ಉಗ್ರರು, ದೇಶಭಕ್ತರನ್ನ ಒಂದೇ ತಕ್ಕಡಿಯಲ್ಲಿ ನೋಡುತ್ತಿದ್ದಾರೆ; ಕಾಂಗ್ರೆಸ್​ ವಿರುದ್ದ ಸಿಟಿ ರವಿ ವಾಗ್ದಾಳಿ

ಕಾಂಗ್ರೆಸ್ ನಿನ್ನೆ(ಮೇ.2) ತನ್ನ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದೆ. ಅದರಲ್ಲಿ ಭಜರಂಗದಳ ನಿಷೇಧದ ಬಗ್ಗೆ ಉಲ್ಲೇಖಿಸಲಾಗಿದ್ದು, ಈ ಕುರಿತು ‘ಉಗ್ರರು, ದೇಶಭಕ್ತರನ್ನ ಒಂದೇ ತಕ್ಕಡಿಯಲ್ಲಿ ನೋಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸಿಟಿ ರವಿ ಕಾಂಗ್ರೆಸ್​ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಉಗ್ರರು, ದೇಶಭಕ್ತರನ್ನ ಒಂದೇ ತಕ್ಕಡಿಯಲ್ಲಿ ನೋಡುತ್ತಿದ್ದಾರೆ; ಕಾಂಗ್ರೆಸ್​ ವಿರುದ್ದ ಸಿಟಿ ರವಿ ವಾಗ್ದಾಳಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: May 03, 2023 | 9:53 AM

ಚಿಕ್ಕಮಗಳೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election)ಗೆ ಕೆಲವೆ ದಿನಗಳು ಬಾಕಿಯಿದ್ದು, ಉಭಯ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡಿದೆ. ಅದರಂತೆ ಕಾಂಗ್ರೆಸ್ ನಿನ್ನೆ(ಮೇ.2) ತನ್ನ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ದು, ಭಜರಂಗದಳ ನಿಷೇಧದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಕುರಿತು ‘ ಕಾಂಗ್ರೆಸ್​ಗೆ ತಾಲಿಬಾನಿಗಳಿಗೂ ರಾಷ್ಟ್ರಭಕ್ತರಿಗೂ ವ್ಯತ್ಯಾಸ ಗೊತ್ತಿಲ್ಲ. ಇದು ಕಾಂಗ್ರೆಸ್ ಪಕ್ಷದ ಬೌದ್ಧಿಕ ದಿವಾಳಿತನ, ‘ಉಗ್ರರು, ದೇಶಭಕ್ತರನ್ನು ಒಂದೇ ತಕ್ಕಡಿಯಲ್ಲಿ ನೋಡುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ದ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್ ಮಾಡ್ತೀವಿ ಎಂಬ ವಿಚಾರ ಕುರಿತು ಮಾತನಾಡಿದ ಶಾಸಕ ಸಿ.ಟಿ.ರವಿ ‘ಈ ರೀತಿಯ ಕಾಂಗ್ರೆಸ್​ ಪಕ್ಷದ ಮನಸ್ಥಿತಿಗೆ ನನ್ನ ಧಿಕ್ಕಾರ. ಇದು ಹನುಮಾನ್​ ನಾಡು, ಇಲ್ಲಿ ಹನುಮನನ್ನ ಆರಾಧಿಸುವಂತ ಭಜರಂಗದಳವನ್ನ, ಈ ದೇಶಭಕ್ತಿ ಸಂಘಟನೆಯನ್ನ ಬ್ಯಾನ್ ಮಾಡಲು ಹೊರಟಿದ್ದೀರಾ, ನಿಮ್ಮ ಆಟ ನಡೆಯುವುದಿಲ್ಲ. ಜನ ನಿಮ್ಮನ್ನ ಬ್ಯಾನ್ ಮಾಡುತ್ತಾರೆ. ಆ ಕಾಲ ದೂರ ಇಲ್ಲ.ಈಗ ಭಜರಂಗದಳವನ್ನ ಬ್ಯಾನ್ ಮಾಡ್ತೀರಾ, ಮುಂದೆ ಹನುಮ ಜಯಂತಿಯನ್ನ ಬ್ಯಾನ್ ಮಾಡುತ್ತಿರಾ. ನಿಮ್ಮ ಮಾನಸಿಕ ಸ್ಥಿತಿ, ಓಲೈಕೆಯ ಪರಮಾವಧಿ ಎಂದರು.

ಇದನ್ನೂ ಓದಿ:ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಚುನಾವಣಾ ಆಯೋಗ ಕೆಂಡ; ರಾಜಕೀಯ ಮುಖಂಡರಿಗೆ ನೀಡಿತು ಖಡಕ್ ಎಚ್ಚರಿಕೆ

ಇದು ಪಾಕಿಸ್ತಾನವನ್ನ, ತಾಲಿಬಾನಿಗಳನ್ನ ಮೀರಿಸಿದ ಮಾನಸಿಕತೆ ಕಾಂಗ್ರೆಸ್​ದ್ದು, ಭಯೋತ್ಪಾದಕರ ಮೇಲೆ ದಾಳಿ ಮಾಡಿದ ಸೈನಿಕರನ್ನು ಕೋರ್ಟ್ ಮಾರ್ಷಲ್ಗೆ ಒಳಪಡಿಸಿದ್ರಿ. ದೇಶಭಕ್ತರನ್ನ, ದೇಶದ್ರೋಹಿಗಳನ್ನು ಒಂದೇ ತಕಡಿಯಲ್ಲಿ ತೂಗುವುದು ನಿಮ್ಮ ಮಾನಸಿಕತೆ. ನಿಮ್ಮ ಕಾಂಗ್ರೆಸ್ ಮುಗಿದು ಹೋಗಬಹುದೇ ಹೊರತು ಭಜರಂಗದಳ ಮುಗಿಸಲಾಗುವುದಿಲ್ಲ. ಹಿಂದೆ ಇದೇ ತರ ಮಾತನಾಡಿದ್ದವರು ಕಳೆದು ಹೋಗಿದ್ದಾರೆ. ನೀವು ರಾಜಕೀಯವಾಗಿ ಮುಗಿದು ಹೋಗ್ತೀರಾ, ಇದಕ್ಕೆ ದೊಡ್ಡಬೆಲೆ ತೆರಬೇಕಾಗುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ ರವಿ‌ ಕಾಂಗ್ರೆಸ್​ ವಿರುದ್ದ ಕಿಡಿಕಾರಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್