ಬಿಜೆಪಿ ಮುಗಿತು ಈಗ ‘ಕೈ’ ಪಾಳಯದಲ್ಲೂ ಶುರುವಾಯ್ತು ನಾಯಕತ್ವ ಕದನ.. ಜಮೀರ್ ವಿರುದ್ಧ ಹೈಕಮಾಂಡ್​ಗೆ ಡಿಕೆಶಿ ದೂರು?

| Updated By: ಆಯೇಷಾ ಬಾನು

Updated on: Jun 21, 2021 | 8:13 AM

ಬಿಜೆಪಿಯಲ್ಲಿ ಸಿಎಂ‌ ಬದಲಾವಣೆ ಬಗ್ಗೆ ಚರ್ಚೆನಡೆಯುತ್ತಿದ್ರೆ ಕಾಂಗ್ರೆಸ್ನಲ್ಲಿ ಮಾತ್ರ ಮುಂದೆ ಯಾರು ಸಿಎಂ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಸಿದ್ದರಾಮಯ್ಯ ಮುಂದಿನ ಸಿಎಂ‌ ಎನ್ನುವ ಕೆಲವು ಶಾಸಕರ ಬಹಿರಂಗ ಹೇಳಿಕೆ‌ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ದೆಹಲಿಗೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜಮೀರ್ ಅಹಮದ್ ಮೇಲೆ‌ ದೂರು ನೀಡುವ ಸಾಧ್ಯತೆ ಇದೆ.

ಬಿಜೆಪಿ ಮುಗಿತು ಈಗ ‘ಕೈ’ ಪಾಳಯದಲ್ಲೂ ಶುರುವಾಯ್ತು ನಾಯಕತ್ವ ಕದನ.. ಜಮೀರ್ ವಿರುದ್ಧ ಹೈಕಮಾಂಡ್​ಗೆ ಡಿಕೆಶಿ ದೂರು?
ದೆಹಲಿಗೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜಮೀರ್ ಅಹಮದ್ ಮೇಲೆ‌ ದೂರು ನೀಡುವ ಸಾಧ್ಯತೆ
Follow us on

ದೆಹಲಿ: ರಾಜ್ಯ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದು ಸದ್ಯಕ್ಕೆ ತಣ್ಣಗಾಗಿದೆ. ನಾಯಕತ್ವ ಬದಲಾವಣೆ ಬಡಿದಾಟಕ್ಕೆ ಮೊನ್ನೆಯಷ್ಟೇ ಉಸ್ತುವಾರಿಗಳು ಬಂದು ತೇಪೆ ಹಚ್ಚಿ ಹೋಗಿದ್ದಾರೆ. ಇತ್ತ ಬಿಜೆಪಿ ಬಂಡಾಯ ಶಮನವಾಗ್ತಿದ್ದಂತೆ ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಯಾರು ಅನ್ನೋ ಬೆಂಕಿ ಕೆಂಡ ಕೈ ಸುಡ್ತಿದೆ. ಕಾಂಗ್ರೆಸ್ ಪಾಳಯದಲ್ಲಿ ಎದ್ದಿರೋ ನಾಯಕತ್ವ ಫೈಟ್ ದೆಹಲಿಯಲ್ಲಿ ಪ್ರತಿಧ್ವನಿಸೋ ಸಾಧ್ಯತೆ ಇದೆ.

‘ಕೈ’ ಪಾಳಯದಲ್ಲೂ ಶುರುವಾಯ್ತು ನಾಯಕತ್ವ ಕದನ
ಕಾಂಗ್ರೆಸ್ನಲ್ಲಿ ಎದ್ದಿರೋ ಮುಂದಿನ ಸಿಎಂ ರೇಸ್ ದೆಹಲಿವರೆಗೂ ತಲುಪಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶುಭ ಕೋರುವ ನೆಪದಲ್ಲಿ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸಿದ್ದರಾಮಯ್ಯ ಮುಂದಿನ ಸಿಎಂ ಅನ್ನೋ ಹೇಳಿಕೆ ವಿರುದ್ಧ ಹೈಕಮಾಂಡ್ಗೆ ಡಿಕೆಶಿ ದೂರು ಕೊಡಲಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಮುಂದಿನ ಸಿಎಂ ಅಂತಾ ಹೇಳೋ ಮೂಲಕ ನಾಯಕತ್ವ ವಿವಾದದ ಕಿಡಿ ಹಚ್ಚಿರೋ ಶಾಸಕ ಜಮೀರ್ ಅಹ್ಮದ್ ವಿರುದ್ಧ ದೂರು ಕೊಡೋ ಸಾಧ್ಯತೆ ಇದೆ.

ಸಾಮೂಹಿಕ ನಾಯಕತ್ವ ಬದಿಗೊತ್ತಿ ಸಿದ್ದರಾಮಯ್ಯ ನಾಯಕತ್ವದ ಕುರಿತು ಮಾತಾಡ್ತಿರೋ ಶಾಸಕ ಜಮೀರ್ ಅಹ್ಮದ್ಗೆ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ ಬಳಿಕವೂ ತಾವು ಹೇಳಿಕೆ ಕೊಟ್ಟದ್ದನ್ನು ಜಮೀರ್ ಅಹಮದ್ ಸಮರ್ಥಿಸಿಕೊಂಡಿದ್ದಾರೆ. ಹಿರಿಯ ನಾಯಕರು ವಾರ್ನಿಂಗ್ ಮಾಡಿದ್ರೂ ಬೆಂಬಲಿಗ ಶಾಸಕರು ಸಿದ್ದರಾಮಯ್ಯ ಅವ್ರೇ ಮುಂದಿನ ಸಿಎಂ ಅಂತಾ ಹೋದಲ್ಲಿ ಬಂದಲ್ಲಿ ಹೇಳಿಕೊಂಡು ತಿರುಗಾಡ್ತಿದ್ದಾರೆ ಅಂತಾ ದೂರು ಕೊಡೋ ಸಾಧ್ಯತೆ ಇದೆ.

ಕೆಪಿಸಿಸಿ ಪುನಾರಚನೆಗೆ ಡಿಕೆಶಿ ಮೆಗಾ ಪ್ಲ್ಯಾನ್?
ಇದೇ ವೇಳೆ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಪುನಾರಚನೆ ಮಾಡಲು ಅವಕಾಶ ನೀಡುವಂತೆ ಕೇಳಲಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಪುನಾರಚನೆ ಅವಕಾಶ ಸಿಕ್ಕಿದರೆ ತಮ್ಮ ಬೆಂಬಲಿಗರಿಗೆ ಮಣೆ ಹಾಕಬಹುದು ಎಂಬುದು ಅವರ ಲೆಕ್ಕಾಚಾರವಂತೆ. ಒಟ್ನಲ್ಲಿ ಒಂದೆಡೆ ಬಿಜೆಪಿಯಲ್ಲಿ ನಡೀತಿರೋ ಬೆಳವಣಿಗೆ ಲಾಭ ಪಡೆಯೋ ಪ್ಲ್ಯಾನ್ ಮಾಡ್ತಿದ್ದಂತೆ ಕೈ ಪಾಳಯದಲ್ಲೂ ನಾಯಕತ್ವ ಕಿತ್ತಾಟ ತಾರಕಕ್ಕೇರಿದೆ.

ಇದನ್ನೂ ಓದಿ: Renukacharya on Zameer Ahmed : ಜಮೀರ್​ಗೆ ಡಿಕೆ ಶಿವಕುಮಾರ್ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ!

Published On - 8:12 am, Mon, 21 June 21