434 ಕೋಟಿ ರೂ.ಗಳ ನಕಲಿ GST ಸರಕು ರಸೀದಿ ಹಗರಣ ಬಯಲಿಗೆ
ನಾಗಪುರ್: ಹರಿಯೋ ನದಿಗೆ ಸಾವಿರ ದಾರಿ ಅಂತಾರೆ ಹಾಗೇನೆ ಕಳ್ಳತನ ಮಾಡಬೇಕು ಅನ್ನೋರಿಗೂ ಕೂಡಾ ಸಾವಿರಾರು ದಾರಿ ಅಂತಾ ಕಾಣುತ್ತೆ. ಯಾಕಂದ್ರೆ ಕಳ್ಳತನದಲ್ಲಿ ತೆರಿಗೆ ತಪ್ಪಿಸೋಕ್ಕಂತಾನೆ ಜಿಎಸ್‌ಟಿ ಅನ್ನೋ ಏಕ ಮುಖ ಟ್ಯಾಕ್ಸ್ ಸಿಸ್ಟಮ್ ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದ್ರೂ ಕೆಲವರು ಸರ್ಕಾರಕ್ಕೆ ಟೊಪಿ ಹಾಕಲು ಹೊಸ ಹೊಸ ಮಾರ್ಗ ಹುಡುಕುತ್ತಲೇ ಇದ್ದಾರೆ. ಆದ್ರೆ ಜಿಎಸ್‌ಟಿ ಇಂಟಲಿಜೆನ್ಸ್ ವಿಭಾಗ ಈಗ ಇಂಥ ಕಳ್ಳಮಾರ್ಗವೊಂದನ್ನು ಬಯಲು ಮಾಡಿದೆ. ನಾಗಪುರ ವಿಭಾಗದ ಜಿಎಸ್‌ಟಿ ಅಧಿಕಾರಿಗಳು ದೇಶದಲ್ಲಿ ಸುಳ್ಳು […]
ನಾಗಪುರ್: ಹರಿಯೋ ನದಿಗೆ ಸಾವಿರ ದಾರಿ ಅಂತಾರೆ ಹಾಗೇನೆ ಕಳ್ಳತನ ಮಾಡಬೇಕು ಅನ್ನೋರಿಗೂ ಕೂಡಾ ಸಾವಿರಾರು ದಾರಿ ಅಂತಾ ಕಾಣುತ್ತೆ. ಯಾಕಂದ್ರೆ ಕಳ್ಳತನದಲ್ಲಿ ತೆರಿಗೆ ತಪ್ಪಿಸೋಕ್ಕಂತಾನೆ ಜಿಎಸ್‌ಟಿ ಅನ್ನೋ ಏಕ ಮುಖ ಟ್ಯಾಕ್ಸ್ ಸಿಸ್ಟಮ್ ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದ್ರೂ ಕೆಲವರು ಸರ್ಕಾರಕ್ಕೆ ಟೊಪಿ ಹಾಕಲು ಹೊಸ ಹೊಸ ಮಾರ್ಗ ಹುಡುಕುತ್ತಲೇ ಇದ್ದಾರೆ. ಆದ್ರೆ ಜಿಎಸ್‌ಟಿ ಇಂಟಲಿಜೆನ್ಸ್ ವಿಭಾಗ ಈಗ ಇಂಥ ಕಳ್ಳಮಾರ್ಗವೊಂದನ್ನು ಬಯಲು ಮಾಡಿದೆ.
ನಾಗಪುರ ವಿಭಾಗದ ಜಿಎಸ್‌ಟಿ ಅಧಿಕಾರಿಗಳು ದೇಶದಲ್ಲಿ ಸುಳ್ಳು ಬಿಸಿನೆಸ್ ವ್ಯವಹಾರದ 434 ಕೋಟಿ ರೂ.ಗಳ ಹಗರಣವೊಂದನ್ನು ಪತ್ತೆ ಹಚ್ಚಿದ್ದಾರೆ. ಈ ಹಗರಣ ತಮಿಳುನಾಡಿನಿಂದ ಹಿಡಿದು ದೆಹಲಿ ವರೆಗೆ ಹಬ್ಬಿದ್ದು, ಸುಮಾರು 23 ಕಂಪನಿಗಳು ಇದರಲ್ಲಿ ಭಾಗಿಯಾಗಿವೆ ಎಂದು ಜಿಎಸ್‌ಟಿ ಇಂಟಲಿಜೆನ್ಸ್ ವಿಭಾಗ ಹೇಳಿದೆ.
ಈ ಹಗರಣದಲ್ಲಿ ಯಾವುದೇ ವ್ಯವಹಾರಿಕ ವಹಿವಾಟು ಆಗದಿದ್ದರೂ, ಕೇವಲ ದಾಖಲೆಯಲ್ಲಿ ವ್ಯವಹಾರ ಆಗಿದೆಯೆಂಬ ಸರಕು ರಸೀದಿಗಳನ್ನು ಸೃಷ್ಟಿಸಲಾಗುತ್ತೆ. ಹೀಗೆ ನಕಲಿ ವ್ಯವಹಾರದ ಸರಕು ರಸೀದಿಗಳನ್ನು ಸೃಷ್ಟಿಸಿ ಆ ರಸೀದಿಗಳಿಂದ ವಾಮ ಮಾರ್ಗವಾಗಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಪಡೆಯಲಾಗುತ್ತೆ. ಅಷ್ಟೇ ಅಲ್ಲ ಈ ರಸೀದಿಗಳ ಆಧಾರದಲ್ಲಿಯೇ ಜಿಎಸ್‌ಟಿ ರಜಿಸ್ಟರ್ ನಂಬರ್ ಅನ್ನು ಪಡೆಯಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಹೀಗೆ ನಕಲಿ ದಾಖಲೆ ಸೃಷ್ಟಿಸಿ ನೀಡಿದ ಸರಕು ರಸೀದಿ ವ್ಯವಹಾರದಲ್ಲಿ ಸುಮಾರು 434 ಕೋಟಿ ರೂ.ಗಳ ವಹಿವಾಟು ನಡೆದಿದೆಯೆಂದು ಜಿಎಸ್‌ಟಿ ಅಧಿಕಾರಿಗಳು ಹೇಳಿದ್ದಾರೆ. ಹೀಗೆ ಪಡೆದ ನಕಲಿ ರಸೀದಿಗಳಿಂದ ಟ್ಯಾಕ್ಸ್ ಕಳ್ಳರು ಸುಮಾರು 78.13 ಕೋಟಿ ರೂ.ಗಳ ತೆರಿಗೆ ಲಾಭವನ್ನು ವಾಮಮಾರ್ಗವಾಗಿ ಪಡೆದಿದ್ದಾರೆ.
ಈ ರಸೀದಿ ಹಗರಣ ಬಹುತೇಕ ಕಬ್ಬಿಣ, ವೈರ್, ಸ್ಟೀಲ್, ಪ್ಲಾಸ್ಟಿಕ್ ಉತ್ಪನ್ನಗಳ ಹೆಸರಿನಲ್ಲಿ ನಡೆದಿದೆ. ದೆಹಲಿ, ಸೋನಾಪೇಟ್, ಜಲಂದರ್ ಹಾಗೂ ನಾಗಪುರಗಳಲ್ಲಿ ನಡೆಸಿದ ದಾಳಿಯಲ್ಲಿ ಈ ಹಗರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಲು ತನಿಖೆ ನಡೆಸುತ್ತಿದ್ದಾರೆ.