ಉತ್ತರಾಖಂಡದಲ್ಲಿ ಡೋಲು ಬಾರಿಸಲು ಬಾರದ್ದಕ್ಕೆ ದಲಿತ ಕುಟುಂಬಗಳಿಗೆ ಊರಿಗೆ ಬಹಿಷ್ಕಾರ

ಪಂಚಾಯತ್ ಆದೇಶದ ಪ್ರಕಾರ, ಪರಿಶಿಷ್ಟ ಜಾತಿಯ ಕುಟುಂಬಗಳು ಗ್ರಾಮದಲ್ಲಿರುವ ಅರಣ್ಯ ಮತ್ತು ಜಲಮೂಲಗಳನ್ನು ಬಳಸದಂತೆ, ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸದಂತೆ, ವಾಹನಗಳಲ್ಲಿ ಪ್ರಯಾಣಿಸದಂತೆ ಮತ್ತು ದೇವಸ್ಥಾನಗಳಿಗೆ ಭೇಟಿ ನೀಡದಂತೆ ನಿರ್ಬಂಧಿಸಲಾಗಿದೆ.

ಉತ್ತರಾಖಂಡದಲ್ಲಿ ಡೋಲು ಬಾರಿಸಲು ಬಾರದ್ದಕ್ಕೆ ದಲಿತ ಕುಟುಂಬಗಳಿಗೆ ಊರಿಗೆ ಬಹಿಷ್ಕಾರ
ಡೋಲು
Follow us
|

Updated on: Jul 18, 2024 | 12:25 PM

ಗೋಪೇಶ್ವರ: ಅನಾರೋಗ್ಯದ ಕಾರಣದಿಂದ ದೇವಸ್ಥಾನಕ್ಕೆ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಡೋಲು ಬಾರಿಸಲು ಬಾರದ ಹಿನ್ನೆಲೆಯಲ್ಲಿ ಚಮೋಲಿ ಜಿಲ್ಲೆಯ ಹಳ್ಳಿಯೊಂದರ ದಲಿತ ಕುಟುಂಬಗಳನ್ನು ಬಹಿಷ್ಕರಿಸಿದ್ದಾರೆ. ಭಾರತ- ಚೀನಾ ಗಡಿಯ ಸಮೀಪವಿರುವ ನಿತಿ ಕಣಿವೆಯಲ್ಲಿರುವ ಸುಭಾಯ್ ಗ್ರಾಮದ ಸ್ಥಳೀಯ ಪಂಚಾಯತ್ ಭಾನುವಾರ ಬಹಿಷ್ಕಾರವನ್ನು ಘೋಷಿಸಿದೆ.

ಸುಭಾಯ್ ಗ್ರಾಮದಲ್ಲಿ ಸುಮಾರು ಅರ್ಧ ಡಜನ್ ಪರಿಶಿಷ್ಟ ಜಾತಿಯ ಕುಟುಂಬಗಳಿವೆ. ಅವರು ಆ ಗ್ರಾಮದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬಗಳಲ್ಲಿ ಹಲವು ತಲೆಮಾರುಗಳಿಂದ ಡೋಲು ಬಾರಿಸುತ್ತಿದ್ದಾರೆ.

ಇದನ್ನೂ ಓದಿ: Viral Video: ಕೇರಳದ ದೇವಾಲಯಕ್ಕೆ ಸೀರೆಯುಟ್ಟ ವಿದೇಶಿ ಮಹಿಳೆಗೆ ನಿರ್ಬಂಧ; ವಿಡಿಯೋ ವೈರಲ್

ಆದರೆ, ಒಬ್ಬ ಪುಷ್ಕರ್ ಲಾಲ್ ಅನಾರೋಗ್ಯದ ಕಾರಣದಿಂದಾಗಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಡೋಲು ಬಾರಿಸಲು ಬಂದಿರಲಿಲ್ಲ. ಇದರಿಂದ ಸ್ಥಳೀಯ ಪಂಚಾಯತ್ ಇಡೀ ದಲಿತ ಸಮುದಾಯವನ್ನು ಸಾಮಾಜಿಕ ಬಹಿಷ್ಕಾರಕ್ಕೆ ಆದೇಶಿಸಿದೆ. ಪಂಚಾಯತ್ ಸದಸ್ಯರೊಬ್ಬರು ಬಹಿಷ್ಕಾರವನ್ನು ಘೋಷಿಸುವುದು ಮತ್ತು ಆದೇಶವನ್ನು ಪಾಲಿಸದಿದ್ದರೆ ಇದೇ ರೀತಿಯ ಪರಿಣಾಮಗಳನ್ನು ಗ್ರಾಮಸ್ಥರಿಗೆ ಬೆದರಿಕೆ ಹಾಕುವುದು ವೀಡಿಯೊದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ದಲಿತರ ಪರ ಇದ್ದೇವೆ ಎಂದು ಅವರ ಹಣವನ್ನೇ ಕಾಂಗ್ರೆಸ್ ಲೂಟಿ‌ ಮಾಡಿದೆ -ಆರ್.ಅಶೋಕ್

ಪಂಚಾಯತ್ ಆದೇಶದ ಪ್ರಕಾರ, ಎಸ್‌ಸಿ ಕುಟುಂಬಗಳು ಗ್ರಾಮದಲ್ಲಿರುವ ಅರಣ್ಯ ಮತ್ತು ಜಲಮೂಲಗಳನ್ನು ಬಳಸದಂತೆ, ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸಲು, ವಾಹನಗಳಲ್ಲಿ ಪ್ರಯಾಣಿಸಲು ಮತ್ತು ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ.

ಸಂತ್ರಸ್ತೆಯ ಕುಟುಂಬಗಳು ಜೋಶಿಮಠ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಾಮಕೃಷ್ಣ ಖಂಡ್ವಾಲ್ ಮತ್ತು ಯಶವೀರ್ ಸಿಂಗ್ ಎಂಬ ಇಬ್ಬರು ವ್ಯಕ್ತಿಗಳು ಈ ಆದೇಶದ ರೂವಾರಿಗಳು ಎಂದು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ