UP Assembly: ಮೊದಲ ಬಾರಿ ಅಬ್ಬರಿಸಿದ ಯೋಗಿ, ಸನ್ಯಾಸಿಯ ಕೋಪಕ್ಕೆ ಗಾಬರಿಗೊಂಡ ವಿರೋಧ ಪಕ್ಷ
ಉತ್ತರ ಪ್ರದೇಶ ರಾಜ್ಯದ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೊದಲ ಬಾರಿಗೆ ಅಬ್ಬರಿಸಿದ್ದಾರೆ. ಇಂದು (ಫೆ.25) ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲಕ್ನೋ: ಉತ್ತರ ಪ್ರದೇಶ ರಾಜ್ಯದ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಮೊದಲ ಬಾರಿಗೆ ಅಬ್ಬರಿಸಿದ್ದಾರೆ. ಇಂದು (ಫೆ.25) ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ (Akhilesh Yadav) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಂದು ದಿನದ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಯನ್ನು ಸಾರ್ವಜನಿಕವಾಗಿ ಕೊಂದ ಪ್ರಕರಣದ ಬಗ್ಗೆ ಕಠಿಣ ಪ್ರಶ್ನೆಗಳನ್ನು ವಿರೋಧ ಪಕ್ಷ ಕೇಳಿದ ನಂತರ ಯೋಗಿ ಉತ್ತರಿಸಿದ್ದಾರೆ. ಸಂತ್ರಸ್ತೆಯ ಕುಟುಂಬದವರು ಆರೋಪಿಸಿರುವ ಅತೀಕ್ ಅಹ್ಮದ್ನ್ನು ಸಮಾಜವಾದಿ ಪಕ್ಷವು ಪೋಷಿಸಿದ ಮಾಫಿಯಾದ ಭಾಗವಾಗಿದ್ದಾರೆ ಮತ್ತು ಈಗ ನಾವು ಅದರ ಬೆನ್ನು ಮುರಿಯಲು ಮಾತ್ರ ಕೆಲಸ ಮಾಡಿದ್ದೇವೆ ಎಂಬುದು ನಿಜವಲ್ಲವೇ? ಎಂದು ಯೋಗಿ ಆದಿತ್ಯನಾಥ್, ಅಖಿಲೇಶ್ ಯಾದವ್ ಕಡೆಗೆ ಬೆರಳು ತೋರಿಸುತ್ತಾ ಹೇಳಿದರು.
ಸ್ಪೀಕರ್ ಸರ್, ಅವರು ಎಲ್ಲಾ ವೃತ್ತಿಪರ ಕ್ರಿಮಿನಲ್‌ಗಳು ಮತ್ತು ಮಾಫಿಯಾಗಳ ಗಾಡ್‌ಫಾದರ್. ಅವರ ರಕ್ತನಾಳಗಳಲ್ಲಿ ಅಪರಾಧವಿದೆ. ಮತ್ತು ನಾನು ಇಂದು ಈ ಸದನಕ್ಕೆ ಹೇಳುತ್ತಿದ್ದೇನೆ, ನಾವು ಈ ಮಾಫಿಯಾವನ್ನು ಈ ನೆಲೆಯಿಂದ ನಾಶ ಮಾಡುತ್ತೇವೆ ಎಂದು ಕೋಪದಲ್ಲೇ ಉತ್ತರಿಸಿದರು. ಹಿಂದೂ ತತ್ವವನ್ನು ಹೊಂದಿರುವ ಹಾಗೂ ಹಿಂದೂ ಯುವ ವಾಹಿನಿಯ ಸಂಸ್ಥಾಪಕ ನಾಯಕರಾಗಿ 2017ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ, ಒಬ್ಬ ಸನ್ಯಾಸಿಯಾಗಿ ಈ ಪ್ರಕೋಪ ಅಲ್ಲಿ ನೆರೆದಿದ್ದ ರಾಜಕಾರಣಿಗಳಿಗೆ ಅಪರೂಪವಾಗಿತ್ತು. ಜೊತೆಗೆ ಯೋಗಿ ಇದೆ ಮೊದಲ ಬಾರಿ ಅಕ್ರೋಶಭರಿತವಾಗಿ ಮಾತನಾಡಿದ್ದು ಎಲ್ಲರನ್ನೂ ಒಂದು ಬಾರಿ ಆಚ್ಚರಿಗೊಳಿಸಿತ್ತು.
ವಿಧಾನಸಭೆಯಲ್ಲಿ ಗದ್ದಲ ಉಂಟಾದಾಗ, ಸಮಾಜವಾದಿ ಪಕ್ಷದ ನಾಯಕ ಅಪರಾಧಿಗಳು ನಿಮ್ಮವರು ಎಂದು ಉಲ್ಟಾ ಹೊಡೆದಿದ್ದಾರೆ. ರಾಮ ರಾಜ್ಯದಲ್ಲಿ ಪೊಲೀಸರು ಸಂಪೂರ್ಣ ವೈಫಲ್ಯವಾಗಿದ್ದಾರೆ ಎಂದು ಆರೋಪಿಸಿದ್ದರು. ಹಗಲು ಗುಂಡಿನ ದಾಳಿ ನಡೆಯುತ್ತಿದೆ, ಬಾಂಬ್‌ಗಳನ್ನು ಎಸೆಯಲಾಗುತ್ತಿದೆ ಮತ್ತು ಒಬ್ಬ ಸಾಕ್ಷಿಯನ್ನು ಕೊಲ್ಲಲಾಗಿದೆ. ಪೊಲೀಸರು ಏನು ಮಾಡುತ್ತಿದ್ದಾರೆ? ಸರ್ಕಾರ ಏನು ಮಾಡುತ್ತಿದೆ? ಡಬಲ್ ಇಂಜಿನ್ ಸರ್ಕಾರ ಎಲ್ಲಿವೆ? ಇದು ಚಲನಚಿತ್ರ ಶೂಟಿಂಗ್ ಆಗಿದೆಯೇ ಎಂದು ಅಖಿಲೇಶ್ ಯಾದವ್ ಕೇಳಿದರು.
ಇದನ್ನೂ ಓದಿ: Yogi Adityanath ಪ್ರಧಾನಿ ಮೋದಿ ಜತೆ ಯೋಗಿ ಆದಿತ್ಯನಾಥ ಮಾತುಕತೆ ; ಉತ್ತರ ಪ್ರದೇಶದಲ್ಲಿನ ಬದಲಾವಣೆಗಳ ಬಗ್ಗೆ ಚರ್ಚೆ
ಮುಖ್ಯಮಂತ್ರಿ ಯೋಗಿ ಅಖಿಲೇಶ್ ಯಾದವ್ಗೆ ಶರಮ್ ತೋ ತುಮ್ಹೇ ಕರ್ನಿ ಚಾಹಿಯೇ, ಅಪ್ನೆ ಬಾಪ್ ಕಿ ಸಮ್ಮಾನ್ ನಹೀ ಕರ್ ಪಾಯೇ ತುಮ್ (ನಿಮಗೆ ನಾಚಿಕೆಯಾಗಬೇಕು, ನಿಮ್ಮ ತಂದೆಯನ್ನು ಸಹ ನೀವು ಗೌರವಿಸಲು ಸಾಧ್ಯವಿಲ್ಲ)” ಎಂದು ಹೇಳಿದರು. ಶುಕ್ರವಾರ ಪ್ರಯಾಗ್‌ರಾಜ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಶಾಸಕನ ಹತ್ಯೆ ಪ್ರಕರಣದ ಸಾಕ್ಷಿಯ ಹತ್ಯೆಯ ಬಗ್ಗೆ ಪ್ರತಿಪಕ್ಷಗಳ ಪ್ರಶ್ನೆಗಳಿಂದ ತೀವ್ರ ಮಾತಿನ ಚಕಮಕಿ ನಡೆಯಿತು. ದಾಳಿಯ ದೃಶ್ಯ ಹಲವು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
2005ರಲ್ಲಿ ಶಾಸಕ ರಾಜು ಪಾಲ್ ಅವರ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರು ಪ್ರಯಾಗರಾಜ್‌ನ ಜನದಟ್ಟಣೆಯ ಮುಖ್ಯ ರಸ್ತೆಯಲ್ಲಿ ಕಾರಿನ ಹಿಂದಿನ ಸೀಟಿನಿಂದ ಇಳಿಯುತ್ತಿದ್ದಾಗ ಅಪರಿಚಿತ ವ್ಯಕ್ತಿಯಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟರು. ಈ ಘಟನೆಯು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸುವ ಆದಿತ್ಯನಾಥ್ ಸರ್ಕಾರದ ಹೇಳಿಕೆಗಳನ್ನು ನಿರಾಕರಿಸಿದೆ, ಸಮಾಜವಾದಿ ಪಕ್ಷವು ಮಾಯಾವತಿಯವರ ಬಿಎಸ್‌ಪಿಯೊಂದಿಗೆ ಬಿಜೆಪಿ ಬೆಳೆಯುತ್ತಿರುವ ಸಾಮೀಪ್ಯದೊಂದಿಗೆ ಈ ಲೋಪ ಕಂಡು ಬಂದಿದೆ.
Published On - 3:44 pm, Sat, 25 February 23