China Spy Balloon: ಸ್ಪೈ ಬಲೂನ್‌ಗಳ ಮೂಲಕ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಕಣ್ಣಿಟ್ಟಿದ್ದ ಚೀನಾ
ಚೀನಾದ ಸ್ಪೈ ಬಲೂನ್ಗಳು ಭಾರತ ಸೇರಿದಂತೆ ಹಲವು ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತ ಮತ್ತು ಜಪಾನ್ ಸೇರಿದಂತೆ ಹಲವಾರು ದೇಶಗಳನ್ನು ಗುರಿಯಾಗಿಟ್ಟುಕೊಂಡು ಚೀನಾ ಸ್ಪೈ ಬಲೂನ್‌ಗಳ ಕಾರ್ಯಾಚರಿಸುತ್ತಿತ್ತು
ಚೀನಾದ ಸ್ಪೈ ಬಲೂನ್ಗಳು ಭಾರತ ಸೇರಿದಂತೆ ಹಲವು ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತ ಮತ್ತು ಜಪಾನ್ ಸೇರಿದಂತೆ ಹಲವಾರು ದೇಶಗಳನ್ನು ಗುರಿಯಾಗಿಟ್ಟುಕೊಂಡು ಚೀನಾ ಸ್ಪೈ ಬಲೂನ್‌ಗಳ ಕಾರ್ಯಾಚರಿಸುತ್ತಿತ್ತು. ಕೆಲವು ದಿನಗಳ ಹಿಂದೆ ಚೀನಾದ ಬಲೂನ್ಗಳನ್ನು ಯುಎಸ್ ಮಿಲಿಟರಿ ವಿಮಾನಗಳ ಮೂಲಕ ಹೊಡೆದುರುಳಿಸಿತು ಎಂದು ಮಾಧ್ಯಮ ವರದಿ ತಿಳಿಸಿದೆ.
ಯುಎಸ್ ಮಿಲಿಟರಿ ಸೂಕ್ಷ್ಮ ಯುಎಸ್ನ ಸೂಕ್ಷ್ಮ ಪ್ರದೇಶಗಳಲ್ಲಿ ತೂಗಾಡುತ್ತಿರುವ ಚೀನಾದ ಕಣ್ಗಾವಲು ಬಲೂನ್ ಅನ್ನು ನಾಶಪಡಿಸಿದ ದಿನಗಳ ನಂತರ ವರದಿ ಬಂದಿದೆ. ಚೀನಾದ ಬಲೂನ್ ಮಾಹಿತಿಯನ್ನು ಅಮೆರಿಕದ ಅಧಿಕಾರಿಗಳು ಭಾರತ ಸೇರಿದಂತೆ ತಮ್ಮ ಸ್ನೇಹಿತರು ಮತ್ತು ಮಿತ್ರರಾಷ್ಟ್ರಗಳಿಗೆ ತಿಳಿಸಿದ್ದಾರೆ. ದಕ್ಷಿಣ ಕೆರೊಲಿನಾದ ಕರಾವಳಿಯ ಅಟ್ಲಾಂಟಿಕ್ ಸಾಗರದ ಮೇಲೆ ಶನಿವಾರ ಯುದ್ಧ ವಿಮಾನದಿಂದ ಬಲೂನ್ ನಾಶಪಡಿಸಲಾಯಿತು.
ಮತ್ತಷ್ಟು ಓದಿ: Stratospheric Balloons: ಅಮೆರಿಕ ಮೇಲೆ ಹಾರಾಡಿದ ಚೀನಾದ ನಿಗೂಢ ಬಲೂನ್ಗಳು ಹೇಗೆ ಕೆಲಸ ಮಾಡುತ್ತವೆ? ಇಲ್ಲಿದೆ ವಿವರ
ಸ್ಪೈ ಬಲೂನ್, ಜಪಾನ್, ಭಾರತ, ವಿಯೆಟ್ನಾಂ, ತೈವಾನ್ ಮತ್ತು ಫಿಲಿಪೈನ್ಸ್ ಸೇರಿದಂತೆ ಹಲವಾರು ದೇಶಗಳಲ್ಲಿನ ಮಿಲಿಟರಿ ಬಗ್ಗೆ ಗುಪ್ತವಾಗಿ ಮಾಹಿತಿ ಸಂಗ್ರಹಿಸುತ್ತಿತ್ತು. ಒಟ್ಟು ಐದು ಕಡೆಗಳಲ್ಲಿ ಬಲೂನ್ ನಾಶಮಾಡಲಾಗಿದೆ.
ಅಟ್ಲಾಂಟಿಕ್ ಸಾಗರದಲ್ಲಿ ಚೀನಾದ ಶಂಕಿತ ಬೇಹುಗಾರಿಕೆಯ ಬಲೂನ್ನನ್ನು ಹೊಡೆದುರುಳಿಸಿದ ಅಮೆರಿಕಕ್ಕೆ ಚೀನಾವು ಎಚ್ಚರಿಕೆ ಸಂದೇಶ ರವಾನಿಸಿದೆ.
ಅಮೆರಿಕದ ಸೇನಾ ಪಡೆಯು ಬಲೂನನ್ನು ಹೊಡೆದುರಿಳಿಸಿದ್ದಲ್ಲದೆ ಅದರ ಅವಶೇಷಗಳನ್ನು ವಶಪಡಿಸಿಕೊಳ್ಳಳು ಕಾರ್ಯಪ್ರವೃತ್ತವಾಗಿವೆ. ಇದಕ್ಕೆ ಚೀನಾ ತೀಕ್ಷ್ಣಪ್ರತಿಕ್ರಿಯೆ ನೀಡಿದ್ದು, ಇದರ ಪರಿಣಾಮವನ್ನು ಅಮೆರಿಕ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಬಲೂನನ್ನು ಹೊಡೆದುರುಳಿಸಿದ ಸೇನಾ ಪಡೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಭಿನಂದಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ