ಪ್ರತಿಭಟನಾಕಾರರು ರೈತರೇ ಅಲ್ಲದಿದ್ದರೆ ಸರ್ಕಾರ ಯಾಕೆ ಅವರ ಜತೆ ಮಾತುಕತೆ ನಡೆಸುತ್ತಿದೆ: ಚಿದಂಬರಂ
ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ಖಾಲಿಸ್ತಾನಿಗಳು, ಚೀನಾ ಮತ್ತು ಪಾಕಿಸ್ತಾನದ ಏಜೆಂಟ್ಗಳು, ಮಾವೋವಾದಿಗಳು, ಟುಕ್ಡೇ ಟುಕ್ಡೇ ಗ್ಯಾಂಗ್ ಎಂದು ಸಚಿವರು ಹೇಳುತ್ತಿದ್ದಾರೆ. ಹೀಗಿರುವಾಗ ಸಾವಿರಾರು ಪ್ರತಿಭಟನಕಾರರಲ್ಲಿ ಯಾರೊಬ್ಬರೂ ರೈತರಲ್ಲ. ಅವರು ರೈತರೇ ಅಲ್ಲದಿದ್ದರೆ ಸರ್ಕಾರ ಅವರೊಂದಿಗೆ ಯಾಕೆ ಮಾತುಕತೆ ನಡೆಸುತ್ತಿದೆ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.
ನವದೆಹಲಿ: ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ಖಾಲಿಸ್ತಾನಿಗಳು, ಚೀನಾ ಮತ್ತು ಪಾಕಿಸ್ತಾನದ ಏಜೆಂಟ್ಗಳು, ಮಾವೋವಾದಿಗಳು, ಟುಕ್ಡೇ ಟುಕ್ಡೇ ಗ್ಯಾಂಗ್ ಎಂದು ಸಚಿವರು ಹೇಳುತ್ತಿದ್ದಾರೆ. ಹೀಗಿರುವಾಗ ಸಾವಿರಾರು ಪ್ರತಿಭಟನಕಾರರಲ್ಲಿ ಯಾರೊಬ್ಬರೂ ರೈತರಲ್ಲ. ಅವರು ರೈತರೇ ಅಲ್ಲದಿದ್ದರೆ ಸರ್ಕಾರ ಅವರೊಂದಿಗೆ ಯಾಕೆ ಮಾತುಕತೆ ನಡೆಸುತ್ತಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಪಿ.ಚಿದಂಬರಂ ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.
ಕೇಂದ್ರ ಮತ್ತು ರೈತರ ನಡುವೆ ಹಲವಾರು ಸುತ್ತಿನ ಮಾತುಕತೆ ನಡೆದಿದ್ದರೂ ಇಲ್ಲಿಯವರೆಗೆ ಯಾವುದೇ ರೀತಿಯ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.
ಕೃಷಿ ಕಾನೂನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ದೆಹಲಿ ಚಲೋ ಚಳವಳಿ ನಡೆಸುತ್ತಿದ್ದಾರೆ. ರೈತರು ಮತ್ತು ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ, ಸಮಸ್ಯೆ ಪರಿಹಾರವಾಗಿಲ್ಲ.
मंत्रियों ने कृषि कानूनों के खिलाफ प्रदर्शन करने वालों को खालिस्तानी, पाकिस्तानी और चीनी एजेंट, माओवादी और नवीनतम टुकडे टुकडे गिरोह का बताया।
— P. Chidambaram (@PChidambaram_IN) December 13, 2020
यदि आप इन सभी श्रेणियों से थक चुके हैं, तो इसका मतलब है कि हजारों प्रदर्शनकारियों के बीच कोई किसान नहीं हैं! अगर किसान नहीं हैं, तो सरकार उनसे बात क्यों कर रही है?
— P. Chidambaram (@PChidambaram_IN) December 13, 2020
Delhi Chalo: ದೆಹಲಿ-ಜೈಪುರ ಹೆದ್ದಾರಿ ತಡೆಗೆ ರೈತರ ಸಿದ್ಧತೆ; ಪಂಜಾಬ್-ಹರ್ಯಾಣ ಗಡಿಯಲ್ಲಿ ಖಾಲಿಸ್ತಾನಿ ಕರಿನೆರಳು
Published On - 7:12 pm, Sun, 13 December 20