ಚೆನ್ನೈ: ಮಹಾಮಾರಿ ಕೊರೊನಾ ಸೋಂಕಿನಿಂದಾಗಿ ತಮಿಳುನಾಡು ಡಿಎಂಕೆ ಶಾಸಕ ಜೆ.ಅನ್ಬಳಗನ್ ಮೃತಪಟ್ಟಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಕೊರೊನಾಗೆ ಜನಪ್ರತಿನಿಧಿಯೊಬ್ಬರು ಬಲಿಯಾಗಿರೋದು. ಕೊರೊನಾ ದೃಢವಾದ ನಂತರ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಅಲ್ಲದೇ ಇವತ್ತು (ಜೂನ್ 10) ಅನ್ಭಳಗನ್ ತಮ್ಮ 62ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ಹುಟ್ಟಿಹಬ್ಬದ ದಿನವೇ ಸಾವನ್ನಪ್ಪಿದ್ದಾರೆ.
ಜೂನ್ 2ರಂದು ಶಾಸಕ ಅನ್ಬಳಗನ್ ಅವರನ್ನು ಕೋರಂಪೇಟ್ ನಲ್ಲಿರುವ ಡಾ.ರೇಲಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್ಗೆ ದಾಖಲಿಸಲಾಗಿತ್ತು. ಆದರೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅನ್ಬಳಗನ್ ಆರೋಗ್ಯ ಸ್ಥಿತಿ ಮಂಗಳವಾರ ರಾತ್ರಿ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ತಮಿಳುನಾಡಿನ ಚೇಪಕ್ ಕ್ಷೇತ್ರವನ್ನು ಅನ್ಬಳಗನ್ ಅವರು ಪ್ರತಿನಿಧಿಸುತ್ತಿದ್ದರು. ಅನ್ಬಳಗನ್ ಅವರು 2001, 2011 ಮತ್ತು 2016ರಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2001ರಲ್ಲಿ ಟಿ ನಗರ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ನಂತರ 2011ರಲ್ಲಿ ಚೇಪಕ್ ನಲ್ಲಿ ಸ್ಪರ್ಧಿಸಿದ್ದರು. 2006ರಲ್ಲಿ ಸೋಲನ್ನನುಭವಿಸಿದ ನಂತರ ಚೇಪಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
Published On - 9:35 am, Wed, 10 June 20