ರೆಡ್ ಕಾರ್ಪೆಟ್ ಸ್ವಾಗತ ನೀಡಬೇಕಾ?; ರೋಹಿಂಗ್ಯಾಗಳ ಅಕ್ರಮ ಪ್ರವೇಶದ ಬಗ್ಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ದೇಶಕ್ಕೆ ಅಕ್ರಮವಾಗಿ ಪ್ರವೇಶಿಸುವವರಿಗೆ ನ್ಯಾಯಾಂಗವು ರಕ್ಷಣೆ ನೀಡುತ್ತದೆಯೇ ಎಂದು ಪ್ರಶ್ನಿಸಿ, ರೋಹಿಂಗ್ಯಾ ನಿರಾಶ್ರಿತರ ಕಣ್ಮರೆ ಆರೋಪದ ಮೇಲೆ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀಕ್ಷ್ಣವಾದ ನಿಲುವನ್ನು ತೆಗೆದುಕೊಂಡಿತು. "ನಾವು ಅವರಿಗೆ ಕೆಂಪು ಕಾರ್ಪೆಟ್ ಹಾಸಬೇಕೆಂದು ನೀವು ಬಯಸುತ್ತೀರಾ?" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಪ್ರಶ್ನಿಸಿದ್ದಾರೆ.

ರೆಡ್ ಕಾರ್ಪೆಟ್ ಸ್ವಾಗತ ನೀಡಬೇಕಾ?; ರೋಹಿಂಗ್ಯಾಗಳ ಅಕ್ರಮ ಪ್ರವೇಶದ ಬಗ್ಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ
Supreme Court

Updated on: Dec 02, 2025 | 7:31 PM

ನವದೆಹಲಿ, ಡಿಸೆಂಬರ್ 2: ಕಾಣೆಯಾದ 5 ರೋಹಿಂಗ್ಯಾಗಳನ್ನು ಪತ್ತೆಹಚ್ಚಲು ಕೋರಿದ ಅರ್ಜಿಯ ಬಗ್ಗೆ ಕಠಿಣವಾಗಿ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ಭಾರತ ದೇಶವು ಅಕ್ರಮ ವಲಸಿಗರಿಗೆ ರೆಡ್ ಕಾರ್ಪೆಟ್ ಹಾಸಬೇಕೇ? ಎಂದು ಕೇಳಿದ್ದಾರೆ. ಯಾರಾದರೂ ಅಕ್ರಮವಾಗಿ ಪ್ರವೇಶಿಸಿದ್ದರೆ ಅವರನ್ನು ದೇಶದಲ್ಲಿ ಇರಿಸಿಕೊಳ್ಳುವ ಜವಾಬ್ದಾರಿ ರಾಜ್ಯಕ್ಕೆ ಇದೆಯೇ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಕೇಳಿದ್ದಾರೆ.

5 ರೋಹಿಂಗ್ಯಾಗಳ ಬಂಧನದ ಕಣ್ಮರೆಗೆ ಅರ್ಜಿಯಲ್ಲಿ ಎಚ್ಚರಿಕೆ ನೀಡಲಾಗಿದ್ದು, ಗಡೀಪಾರು ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ವಾದಿಸಲಾಗಿದೆ. “ನೀವು ನಮ್ಮ ದೇಶಕ್ಕೆ ಪ್ರವೇಶಿಸುತ್ತೀರಿ, ನೀವು ಅಕ್ರಮವಾಗಿ ಗಡಿ ದಾಟುತ್ತೀರಿ, ನೀವು ಸುರಂಗವನ್ನು ಅಗೆಯುತ್ತೀರಿ ಅಥವಾ ಬೇಲಿಯನ್ನು ದಾಟುತ್ತೀರಿ. ನಂತರ ನೀವು ನಮ್ಮ ಕಾನೂನುಗಳು ನಿಮಗೂ ಅನ್ವಯಿಸಬೇಕು. ಎಂದು ಹೇಳುತ್ತೀರಿ. ನಾನು ನಿಮ್ಮ ದೇಶದಲ್ಲಿ ಆಹಾರಕ್ಕೆ ಅರ್ಹನಾಗಿದ್ದೇನೆ, ನನಗೆ ಆಶ್ರಯಕ್ಕೆ ಅರ್ಹನಾಗಿದ್ದೇನೆ, ನನ್ನ ಮಕ್ಕಳು ಶಿಕ್ಷಣಕ್ಕೆ ಅರ್ಹರಾಗಿದ್ದಾರೆ ಎನ್ನುತ್ತೀರಿ. ನಿಮಗೆ ನಾವು ರೆಡ್ ಕಾರ್ಪೆಟ್ ಹಾಸಿ ಆಹ್ವಾನಿಸಿದ್ದೇವಾ?” ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಇದನ್ನೂ ಓದಿ: ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡುವ ಯೋಚನೆ ಸರ್ಕಾರದ ಮುಂದಿಲ್ಲ; ಕರ್ನಾಟಕ ಸರ್ಕಾರ ಅಫಿಡವಿಟ್

“ನಮ್ಮ ದೇಶದಲ್ಲಿ ಬಡವರೂ ಇದ್ದಾರೆ. ಅವರು ನಮ್ಮ ದೇಶದ ನಾಗರಿಕರು. ಅವರು ಕೆಲವು ಪ್ರಯೋಜನಗಳು ಮತ್ತು ಸೌಕರ್ಯಗಳಿಗೆ ಅರ್ಹರಲ್ಲವೇ? ಅವರ ಮೇಲೆ ಏಕೆ ಗಮನಹರಿಸಬಾರದು?” ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹೇಬಿಯಸ್ ಕಾರ್ಪಸ್ ವಿಷಯದಲ್ಲಿ ಬಂಧನದಲ್ಲಿರುವ ಯಾವುದೇ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಅಲ್ಲಿ ನ್ಯಾಯಾಧೀಶರು ಕಸ್ಟಡಿ ಕಾನೂನುಬದ್ಧವಾಗಿದೆಯೇ ಎಂದು ನಿರ್ಣಯಿಸುತ್ತಾರೆ.

ಸರ್ಕಾರವು ರೋಹಿಂಗ್ಯಾಗಳನ್ನು ನಿರಾಶ್ರಿತರು ಎಂದು ಘೋಷಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಗಮನಸೆಳೆದಿದ್ದಾರೆ. “ನಿರಾಶ್ರಿತರಿಗೆ ಕಾನೂನುಬದ್ಧ ಸ್ಥಾನಮಾನವಿಲ್ಲದಿದ್ದರೆ, ಯಾರಾದರೂ ಒಳನುಗ್ಗುವವರಾಗಿದ್ದರೆ ಮತ್ತು ಅವರು ಅಕ್ರಮವಾಗಿ ಪ್ರವೇಶಿಸಿದರೆ ಆ ವ್ಯಕ್ತಿಯನ್ನು ಇಲ್ಲಿಯೇ ಇರಿಸಿಕೊಳ್ಳಲು ನಮಗೆ ಬಾಧ್ಯತೆ ಇದೆಯೇ? ಉತ್ತರ ಭಾರತದಲ್ಲಿ ನಮಗೆ ಬಹಳ ಸೂಕ್ಷ್ಮ ಗಡಿ ಇದೆ. ಒಳನುಗ್ಗುವವರು ಬಂದರೆ, ನಾವು ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತೇವೆಯೇ?” ಎಂದು ಸಿಜೆಐ ಸೂರ್ಯಕಾಂತ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಂಗಾಳಿ ವಲಸಿಗರು ರೋಹಿಂಗ್ಯಾಗಳೆಂದು ಸಾಬೀತುಪಡಿಸಿ; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು

ರೋಹಿಂಗ್ಯಾಗಳು ಕಾಣೆಯಾಗುತ್ತಿದ್ದಾರೆ ಎಂದು ಆರೋಪಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಅವಲೋಕನಗಳು ಬಂದವು.

ಭಾರತದಲ್ಲಿ ರೋಹಿಂಗ್ಯಾ ಚರ್ಚೆಯು ಮ್ಯಾನ್ಮಾರ್‌ನಿಂದ ಕಿರುಕುಳಕ್ಕೊಳಗಾದ ಮುಸ್ಲಿಂ ಅಲ್ಪಸಂಖ್ಯಾತರ ಸದಸ್ಯರನ್ನು ದೇಶದಲ್ಲಿ ಉಳಿಯಲು ಅನುಮತಿಸಬೇಕೇ ಅಥವಾ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಗಡೀಪಾರು ಮಾಡಬೇಕೇ ಎಂಬುದರ ಮೇಲೆ ಕೇಂದ್ರೀಕೃತವಾಗಿದೆ. ಭಾರತವು ವಿಶ್ವಸಂಸ್ಥೆಯ ನಿರಾಶ್ರಿತರ ಸಮಾವೇಶಕ್ಕೆ ಸಹಿ ಹಾಕಿಲ್ಲ. ಸರ್ಕಾರವು ರೋಹಿಂಗ್ಯಾಗಳನ್ನು “ಅಕ್ರಮ ವಲಸಿಗರು” ಎಂದು ವರ್ಗೀಕರಿಸುತ್ತದೆ. ಅವರ ಉಪಸ್ಥಿತಿಯು ಭದ್ರತಾ ಅಪಾಯಗಳನ್ನುಂಟುಮಾಡುತ್ತದೆ ಎಂದು ವಾದಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Tue, 2 December 25