ಜಾರ್ಖಂಡ್‌ನಲ್ಲಿ ಭಯೋತ್ಪಾದನೆಗೆ ಸಮನಾರ್ಥಕವಾಗಿರುವ ಪೀಪಲ್ಸ್ ಲಿಬರೇಷನ್ ಫ್ರಂಟ್ ಆಫ್ ಇಂಡಿಯಾ ಮುಖ್ಯಸ್ಥ ದಿನೇಶ್ ಗೋಪ್ನನ್ನು ಎನ್‌ಐಎ ಬಂಧಿಸಿದೆ. ಜಾರ್ಖಂಡ್ ಪೊಲೀಸರು ದಿನೇಶ್ ಗೋಪ್ ಹುಡುಕಿಕೊಟ್ಟವರಿಗೆ 25 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಎನ್‌ಐಎ ಕೂಡ 5 ಲಕ್ಷ ರೂ ಬಹುಮಾನ ಘೋಷಿಸಿತ್ತು. ಗೋಪೆಯನ್ನು ನೇಪಾಳದಲ್ಲಿ ಬಂಧಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಆತನನ್ನು ಬಂಧಿಸಿದೆ. ಇದೀಗ ದೆಹಲಿಯಿಂದ ರಾಂಛಿಗೆ ಕರೆತರಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಾರ್ಖಂಡ್ ಪೊಲೀಸರು ಹಾಗೂ ಎನ್‌ಐಎ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ನಿಷೇಧಿತ ನಕ್ಸಲೀಯ ಸಂಘಟನೆ ಪಿಎಲ್‌ಎಫ್‌ಐ ಮುಖ್ಯಸ್ಥ ದಿನೇಶ್ ಗೋಪ್ನನ್ನು ಬಂಧಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಜಾರ್ಖಂಡ್‌ನ ವಿವಿಧ ರಾಜ್ಯಗಳಲ್ಲಿ ಈತನ ವಿರುದ್ಧ 150ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.ದಿನೇಶ್ ಗೋಪ್ ವೇಷ ಬದಲಿಸಿ ನೇಪಾಳದಲ್ಲಿ ಓಡಾಡಿಕೊಂಡಿದ್ದ, ಕಳೆದ ವರ್ಷ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದ, ಅಂತಿಮವಾಗಿ ಎನ್‌ಐಎ ವಿಶೇಷ ತಂಡ ಜಾರ್ಖಂಡ್ ಪೊಲೀಸರ ಸಹಾಯದಿಂದ ಆತನನ್ನು ಬಂಧಿಸಿದೆ.
ಮತ್ತಷ್ಟು ಓದಿ: ಉಗ್ರರು, ದೇಶಭಕ್ತರನ್ನ ಒಂದೇ ತಕ್ಕಡಿಯಲ್ಲಿ ನೋಡುತ್ತಿದ್ದಾರೆ; ಕಾಂಗ್ರೆಸ್ ವಿರುದ್ದ ಸಿಟಿ ರವಿ ವಾಗ್ದಾಳಿ
ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಗುದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಳೆದ ವರ್ಷ ನಡೆದ ಎನ್‌ಕೌಂಟರ್‌ನಿಂದ ಗೋಪೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ಉದ್ಯಮಿಗಳು ಮತ್ತು ಗುತ್ತಿಗೆದಾರರನ್ನು ಭಯಭೀತರನ್ನಾಗಿಸಲು ಅವರಿಂದ ಹಣ ವಸೂಲಿ ಮಾಡುವಲ್ಲಿ ಗೋಪ್ ಭಾಗಿಯಾಗಿದ್ದರು ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ದಿನೇಶ್ ಗೋಪ್ ಮೇಲೆ ಹಲವು ಗಂಭೀರ ಆರೋಪಗಳಿವೆ. ಭದ್ರತಾ ಪಡೆಗಳ ಮೇಲೆ ದಾಳಿ ಮಾಡಿದ್ದಷ್ಟೇ ಅಲ್ಲದೆ ಸಾಲ ವಸೂಲಿ, ಗುತ್ತಿಗೆದಾರರು-ವ್ಯಾಪಾರಿಗಳಿಗೆ ಬೆದರಿಕೆ ಹಾಕುವುದು ಅಷ್ಟೇ ಅಲ್ಲದೆ ಉಗ್ರಗಾಮಿಗಳಿಗೆ ಧನಸಹಾಯ ಮಾಡಿರುವ ಆರೋಪವು ಆತನ ಮೇಲಿದೆ.
ಆತನ ಪಿಎಲ್‌ಎಫ್‌ಐ ಜಾರ್ಖಂಡ್‌ನಲ್ಲಿ ನೂರಾರು ಭಯೋತ್ಪಾದಕ ಘಟನೆಗಳಲ್ಲಿ ಭಾಗಿಯಾಗಿದೆ ಮತ್ತು ನಿಷೇಧಿತ ನಕ್ಸಲ್ ಸಂಘಟನೆಗೆ ಸುಲಿಗೆಯೇ ಮುಖ್ಯ ಆದಾಯದ ಮೂಲವಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ