ಭಾರತೀಯ ದ್ವೀಪ ಪ್ರದೇಶದಲ್ಲಿ ಹಾರುವ ಬಲೂನ್ ರೀತಿಯ ವಸ್ತು ಪತ್ತೆ: ವರದಿ

|

Updated on: Feb 25, 2023 | 2:47 PM

ಬಂಗಾಳ ಕೊಲ್ಲಿಯ ಭಾರತದ ಕ್ಷಿಪಣೆ ಪರಿಕ್ಷಾ ಪ್ರದೇಶಗಳಿಗೆ ಸಮೀಪದಲ್ಲಿದೆ. ಹಾಗೂ ಇದು ಚೀನಾ ಮತ್ತು ಉತ್ತರ ಏಷ್ಯಾದ ರಾಷ್ಟಗಳಿಗೆ ಶಕ್ತಿ ಮತ್ತು ಇತರ ಸರಕುಗಳ ಪೂರೈಕೆಗೆ ಪ್ರಮುಖ ಅಡಚಣೆಯಾಗಿ ಕಾರ್ಯನಿರ್ವಹಿಸುತ್ತದೆ.

ಭಾರತೀಯ ದ್ವೀಪ ಪ್ರದೇಶದಲ್ಲಿ ಹಾರುವ ಬಲೂನ್ ರೀತಿಯ ವಸ್ತು ಪತ್ತೆ: ವರದಿ
ಸಾಂದರ್ಭಿಕ ಚಿತ್ರ
Follow us on

ಸುಮಾರು ಒಂದು ವರ್ಷದ ಹಿಂದೆ, ನವದೆಹಲಿಗಿಂತಲೂ (New Delhi) ಸಿಂಗಾಪುರಕ್ಕೆ (Singapore) ಸಮೀಪದಲ್ಲಿರುವ ಭಾರತೀಯ ದ್ವೀಪ ಸರಪಳಿಯಲ್ಲಿ ಸ್ಥಳೀಯರು ಆಕಾಶದಲ್ಲಿ ಒಂದು ದೈತ್ಯ ಬಲೂನ್ ರೀತಿಯ ಅಪರಿಚಿತ ವಸ್ತುವನ್ನು ಗುರುತಿಸಿದರು. ಆ ಸಮಯದಲ್ಲಿ ಅದು ಏನು ಎಂಬುದು ಯಾರಿಗೂ ತಿಳಿದಿರಲಿಲ್ಲ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿನ ನೂರಾರು ಜನರು ಈ ಬೆಳಕು ಚೆಲ್ಲುವ ಅಸಾಮಾನ್ಯ ಹಾರು ಬಲೂನ್‌ನಂತಿರುವ ಫೋಟೋಗಳನ್ನು ಸೆರೆ ಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಈ ಫೋಟೊಗಳನ್ನು ನೋಡಿದ ಭಾರತದ ರಕ್ಷಣಾ ವ್ಯವಸ್ಥೆಯು ಒಂದು ಕ್ಷಣ ಗಾಬರಿಗೊಂಡಿತು. ಈ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿರುವ ಭಾರತದ ಕ್ಷಿಪಣಿ ಪರೀಕ್ಷಾ ಪ್ರದೇಶಕ್ಕೆ ಸಮೀಪದಲ್ಲಿದೆ. ಹಾಗೂ ಈ ದ್ವೀಪ ಮಲಕ್ಕಾ ಸಂಧಿಯ ಬಳಿಯಲ್ಲಿದೆ. ಇದು ಚೀನಾ ಮತ್ತು ಇತರ ಉತ್ತರ ಏಷ್ಯಾದ ರಾಷ್ಟಗಳಿಗೆ ಇಂಧನ ಮತ್ತು ಇತರ ಸರಕುಗಳ ಪೂರೈಕೆಗೆ ಪ್ರಮುಖ ಅಡಚಣೆಯಾಗಿ ಕಾರ್ಯನಿರ್ವಹಿಸುತ್ತದೆ.

ಚೀನಾದ ಕಣ್ಗಾವಲಿನ ಭಾಗವಾಗಿದೆ ಎಂದು ಶಂಕಿಸಲಾಗಿರುವ ಈ ಅಪರಿಚಿತ ಹಾರುವ ಬಲೂನ್‌ನನ್ನು ಅಮೆರಿಕ ಹೊಡೆದುರುಳಿಸಿದ ನಂತರ, ಭಾರತೀಯ ಅಧಿಕಾರಿಗಳು ಇದೇ ರೀತಿಯ ಬೆದರಿಕೆಗಳನ್ನು ಪತ್ತೆಹಚ್ಚುವ ಮತ್ತು ಭವಿಷ್ಯದಲ್ಲಿ ಹೆಚ್ಚು ವೇಗವಾಗಿ ಬೆದರಿಕೆಗಳಿಗೆ ಪ್ರತಿಕ್ರಿಯಿಸುವ ಸಾಮಾರ್ಥ್ಯವನ್ನು ಸುಧಾರಿಸಲು ಪ್ರೋಟೋಕಾಲ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತ ಚೀನೀ ಕಂಗಾವಲು ಬಲೂನ್‌ನನ್ನು ಹೊಡೆದುರುಳಿಸಲು ಅಮೆರಿಕದ Aim-9X ಸೈಡ್‌ವಿಂಡರ್ ಕ್ಷಿಪಣಿಯನ್ನು ಬಳಸಿದೆ. ಭಾರತವು ಫೈಟರ್ ಜೆಟ್‌ಗಳು ಅಥವಾ ಟ್ರಾನ್ಸ್ಪೋರ್ಟರ್ ಏರ್‌ಕ್ರಾಫ್ಟ್​​ಗಳಿಗೆ ಲಗತ್ತಿಸಲಾಗ ಹೆವ್ವಿ ಮಿಷಿನ್‌ಗಳಂತಹ ಅಗ್ಗದ ಆಯ್ಕೆಯನ್ನು ಬೆಂಬಲಿಸುತ್ತದೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಶಂಕಿತ ಬಲೂನ್ ರೀತಿಯ ವಸ್ತುವು ದ್ವೀಪದ ಮೇಲೆ ಹಠಾತ್ತನೆ ಕಾಣಿಸಿಕೊಂಡಿತು, ಇದು ದಾರಿಯಲ್ಲಿದ್ದ ಹಲವಾರು ಭಾರತೀಯ ರಾಡರ್ ಸಿಸ್ಟಮ್‌ಗಳನ್ನು ದಾಟಿ ಹೋಯಿತು. ಅಧಿಕಾರಿಗಳು ಬಲೂನ್‌ನ ಮೂಲವನ್ನು ನಿರ್ಧರಿಸುವ ಮೊದಲು ಹಾಗೂ ಅದನ್ನು ಉರುಳಿಸಬೇಕೆ ಎಂಬ ನಿರ್ಧಾರಕ್ಕೆ ತಲುಪುವ ಮೊದಲೇ, ಆ ವಸ್ತುವು ಸಾಗರದ ನೈರುತ್ಯ ಭಾಗದ ಕಡೆ ಚಲಿಸಿತು ಎಂದು ಈ ವಿಷಯಗಳ ಬಗ್ಗೆ ತಿಳಿದಿರುವ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Stratospheric Balloons: ಅಮೆರಿಕ ಮೇಲೆ ಹಾರಾಡಿದ ಚೀನಾದ ನಿಗೂಢ ಬಲೂನ್​ಗಳು ಹೇಗೆ ಕೆಲಸ ಮಾಡುತ್ತವೆ? ಇಲ್ಲಿದೆ ವಿವರ

ಭಾರತೀಯ ಅಧಿಕಾರಿಗಳು ಈ ಬಲೂನಿನ ಮೂಲದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಭಾರತವು ಈ ವರ್ಷ 20 ಗುಂಪುಗಳ ಸಭೆಯನ್ನು ಆಯೋಜಿಸುತ್ತಿದೆ ಮತ್ತು ಅಭಿವೃದ್ಧಿಶೀಲ ರಾಷ್ಟಗಳ ಸಾಲದ ಹೊರೆಯನ್ನು ತಗ್ಗಿಸುವಂತಹ ಗುರಿಗಳ ಮೇಲೆ ಪ್ರಗತಿ ಸಾಧಿಸಲು ನೋಡುತ್ತಿರುವ ಕಾರಣ, ಈ ರಾಜತಾಂತ್ರಿಕ ಬಿರುಕನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ನೌಕಾಪಡೆ ಮತ್ತು ವಾಯುಪಡೆಯ ಪ್ರತಿನಿಧಿಗಳ ಪ್ರತಿಕ್ರಿಯೆಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ.

ಈ ಬಲೂನ್ ರೀತಿಯ ಸಾಧನವು ಹವಾಮಾನ ದತ್ತಾಂಶವನ್ನು ಸಂಗ್ರಹಿಸುವ ನಾಗರಿಕ ಕ್ರಾಫ್ಟ್ ಎಂದು ಚೀನಾದ ಬೀಜಿಂಗ್ ಹೇಳಿಕೆ ನೀಡಿದೆ. ಮತ್ತು ಅದನ್ನು ಹೊಡೆದುರುಳಿಸಲು ಯುದ್ಧ ವಿಮಾನಕ್ಕೆ ಆದೇಶ ನೀಡುವ ಮೂಲಕ ಅಮೆರಿಕ ಈ ಬಗ್ಗೆ ಪ್ರತಿಕ್ರಿಯಿಸಿದೆ ಎಂದು ಹೇಳಲಾಗಿದೆ.

Published On - 2:47 pm, Sat, 25 February 23