ಚುನಾವಣೆ ಕಣದಲ್ಲಿ ಗೋಬಿ ವ್ಯಾಪಾರಿ ಭರ್ಜರಿ ಪ್ರಚಾರ: ಈ ಯುವಕನ ಉದ್ದೇಶವೇನು ಗೊತ್ತಾ?

ಆತ ಗೋಬಿ ಮಂಚೂರಿ ವ್ಯಾಪಾರಿ. ಜಾತ್ರೆ, ಸಂತೆಯಲ್ಲಿ ಅಂಗಡಿ ಹಾಕಿ ಜೀವನ ಮಾಡುವಾತ. ಹಳ್ಳಿ ಹಳ್ಳಿ ವ್ಯಾಪರಕ್ಕೆ ಹೋಗುವಾಗ ಹದಗೆಟ್ಟ ರಸ್ತೆಯಲ್ಲಿ ಅಪಘಾತ ಘಟನೆ, ಮೂಲ ಸೌಕರ್ಯ ಕೊರತೆಯನ್ನ ನೋಡಿ. ಬಡವರ ಸಮಸ್ಯೆ ಬಡವನಿಗೆ ಅರಿಯಲು ಸಾಧ್ಯ ಎಂದು ಇದೀಗ ಗೋಬಿ ವ್ಯಾಪಾರಿ ವಿಧಾನಸಭೆ ಅಖಾಡಕ್ಕೆ ಧುಮಕಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಏಕಾಂಗಿ ಹೋರಾಟ ನಡೆಸಿದ್ದಾರೆ.

ಚುನಾವಣೆ ಕಣದಲ್ಲಿ ಗೋಬಿ ವ್ಯಾಪಾರಿ ಭರ್ಜರಿ ಪ್ರಚಾರ: ಈ ಯುವಕನ ಉದ್ದೇಶವೇನು ಗೊತ್ತಾ?
ಗದಗ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 30, 2023 | 11:23 AM

ಗದಗ: ರಾಜ್ಯ ವಿಧಾನಸಭೆ ಚುನಾವಣಾ(Karnataka Assembly Election) ಕಣ ರಂಗೇರಿದ್ದು, ಉಭಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದೆ. ಅದರಂತೆ ಇಲ್ಲೊಬ್ಬ ಸಾಮಾನ್ಯ ಗೋಬಿ ಮಾಡುವ ಯುವಕ ವಿಧಾನಸಭೆಗೆ ಸ್ಪರ್ಧೆ ಮಾಡಿದ್ದಾನೆ. ಹೌದು ವಿಧಾನಸಭೆ ಅಭ್ಯರ್ಥಿ ಮಾಡಿದ ಗೋಬಿ ಸವಿಯುತ್ತಿರುವ ಗ್ರಾಹಕರು. ಬಡವರ ಸಮಸ್ಯೆ ಅರಿಯಲು ಬಡವನಿಂದಲೇ ಸಾಧ್ಯ ಅಂತಿರೋ ಕ್ಯಾಂಡಿಡೇಟ್.  ಈ ಅಪರೂಪದ ಅಭ್ಯರ್ಥಿ, ಡಿಂಫರೆಂಟ್ ಪ್ರಚಾರ ಮಾಡುತ್ತಿರುವ ದೃಶ್ಯಗಳು ಕಂಡಿದ್ದು, ಗದಗ ಜಿಲ್ಲೆಯ ರೋಣ ಮತಕ್ಷೇತ್ರದಲ್ಲಿ. ‌ಸಂವಿಧಾನ ದತ್ತವಾಗಿ ನಡೆಯುವ ಚುನಾವಣೆಯಲ್ಲಿ ಸಾಮಾನ್ಯನೂ ಸ್ಪರ್ಧಿಸಲು ಅವಕಾಶವಿದೆ ಎಂದು ಅರಿತ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಗೋಬಿ ಮಂಚೂರಿ ವ್ಯಾಪಾರಿ ಶಿವಾನಂದ ರಾಠೋಡ ಎಂಬ ಯುವಕ. ರೋಣ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾನೆ.

ಗೋಬಿ ಮಂಜೂರಿ ಮಾಡಿ ಜೀವನ ಸಾಗಿಸುವ ಶಿವಾನಂದ ರಾಠೋಡ

ಇತ ವಿವಿಧ ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಸಂತೆಗಳಲ್ಲಿ ಗೋಬಿ ಮಂಜೂರಿ ಮಾಡಿ ಜೀವನ ಸಾಗಿಸುತ್ತಾನೆ. ಕಡುಬಡತನದಿಂದ ಬಂದಿರುವ ಲಂಬಾಣಿ ಕುಟುಂಬದ ಇತನಿಗೆ ವಾಸಿಸಲು ಸ್ವಂತ ಮನೆಯಿಲ್ಲ. ಸರ್ಕಾರದಿಂದ ಬಂದಿರುವ ಬೇರೊಬ್ಬರ ಆಶ್ರಯ ಮನೆಯಲ್ಲಿ ಬಾಡಿಗೆ ಇದ್ದಾನೆ. ಆದರೆ ಆ ಮನೆಗೂ ವಿದ್ಯುತ್‌ ಸಂಪರ್ಕ ಇಲ್ಲ. 30 ವರ್ಷಗಳ ಹಿಂದೆಯೇ ನಿರ್ಮಿಸಲಾದ ಇಲ್ಲಿನ ಮನೆಗಳ ನಿವಾಸಿಗಳಿಗೆ ಇಂದಿಗೂ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಇಲ್ಲ.

ಇದನ್ನೂ ಓದಿ:Daily Horoscope: ಈ ರಾಶಿಯ ರಾಜಕೀಯ ವ್ಯಕ್ತಿಗಳು ಹೆಚ್ಚಿನ ಲಾಭ ಪಡೆಯಬಹುದು

ಜನರ ಕಷ್ಟಗಳನ್ನ ಸಮೀಪದಿಂದಲೇ ನೋಡಿ, ಅನುಭವಿಸಿ ಚುನಾವಣಾ ಕಣಕ್ಕೀಳಿದ

ವ್ಯಾಪರಕ್ಕಾಗಿ ರೋಣ ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ಹೋದಾಗ ಸರಿಯಾದ ರಸ್ತೆ ಇಲ್ಲದೇ ರಸ್ತೆಗಳಲ್ಲಿ ನಡೆಯುವ ಅಪಘಾತಗಳು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಪರದಾಡುವ ಜನರು, ಶೌಚಾಲಯದ ವ್ಯವಸ್ಥೆ ಇಲ್ಲದೆ ಮಹಿಳೆಯರು ಅನುಭವಿಸುತ್ತಿರುವ ಕಷ್ಟಗಳನ್ನು ಸಮೀಪದಿಂದಲೇ ನೋಡಿದ ಇತ, ಯಾರ ಬಳಿ ಹೋದರು ಪರಿಹಾರ ಸಿಕ್ಕಿಲ್ಲ. ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಅವರ ಮುಖಂಡರು ಸ್ಪಂದಿಸಿಲ್ಲ. ಹೀಗಾಗಿ ನಾನೇ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಶಿವಾನಂದ ಹೇಳಿದ್ದಾರೆ.

ಬಡವನಿಂದಲೇ ಬಡವರಿಗೆ ನ್ಯಾಯ ಅನ್ನೋ ಧ್ಯೆಯ ವಾಕ್ಯದೊಂದಿಗೆ ಚುನಾವಣೆಗೆ ಸ್ಪರ್ಧೆ

ನರೇಗಲ್‌ ಪಟ್ಟಣದಲ್ಲಿ ಮನೆ ಇಲ್ಲದ ಎಷ್ಟೋ ಬಡವರು ಬೀದಿಯಲ್ಲಿ, ಖಾಲಿ ಜಾಗಗಳಲ್ಲಿ, ಯಾರದೋ ಹೊಲಗಳಲ್ಲಿ ಶೆಡ್ಡು, ತಗಡು, ಗುಡಿಸಲು ಹಾಕಿಕೊಂಡು ಬಹಳ ಕೇಳಮಟ್ಟದ ಜೀವನ ಸಾಗಿಸುತ್ತಿದ್ದಾರೆ. ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಂತವರಿಗೆ ಮನೆಗಳನ್ನು ನೀಡದೆ ಉಳ್ಳವರಿಗೆ, ಲಾಬಿ ಮಾಡುವವರಿಗೆ, ದುಡ್ಡು ಕೊಡುವ ಶ್ರೀಮಂತರಿಗೆ ಕೊಟ್ಟಿದ್ದಾರೆ. ಆದ್ದರಿಂದ ಸಾಮಾಜಿಕ ನ್ಯಾಯಕ್ಕಾಗಿ ಸ್ಪರ್ಧಿಸಿದ್ದೇನೆ. ಬಡವನಿಂದಲೇ ಬಡವರಿಗೆ ನ್ಯಾಯ ಅನ್ನೋ ಧ್ಯೆಯ ವಾಕ್ಯದೊಂದಿಗೆ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ ಅನ್ನೋದು ಶಿವಾನಂದ ಅವರ ಮಾತು.

ಇದನ್ನೂ ಓದಿ:Amit Shah: ಧಾರವಾಡ, ಗದಗ, ಹಾವೇರಿಯಲ್ಲಿ ಅಮಿತ್ ಶಾ ಅಬ್ಬರದ ಪ್ರಚಾರ; ಮತಬೇಟೆಯೊಂದಿಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಹಳ್ಳಿ ಹಳ್ಳಿಗೆ ವ್ಯಾಪಾರಕ್ಕೆ ಹೋದಾಗ ಹದಗೆಟ್ಟ ರಸ್ತೆಯಲ್ಲಿ ಅಪಘಾತದಲ್ಲಿ ಒದ್ದಾಡುವ ಜನರನ್ನ ನಾನೇ ಆಸ್ಪತ್ರೆಗೆ ದಾಖಲಿಸಿದ್ದೇನೆ. ಈಗಿನ ಜನಪ್ರತಿನಿಧಿಗಳು ಯಾವುದೇ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ನಾನು ರೋಣ ಕ್ಷೇತ್ರಕ್ಕೆ ಸ್ಪರ್ಧೆಸಿದ್ದೇನೆ. ಆಯೋಗ ನನಗೆ ಮಣ್ಣಿನ ಮಡಿಕೆ ಚಿಹ್ನೆ ನೀಡಿದೆ. ಹೀಗಾಗಿ ಶಿವಾನಂದ ಹಳ್ಳಿ ಹಳ್ಳಿಗಳಲ್ಲಿ ಮಣ್ಣಿನ ಮಡಿಕೆ ಕೈಯಲ್ಲಿ ಹಿಡ್ಕೊಂಡು ಮೈಕ್ ನಲ್ಲಿ ಮತಯಾಚನೆ ಮಾಡುತ್ತಿದ್ದಾನೆ. ಇಡೀ ಕ್ಷೇತ್ರದಲ್ಲಿ ಏಕಾಂಗಿ ಹೋರಾಟ ನಡೆಸಿದ್ದಾನೆ. ಉರಿಯುವ ಬಿಸಿಲಿನಲ್ಲಿ ಶಿವಾನಂದನ ಪ್ರಯತ್ನಕ್ಕೆ ಕ್ಷೇತ್ರದ ಜನರು ಮರುಗಿದ್ದಾರೆ.

ಗೆಳೆಯರನ್ನ ಪ್ರಚಾರಕ್ಕೆ ಕರೆದುಕೊಂಡು ಹೋದರೆ, ಊಟ ಕೊಡಿಸಲು ದುಡ್ಡಿಲ್ಲ

ಹೌದು ಗೆಳೆಯರು ನಿನ್ನ ಪರ ಪ್ರಚಾರಕ್ಕೆ ಬರ್ತೀನಿ ಅಂದರೆ, ಬೇಡ ಅಂತಿದ್ದಾನೆ. ‘ನನ್ನ ಹತ್ತಿದ ಹಣವಿಲ್ಲ. ನಿಮಗೆ ಊಟ ಮಾಡಿಸಲೂ ನನ್ನ ಬಳಿ ಹಣವಿಲ್ಲ ಹೀಗಾಗಿ ಬೇಡ. ನಾನೊಬ್ಬನೇ ಏಕಾಂಗಿ ಹೋರಾಟ ಮಾಡ್ತೀನಿ ಎನ್ನುತ್ತಿದ್ದಾರೆ. ಕಳೆದೆರಡು ವರ್ಷದಿಂದ ಚುನಾವಣೆಗೆ ತಯಾರಿ ಮಾಡಿಕೊಂಡು ಬಂದಿರುವೆ. ಪ್ರತಿ ಜಾತ್ರೆಯಲ್ಲಿ ನನ್ನ ದುಡಿಮೆಯಲ್ಲಿ 500 ರೂಪಾಯಿ ಚುನಾವಣೆ ಖರ್ಚು ಎಂದು ತೆಗೆದು ಇಟ್ಟಿದ್ದೆ. ಅದೇ ಹಣವನ್ನು ಬಳಕೆ ಮಾಡುತ್ತಿದ್ದೇನೆ ಎಂದರು.

ಇದನ್ನೂ ಓದಿ:ಗದಗ: ಚುನಾವಣಾ ಪ್ರಚಾರದಲ್ಲಿ ಕೂಲ್ ಡ್ರಿಂಕ್ಸ್ ಮಾರಾಟಕ್ಕೆ ಬಂದ ವ್ಯಾಪಾರಿಗೆ ಭಾರೀ ನಷ್ಟ; ಕಾರಣ ಏನು ಗೊತ್ತಾ?

ಎರಡು ವರ್ಷದಿಂದ ಸಂವಿಧಾನವನ್ನು ಓದುತ್ತಿರುವ ಶಿವಾನಂದ

ಶಿವಾನಂದ ಎಸ್​ಎಸ್​ಎಲ್​ಸಿ ಅನುತ್ತೀರ್ಣನಾಗಿದ್ದಾನೆ. ಆದರೆ, ಎರಡು ವರ್ಷದಿಂದ ಡಾ. ಬಿ.ಆರ್ ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನವನ್ನು ಓದುತ್ತಿದ್ದಾರಂತೆ. ಆದಕಾರಣ ನನ್ನಲ್ಲಿ ಬದಲಾವಣೆಗಳನ್ನು ಕಂಡುಕೊಂಡಿದ್ದೇನೆ. ನನಗೂ ಸ್ಪರ್ಧಿಸುವ, ಕೇಳುವ, ಪಡೆಯುವ ಹಕ್ಕಿದೆ ಎಂದು ಸಂವಿಧಾನ ತಿಳಿಸಿದೆ. ಅದರಂತೆ ನ್ಯಾಯ ನೀತಿ, ಅಭಿವೃದ್ದಿ, ಸಮಾನತೆಗಾಗಿ ಸ್ಪರ್ಧೆ ಮಾಡಿದ್ದೇನೆ ಎನ್ನುತ್ತಿದ್ದಾರೆ. ಕೈಯಲ್ಲಿ ಮೈಕ್‌, ಮಡಿಕೆ ಹಿಡಿದು, ಬಸ್ಸುಗಳಲ್ಲಿ, ಬಸ್‌ ನಿಲ್ದಾಣಗಳಲ್ಲಿ, ವ್ಯಾಪರಸ್ಥರಲ್ಲಿ, ವಿವಿಧ ಗ್ರಾಮಗಳಿಗೆ ಹೋಗಿ ಜಾತಿ, ಧರ್ಮ, ಹಣ, ಅಂತಸ್ತು ನೋಡದೆ ಸಾಮಾನ್ಯ ಕಾರ್ಮಿಕನಾದ ನನಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಡಿಫರೆಂಟ್ ಅಭ್ಯರ್ಥಿಗೆ ಮತದಾರರು ಯಾವ ರೀತಿ ಸ್ಪಂದಿಸ್ತಾರೆ ಎನ್ನುವುದು ಮೇ 10ರಂದು ಗೊತ್ತಾಗಲಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್