Dibrugarh Express Derails: ಉತ್ತರ ಪ್ರದೇಶದ ಗೊಂಡಾದಲ್ಲಿ ಹಳಿತಪ್ಪಿದ ದಿಬ್ರುಗಢ ಎಕ್ಸ್‌ಪ್ರೆಸ್; ನಾಲ್ವರು ಸಾವು, 60 ಮಂದಿಗೆ ಗಾಯ

|

Updated on: Jul 18, 2024 | 6:00 PM

ಉತ್ತರ ಪ್ರದೇಶದ ಗೊಂಡಾದಲ್ಲಿ ದಿಬ್ರುಗಢ ಎಕ್ಸ್‌ಪ್ರೆಸ್‌ನ (15904) 15 ಬೋಗಿಗಳು ಹಳಿತಪ್ಪಿ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

Dibrugarh Express Derails: ಉತ್ತರ ಪ್ರದೇಶದ ಗೊಂಡಾದಲ್ಲಿ ಹಳಿತಪ್ಪಿದ ದಿಬ್ರುಗಢ ಎಕ್ಸ್‌ಪ್ರೆಸ್; ನಾಲ್ವರು ಸಾವು, 60 ಮಂದಿಗೆ ಗಾಯ
ಹಳಿ ತಪ್ಪಿಗ ರೈಲು
Follow us on

ಗೊಂಡಾ ಜುಲೈ 18: ಉತ್ತರ ಪ್ರದೇಶದ (Uttar Pradesh) ಗೊಂಡಾದಲ್ಲಿ ದಿಬ್ರುಗಢ ಎಕ್ಸ್‌ಪ್ರೆಸ್‌ನ (15904) (Dibrugarh Express)15 ಬೋಗಿಗಳು ಹಳಿತಪ್ಪಿದೆ. ಈ ದುರ್ಘಟನೆಯಲ್ಲಿ ನಾಲ್ವರು ಸಾವಿಗೀಡಾಗಿದ್ದು 60 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ರೈಲು ಚಂಡೀಗಢದಿಂದ ಬರುತ್ತಿತ್ತು. ಯುಪಿಯ ಜಿಲಾಹಿ ರೈಲು ನಿಲ್ದಾಣ ಮತ್ತು ಗೋಸಾಯಿ ದಿಹ್ವಾ ನಡುವೆ ಈ ದುರ್ಘಟನೆ ನಡೆದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಧಿಕಾರಿಗಳ ಪ್ರಕಾರ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.

ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


“ಗೊಂಡಾ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತದ ಅವರು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಸಿಎಂ ಹಾರೈಸಿದ್ದಾರೆ ಎಂದು ಮುಖ್ಯಮಂತ್ರಿಯವರ ಕಚೇರಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಗೋರಖ್‌ಪುರ ಮತ್ತು ಗೊಂಡಾದಿಂದ ಹೆಚ್ಚುವರಿ ರೈಲ್ವೆ ರಕ್ಷಣಾ ತಂಡವನ್ನು ಕಳುಹಿಸಲಾಗುತ್ತಿದೆ.

“ರೈಲ್ವೆಯ ವೈದ್ಯಕೀಯ ವ್ಯಾನ್ ಸ್ಥಳಕ್ಕೆ ತಲುಪಿದೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಇದು ಮಧ್ಯಾಹ್ನ 2.37 ರ ಸುಮಾರಿಗೆ ಸಂಭವಿಸಿದೆ ಎಂದು ಈಶಾನ್ಯ ರೈಲ್ವೆ ಸಿಪಿಆರ್‌ಒ ಪಂಕಜ್ ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.

ಘಟನೆಯ ನಂತರ ರೈಲ್ವೆ ಸಚಿವಾಲಯ ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ. ಅವುಗಳು ಈ ರೀತಿ ಇಜೆ – ವಾಣಿಜ್ಯ ನಿಯಂತ್ರಣ ಟಿನ್ಸುಕಿಯಾ: 9957555984; ಫರ್ಕೇಟಿಂಗ್ (FKG): 9957555966; ಮರಿಯಾನಿ (MXN): 6001882410; ಸಿಮಲ್ಗುರಿ (SLGR): 8789543798; ಟಿನ್ಸುಕಿಯಾ (NTSK): 9957555959; ದಿಬ್ರುಗಢ್ (DBRG): 9957555960.
ಸಚಿವಾಲಯವು ಗುವಾಹಟಿ ನಿಲ್ದಾಣಕ್ಕಾಗಿ ಸಂಖ್ಯೆಗಳನ್ನು ಸಹ ನೀಡಿದೆ. ಅವು ಹೀಗಿದೆ: 0361-2731621, 0361-2731622, 0361-2731623.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಡೋಲು ಬಾರಿಸಲು ಬಾರದ್ದಕ್ಕೆ ದಲಿತ ಕುಟುಂಬಗಳಿಗೆ ಊರಿಗೆ ಬಹಿಷ್ಕಾರ

ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕಚೇರಿ ತಿಳಿಸಿದೆ. ಉತ್ತರ ಪ್ರದೇಶದ ದಿಬ್ರುಗಢ್ – ಚಂಡೀಗಢ ಎಕ್ಸ್‌ಪ್ರೆಸ್ ಹಳಿತಪ್ಪಿದ ಬಗ್ಗೆ ಅಸ್ಸಾಂ ಸಿಎಂ ಡಾ ಹಿಮಂತ ಬಿಸ್ವಾ ಅವರಿಗೆ ವಿವರಿಸಲಾಗಿದೆ. ಸಿಎಂ ಕಚೇರಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅಸ್ಸಾಂ ಸರ್ಕಾರವು ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಶರ್ಮಾ ಅವರ ಕಚೇರಿ ಟ್ವೀಟ್ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Thu, 18 July 24