ನೂರಾರು ವಜ್ರ ವ್ಯಾಪಾರಿಗಳು ಮುಂಬೈನಿಂದ ಸೂರತ್​​ಗೆ ಶಿಫ್ಟ್ ಆದರು, ಯಾಕೆ?

| Updated By: ಸಾಧು ಶ್ರೀನಾಥ್​

Updated on: Oct 02, 2020 | 1:25 PM

ಗುಜರಾತ್: ಕಿಲ್ಲರ್ ಕೊರೊನಾ ವೈರಸ್ ಇಡೀ ದೇಶದಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಈ ಪರಿಣಾಮ ಈಗಲೂ ಅನೇಕರು ತಮ್ಮ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಈ ನಡುವೆ ಸಾವಿರಾರು ವಜ್ರ ವ್ಯಾಪಾರಿಗಳು ಮುಂಬೈನಿಂದ ಸೂರತ್‌ಗೆ ಶಿಫ್ಟ್ ಆಗುತ್ತಿದ್ದಾರೆ.  100 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳು ಸೂರತ್‌ಗೆ ಸ್ಥಳಾಂತರಗೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮುಂಬೈನಲ್ಲಿ ಕೊರೊನಾ ವೈರಸ್​ನ ಪರಿಸ್ಥಿತಿಯಿಂದಾಗಿ ಅವರಲ್ಲಿ ಹಲವರು ಈಗಾಗಲೇ ತಮ್ಮ ಕಾರ್ಯಾಚರಣೆಯನ್ನು ಸ್ಥಳಾಂತರಿಸಿದ್ದಾರೆ. ಇನ್ನು 4,500 ಷೇರು ಕಚೇರಿಗಳು ಸೂರತ್​ನಲ್ಲಿ ಅಂಗಡಿ […]

ನೂರಾರು ವಜ್ರ ವ್ಯಾಪಾರಿಗಳು ಮುಂಬೈನಿಂದ ಸೂರತ್​​ಗೆ ಶಿಫ್ಟ್ ಆದರು, ಯಾಕೆ?
Follow us on

ಗುಜರಾತ್: ಕಿಲ್ಲರ್ ಕೊರೊನಾ ವೈರಸ್ ಇಡೀ ದೇಶದಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಈ ಪರಿಣಾಮ ಈಗಲೂ ಅನೇಕರು ತಮ್ಮ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಈ ನಡುವೆ ಸಾವಿರಾರು ವಜ್ರ ವ್ಯಾಪಾರಿಗಳು ಮುಂಬೈನಿಂದ ಸೂರತ್‌ಗೆ ಶಿಫ್ಟ್ ಆಗುತ್ತಿದ್ದಾರೆ.

 100 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳು ಸೂರತ್‌ಗೆ ಸ್ಥಳಾಂತರಗೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮುಂಬೈನಲ್ಲಿ ಕೊರೊನಾ ವೈರಸ್​ನ ಪರಿಸ್ಥಿತಿಯಿಂದಾಗಿ ಅವರಲ್ಲಿ ಹಲವರು ಈಗಾಗಲೇ ತಮ್ಮ ಕಾರ್ಯಾಚರಣೆಯನ್ನು ಸ್ಥಳಾಂತರಿಸಿದ್ದಾರೆ.

ಇನ್ನು 4,500 ಷೇರು ಕಚೇರಿಗಳು ಸೂರತ್​ನಲ್ಲಿ ಅಂಗಡಿ ತೆರೆಯಲು ಸನ್ನದ್ಧವಾಗಿವೆ ಎಂದು ರತ್ನಗಳು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿಯ ಪ್ರಾದೇಶಿಕ ಮುಖ್ಯಸ್ಥ ದಿನೇಶ್ ನವಡಿಯಾ ತಿಳಿಸಿದ್ದಾರೆ.