ಎಐ ಆಧಾರಿತ ಕಾರ್ಯಕ್ಷೇತ್ರ ರಚನೆ ಕುರಿತು ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಅವರು ಕಾಗ್ನಿಜೆಂಟ್ ಸಿಇಒ ರವಿಕುಮಾರ್ ಮತ್ತು ನಾಸ್ಕಾಂ ಅಧ್ಯಕ್ಷ ರಾಜೇಶ್ ನಂಬಿಯಾರ್ ಅವರನ್ನು ಭೇಟಿಯಾಗಿ ಸಭೆ ನಡೆಸಿದರು. ಈ ಬಗ್ಗೆ ಸ್ವತಃ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಕಾಗ್ನಿಜೆಂಟ್ ಸಿಇಒ ರವಿಕುಮಾರ್ ಮತ್ತು ನಾಸ್ಕಾಮ್ ಅಧ್ಯಕ್ಷ ರಾಜೇಶ್ ನಂಬಿಯಾರ್ ನಡುವಿನ ಸಭೆ ಅದ್ಭುತವಾಗಿತ್ತು ಎಂದಿದ್ದಾರೆ.
ಸಂವಾದದಲ್ಲಿ ಭವಿಷ್ಯದಲ್ಲಿ ಯುವ ಶಕ್ತಿಯನ್ನು ಹೇಗೆ ಸುಧಾರಿಸಬೇಕು, ಉದ್ಯೋಗಗಳು ಹೇಗೆ ಹೆಚ್ಚಾಗುತ್ತವೆ ಮತ್ತು 2047 ರ ವೇಳೆಗೆ ಭಾರತವು ಹೇಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಮತ್ತು ಇದಕ್ಕಾಗಿ ಏನು ಮಾಡಬೇಕು ಎಂಬ ವಿಷಯಗಳ ಕುರಿತು ನಾವು ಅವರೊಂದಿಗೆ ಚರ್ಚಿಸಿದ್ದೇವೆ ಎಂದು ಅವರು ಹೇಳಿದರು.
ಕಾಗ್ನಿಜೆಂಟ್ ಮತ್ತು ನಾಸ್ಕಾಮ್ ಎನ್‌ಎಸ್‌ಡಿಸಿ ಇಂಡಿಯಾದ ಸಹಭಾಗಿತ್ವದಲ್ಲಿ ಉದ್ಯಮ ಮತ್ತು ಉದ್ಯೋಗಿಗಳಿಗೆ ಚೌಕಟ್ಟನ್ನು ಸಿದ್ಧಪಡಿಸುತ್ತಿವೆ ಎಂದರು. ಎಐಯೊಂದಿಗೆ ಜಗತ್ತು ಮುಂದಿನ ಬದಲಾವಣೆಯ ಅಲೆಯನ್ನು ಅಳವಡಿಸಿಕೊಳ್ಳುತ್ತಿದೆ, ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ನಮ್ಮ ಕೌಶಲ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ನಾವು ಬದ್ಧರಾಗಬೇಕು.
ಮತ್ತಷ್ಟು ಓದಿ: ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರ, ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಯಾವುದೇ ಶಾರ್ಟ್ಕಟ್ ಇಲ್ಲ: ಧರ್ಮೇಂದ್ರ ಪ್ರಧಾನ್
ಕೆಲಸದ ಸ್ಥಳದಲ್ಲಿ ಸಿಬ್ಬಂದಿಗೆ ಶೀಘ್ರದಲ್ಲೇ ಕೃತಕ ಬುದ್ಧಿಮತ್ತೆ ಹಾಗೂ ಆಟೋಮೇಷನ್ ತಂತ್ರಜ್ಞಾನಗಳ ತರಬೇತಿ ಅತೀ ಅಗತ್ಯವಾಗಲಿದೆ ಎಂದು ಸಮೀಕ್ಷೆಯೊಂದು ಹೇಳಿತ್ತು. ಭಾರತದಲ್ಲಿನ 16.2 ಮಿಲಿಯನ್ ಉದ್ಯೋಗಿಗಳಿಗೆ ಮರುಕೌಶಲ್ಯದ ಅಗತ್ಯ ಮತ್ತು 4.7 ಮಿಲಿಯನ್ ಹೊಸ ಟೆಕ್ ಉದ್ಯೋಗಿಗಳಿಗೆ AI ಮತ್ತು ಯಾಂತ್ರೀಕೃತಗೊಂಡ ಕೌಶಲ್ಯ ತರಬೇತಿಯೊಂದಿಗೆ ಸಜ್ಜುಗೊಳಿಸುವ ಅಗತ್ಯವಿದೆ ಸಮೀಕ್ಷೆಯಿಂದ ತಿಳಿದುಬಂದಿದೆ.
Fruitful meeting with Mr. Ravi Kumar, CEO, @Cognizant and Mr. @RNamb, Chairperson, @nasscom, today morning.
Good discussions on future-proofing a vast majority of our #YuvaShakti, driving upward mobility in jobs for our #workforce and creating a virtuous cycle of skilling,… pic.twitter.com/wHSMyrmalp
— Dharmendra Pradhan (@dpradhanbjp) December 15, 2023
ತಂತ್ರಜ್ಞಾನವು ಮಾಡುವ ಕಾರ್ಯಗಳನ್ನು ಹೇಗೆ ಪರಿವರ್ತಿಸುತ್ತದೆ ಎಂಬುದನ್ನು ಊಹಿಸಲು ಯಂತ್ರಗಳ ಬಳಕೆ ಕೌಶಲ್ಯದ ಕಲಿಕೆಯನ್ನು ಬಳಸಲಾಗುತ್ತದೆ ಮತ್ತು ಭಾರತದ ಉದ್ಯೋಗಿಗಳಿಗೆ ತಮ್ಮ ವೃತ್ತಿಜೀವನವನ್ನು ಮರುರೂಪಿಸಿಕೊಳ್ಳಲು ಮತ್ತು ಭವಿಷ್ಯದ ರೂಪಾಂತರಗಳಿಗೆ ತಮ್ಮನ್ನು ತಾವು ಒಗ್ಗಿಕೊಳ್ಳುವಂತೆ ಮಾಡಲು ಅಭೂತಪೂರ್ವ ಅವಕಾಶವನ್ನು ಎಐ ಮತ್ತು ಆಟೋಮೇಷನ್ ತರಬೇತಿಗಳು ಮಾಡಿಕೊಡಲಿವೆ ಎನ್ನಲಾಗಿದೆ.
ಈಗಾಗಲೇ ಪ್ರತಿ ಭಾರತೀಯನಿಗೂ ಗುಣಮಟ್ಟದ ಕೌಶಲ್ಯ, ಅಗತ್ಯ ಅವಕಾಶಗಳು ಹಾಗೂ ಉದ್ಯಮಶೀಲತೆಯ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಪ್ರಧಾನ್ ಸ್ಕಿಲ್ ಇಂಡಿಯಾ ಡಿಜಿಟಲ್ಗೆ ಚಾಲನೆ ನೀಡಿದ್ದರು. ಈ ವೇದಿಕೆಯು ಉತ್ತಮ ಅವಕಾಶಗಳು ಮತ್ತು ಉಜ್ವಲ ಭವಿಷ್ಯವನ್ನು ನಿರೀಕ್ಷಕಿಸುವ ಕೋಟ್ಯಂತರ ಭಾರತೀಯರ ಆಕಾಂಕ್ಷೆಗಳು ಮತ್ತು ಕನಸುಗಳನ್ನು ಪೂರೈಸಲಿದ್ದು ಇದು ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯದ ಕೋರ್ಸ್ಗಳು, ಉದ್ಯೋಗಾವಕಾಶಗಳು ಮತ್ತು ಉದ್ಯಮಶೀಲತೆ ಬೆಂಬಲವನ್ನು ಉತ್ತೇಜಿಸಲಿದೆ.
ಎಸ್.ಐ.ಡಿ. ಭಾರತದಲ್ಲಿ ಕೌಶಲ್ಯ, ಶಿಕ್ಷಣ, ಉದ್ಯೋಗ ಮತ್ತು ಉದ್ಯಮಶೀಲತೆಯ ಇಕೊಸಿಸ್ಟಂಗೆ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್(ಡಿಪಿಐ) ಆಗಿದೆ.
Published On - 12:56 pm, Sat, 16 December 23