ಫಿಲಿಪೈನ್ಸ್ನಲ್ಲಿ ಕುಖ್ಯಾತ ಗ್ಯಾಂಗ್ಸ್ಟರ್ ಸುರೇಶ್ ಪೂಜಾರಿಯನ್ನು ಬಂಧಿಸಲಾಗಿದೆ. ಮಂಗಳೂರು ಮೂಲದ ಡಾನ್ ಸುರೇಶ್ ಪೂಜಾರಿ, ಭೂಗತ ಪಾತಕಿ ಛೋಟಾ ರಾಜನ್, ರವಿ ಪೂಜಾರಿ ಸಹಚರನಾಗಿದ್ದ. ನಂತರ ತನ್ನದೇ ಗ್ಯಾಂಗ್ ನಡೆಸುತ್ತಿದ್ದ. ಬೆಂಗಳೂರಿನ ಕೆಲವು ಕೇಸ್ಗಳಲ್ಲೂ ಸುರೇಶ್ ಪೂಜಾರಿ ಪ್ರಮುಖ ಆರೋಪಿಯಾಗಿದ್ದಾನೆ. ಇದೀಗ ಫಿಲಿಫೈನ್ಸ್ನಲ್ಲಿ ಇಂಟರ್ಪೋಲ್ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಈ ಕುರಿತು ಖಾಸಗಿ ವಾಹಿನಿಯೊಂದು ವರದಿ ಪ್ರಸಾರ ಮಾಡಿದೆ.
ಕಳೆದ 10 ವರ್ಷದಿಂದ ರವಿ ಪೂಜಾರಿ ಗ್ಯಾಂಗ್ನಿಂದ ಬೇರೆ ಆಗಿ, ಪ್ರತ್ಯೇಕ ಗ್ಯಾಂಗ್ ಮಾಡಿಕೊಂಡಿದ್ದ ಸುರೇಶ್ ಪೂಜಾರಿ, ಕಾಲ್ ಮಾಡಿ ಬೆದರಿಕೆ ಒಡ್ಡುತ್ತಿದ್ದ. ಈತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿತ್ತು. ಹಲವು ಎಫ್ಐಆರ್ಗಳು ದಾಖಲಾದ ನಂತರ ಭಾರತದಿಂದ ಪಲಾಯನ ಮಾಡಿ, ವಿವಿಧ ದೇಶಗಳಲ್ಲಿ ನಕಲಿ ಗುರುತಿನ ಕಾರ್ಡ್ ಬಳಸಿ ವಾಸಿಸುತ್ತಿದ್ದ. ಮೂಲಗಳ ಪ್ರಕಾರ, ಸುರೇಶ್ ಪೂಜಾರಿ ಅಕ್ಟೋಬರ್ 15ರಂದು ಸಿಕ್ಕಿಬಿದ್ದಿದ್ದು, ಪೊಲೀಶ್ ವಶದಲ್ಲಿದ್ದಾನೆ. ಈ ವರ್ಷದ ಆರಂಭದಲ್ಲಿ ಮತ್ತೊಬ್ಬ ಕುಖ್ಯಾತ ಡಾನ್ ರವಿ ಪೂಜಾರಿಯನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಸ್ತುತ ಸುರೇಶ್ ಪೂಜಾರಿಯನ್ನು ಹಸ್ತಾಂತರಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:
‘ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವೈಯಕ್ತಿಕ ದ್ವೇಷಕ್ಕೆ ಆರ್ಯನ್ ಅರೆಸ್ಟ್’: ಕಿಶೋರ್ ತಿವಾರಿ ಆರೋಪ
Zomato: ‘ರಾಷ್ಟ್ರ ಭಾಷೆ’ ಹಿಂದಿ ಬರಲೇಬೇಕೆಂದ ಝೊಮ್ಯಾಟೊ ಎಕ್ಸ್ಕ್ಯೂಟಿವ್; ಕಂಪೆನಿಗೆ ತಗುಲಿಕೊಂಡ ನೆಟ್ಟಿಗರು