಈ ಯೋಜನೆಯಲ್ಲಿ ಮಹತ್ವ ನೀಡಲಾಗಿದೆ. ರಾಮಕಂಡ್, ಮಂದಾಕಿನಿ , ಶಂಕುಲ್ದಾರ ಮತ್ತು ಇತರ ಕುಂಡಗಳಲ್ಲಿ ಜಲ ಶುದ್ಧೀಕರಣ ಮತ್ತು ನಿರ್ವಾಹಣೆ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಇನ್ನು ಗ್ರಾಮೀಣ ಭಾಗದ ನೀರಾವರಿ ಯೋಜನೆಗಳಿಗೆ ಹೆಚ್ಚು ಆದ್ಯತೆಯನ್ನು ಈ ಯೋಜನೆಯಲ್ಲಿ ನೀಡಲಾಗಿದ್ದು, ಪ್ರಧಾನಮಂತ್ರಿ ಅವರು ಜಲ ಜೀವನ್ ಮಿಷನ್ ಅಡಿಯಲ್ಲಿ 47 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗಳನ್ನು ಉದ್ಟಾಟನೆ ಮಾಡಿದ್ದಾರೆ. ಇದರ ಜತೆಗೆ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. ಪುರಸಭೆಯ ಅಡಿಯಲ್ಲಿ ಬರುವ 53 ಶಾಲೆಗಳ ಕಟ್ಟಡಗಳ ಮೇಲ್ದರ್ಜೆಗೇರಿಸುವಿಕೆ ಯೋಜನೆಗೆ ಚಾಲನೆ ನೀಡಿದರು. ಹೊಸ ಜಿಲ್ಲಾ ಗ್ರಂಥ್ರಾಲಯ ನಿರ್ಮಾಣ ಹಾಗೂ ಲಾಲ್ಪುರದ ಜಖಿನಿಯಲ್ಲಿರುವ ಸರ್ಕಾರಿ ಪ್ರೌಢ ಶಾಲೆಗಳ ಪುನರುಜ್ಜೀವನ ಸೇರಿದಂತೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಭುವನೇಶ್ವರ, ಡೆಹ್ರಾಡೂನ್‌ನಲ್ಲಿ ಆದಿ ಕರ್ಮಯೋಗಿ ಅಭಿಯಾನದ 3ನೇ ಮತ್ತು 4ನೇ ಪ್ರಕ್ರಿಯೆ ಲ್ಯಾಬ್‌ಗಳ ಪ್ರಾರಂಭ
ಆರೋಗ್ಯ ಕ್ಷೇತ್ರದಲ್ಲೂ ಅಭಿವೃದ್ದಿಯನ್ನು ನೀಡುವ ಮೂಲಕ ವಾರಣಾಸಿ ಜನರ ಆರೋಗ್ಯ ಕ್ಷೇಮಕ್ಕೂ ಒತ್ತು ನೀಡಲಾಗಿದೆ. ಮಹಾಮನ ಪಂಡಿತ್ ಮದನ್ ಮೋಹನ್ ಮಾಳವೀಯ ಕ್ಯಾನ್ಸರ್ ಮತ್ತು ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ರೋಬೋಟಿಕ್ ಸರ್ಜರಿ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯಗಳು ಸೇರಿದಂತೆ ಸುಧಾರಿತ ವೈದ್ಯಕೀಯ ಉಪಕರಣಗಳನ್ನು ನೀಡಲಾಗಿದೆ. ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆಯ ಶಂಕುಸ್ಥಾಪನೆಯನ್ನು ಮಾಡಿದ್ದಾರೆ. ಇದರ ಜತೆಗೆ ಪ್ರಾಣಿಗಳ ಜನನ ನಿಯಂತ್ರಣ ಕೇಂದ್ರ ಹಾಗೂ ನಾಯಿ ಆರೈಕೆ ಕೇಂದ್ರಗಳನ್ನು ಉದ್ಘಾಟಿಸಿದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




