Lakhimpur Kheri Violence: ಲಖಿಂಪುರ ಖೇರಿ ಪ್ರಕರಣ ಗಂಭೀರ ಸ್ವರೂಪದ್ದು ಎಂದ ಕೋರ್ಟ್​, ಕೇಂದ್ರ ಸಚಿವರ ಪುತ್ರನಿಗೆ ಜಾಮೀನು ನಿರಾಕರಣೆ

| Updated By: Lakshmi Hegde

Updated on: Nov 16, 2021 | 9:13 AM

ಲಖಿಂಪುರ ಖೇರಿಯಲ್ಲಿ ಅಕ್ಟೋಬರ್​ 3ರಂದು ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು, ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ಪತ್ರಕರ್ತ ಸಾವನ್ನಪ್ಪಿದ್ದರು. 

Lakhimpur Kheri Violence: ಲಖಿಂಪುರ ಖೇರಿ ಪ್ರಕರಣ ಗಂಭೀರ ಸ್ವರೂಪದ್ದು ಎಂದ ಕೋರ್ಟ್​, ಕೇಂದ್ರ ಸಚಿವರ ಪುತ್ರನಿಗೆ  ಜಾಮೀನು ನಿರಾಕರಣೆ
ಆಶೀಶ್​ ಮಿಶ್ರಾ
Follow us on

ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ(Lakhimpur Kheri )ಯಲ್ಲಿ ನಡೆದ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿ ಹಿಂಸಾಚಾರಕ್ಕೆ ಕಾರಣವಾದ ಪ್ರಕರಣದಲ್ಲಿ ಬಂಧಿತರಾಗಿರುವ ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶಿಶ್​ ಮಿಶ್ರಾ (Ashish Mishra) ಅವರ ಜಾಮೀನು ಅರ್ಜಿಯನ್ನು ಲಖಿಂಪುರ ಖೇರಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ. ಅಂದು ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು, ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ಪತ್ರಕರ್ತ ಸಾವನ್ನಪ್ಪಿದ್ದರು.  ಪ್ರಕರಣದಲ್ಲಿ ಆಶಿಶ್​ ಮಿಶ್ರಾ, ಲವ್​ ಕುಶ್​ ರಾಣಾ ಮತ್ತು ಆಶಿಶ್​ ಪಾಂಡೆ ಪ್ರಮುಖ ಆರೋಪಿಗಳಾಗಿದ್ದು ಈ ಮೂವರನ್ನು ಬಂಧಿಸಲಾಗಿದೆ. ಇದೀಗ ಈ ಮೂವರ ಜಾಮೀನು ಅರ್ಜಿಯನ್ನೂ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.  

ಈ ಹಿಂಸಾಚಾರ ಪ್ರಕರಣ ತುಂಬ ಗಂಭೀರ ಸ್ವರೂಪದ್ದಾಗಿದೆ ಮತ್ತು ಕೇಸ್​ಗೆ ಸಂಬಂಧಪಟ್ಟ ತನಿಖೆ ನಡೆಯುತ್ತಲೇ ಇದೆ. ಘಟನೆಗೆ ಸಂಬಂಧಪಟ್ಟಂತೆ ಕೆಲವು ಸಾಕ್ಷಿಗಳ ಹೇಳಿಕೆಗಳನ್ನು ಎಸ್​ಐಟಿ ತಂಡ ನಮ್ಮೆದುರು ಸಲ್ಲಿಸಿದೆ. ಅದರಲ್ಲಿ ಬಹುತೇಕರು ಹೇಳಿದ್ದು ಆಶಿಶ್​ ಮಿಶ್ರಾ ಹೆಸರನ್ನು. ರೈತರಿಗೆ ಡಿಕ್ಕಿ ಹೊಡೆದ ಮಹೀಂದ್ರಾ ಥಾರ್​ ವಾಹನದಿಂದ ಆಶಿಶ್​ ಮಿಶ್ರಾ ಮತ್ತು ಇತರ ಆರೋಪಿಗಳು ಕೆಳಗೆ ಇಳಿದಿದ್ದನ್ನು ಮತ್ತು ಅಲ್ಲಿಂದ ಓಡಿಹೋಗುವಾಗ ಅವರು ರೈತರೆಡೆಗೆ ಗುಂಡು ಹಾರಿಸಿದ್ದನ್ನು ನೋಡಿದ್ದೇವೆ ಎಂದೇ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ. ಹೀಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಅಕ್ಟೋಬರ್​ 3ರಂದು ಉತ್ತರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಅಜಯ್​ ಮಿಶ್ರಾ ಲಖಿಂಪುರ ಖೇರಿಗೆ ಭೇಟಿ ನೀಡುವವರಿದ್ದರು. ಆದರೆ ಅವರಿಬ್ಬರ ಭೇಟಿಯನ್ನು ವಿರೋಧಿಸಿ ರೈತರು ಮೌನವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿ ರಭಸದಿಂದ ಮುನ್ನುಗ್ಗಿದ ಎಸ್​ಯುವಿ ಮತ್ತು ಮಹೀಂದ್ರಾ ಥಾರ್​​ಗಳು ರೈತರೆಡೆಗೆ ನುಗ್ಗಿದ್ದವು. ಅದರಿಂದಾಗಿ ಒಬ್ಬ ರೈತ ಮೃತಪಟ್ಟಿದ್ದ. ಈ ವಾಹನಗಳು ಅಜಯ್​ ಮಿಶ್ರಾ ಪುತ್ರ ಆಶಿಶ್​ ಮಿಶ್ರಾ  ಬೆಂಗಾವಲು ಪಡೆಯದ್ದು ಎಂದು ಹೇಳಲಾಗಿತ್ತು. ವಾಹನದಿಂದ ಆಶಿಶ್​ ಮಿಶ್ರಾ ಓಡಿಹೋಗಿದ್ದನ್ನು ನೋಡಿದ್ದೇವೆ ಎಂದೂ ಹಲವರು ಪ್ರತಿಪಾದಿಸಿದ್ದಾರೆ. ಅಪಘಾತ ನಡೆದ ತಕ್ಷಣ ಅಲ್ಲಿ ದೊಡ್ಡ ಹಿಂಸಾಚಾರವೇ ನಡೆದುಹೋಗಿತ್ತು. ಈ ದುರ್ಘಟನೆಯಲ್ಲಿ ಮತ್ತೆ 8 ಜನರು ಮೃತಪಟ್ಟಿದ್ದರು.

ಇದನ್ನೂ ಓದಿ: ‘ಪ್ರತಾಪ್ ಸಿಂಹ ಗಂಡೋ, ಹೆಣ್ಣೋ ಚೆಕ್ ಮಾಡಬೇಕು, ಆತ ಸಂಸದನಾಗೋದಕ್ಕೆ ಲಾಯಕ್ಕಿಲ್ಲ: ಇಕ್ಬಾಲ್ ಅನ್ಸಾರಿ