ದೆಹಲಿ ಡಿಸೆಂಬರ್ 07: ತಮ್ಮನ್ನು ‘ಮೋದಿಜಿ ಅಥವಾ ಆದರಣೀಯ(ಗೌರವಾನ್ವಿತ) ಮೋದಿಜಿ’ ಎಂದು ಸಂಬೋಧಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ಬಿಜೆಪಿ (BJP) ಸಂಸದರಿಗೆ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ (PM Modi), ತಮ್ಮ ಹೆಸರಿನ ಮೊದಲು ಅಥವಾ ನಂತರ ವಿಶೇಷಣಗಳನ್ನು ಸೇರಿಸುವುದು ತನ್ನ ಮತ್ತು ದೇಶದ ಜನರ ನಡುವೆ ಅಂತರವನ್ನು ಉಂಟುಮಾಡಬಹುದು ಎಂದು ಹೇಳಿದರು.
ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ಜನಸಾಮಾನ್ಯರು ನನ್ನನ್ನು ತಮ್ಮ ಕುಟುಂಬದ ಭಾಗವೆಂದು ಪರಿಗಣಿಸುತ್ತಾರೆ. ಹಾಗಾಗಿ ಸಂಸದರು ತನ್ನನ್ನು ಅವರಲ್ಲಿ ಒಬ್ಬರು ಎಂದು ಭಾವಿಸಬೇಕು ಎಂದು ಮೋದಿ ಹೇಳಿರುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಸಂಸದರೊಬ್ಬರು ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
‘मोदी जी का स्वागत है .. अभिनंदन है’
PM Shri @narendramodi received a Rousing welcome and felicitation at the Parliamentary Meeting in Delhi today, after the BJP’s splendid victory in the recent Assembly Elections!
जय भाजपा 🪷 विजय भाजपा 🪷#PMModi #BJP4IND @PMOIndia… pic.twitter.com/JDsB8DxyDc
— Prakash Javadekar (@PrakashJavdekar) December 7, 2023
ನಾನು ಪಕ್ಷದ ಸಣ್ಣ ಕಾರ್ಯಕರ್ತ. ನಾನು ಅವರ ಕುಟುಂಬದ ಭಾಗ ಎಂದು ಜನರು ಭಾವಿಸುತ್ತಾರೆ. ಜನರು ನನ್ನನ್ನು ಅವರಲ್ಲಿ ಒಬ್ಬ ಎಂದು ಭಾವಿಸುವುದರಿಂದ ಶ್ರೀ ಅಥವಾ ಆದರಣೀಯ ಮೊದಲಾದ ವಿಶೇಷಣಗಳನ್ನು ಸೇರಿಸಬೇಡಿ ಮೋದಿಯವರು ಬಿಜೆಪಿ ಸಂಸದರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಪಕ್ಷದ ಗೆಲುವಿಗೆ ಟೀಮ್ ಸ್ಪಿರಿಟ್ ಕಾರಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಾಮೂಹಿಕ ಮನೋಭಾವದಿಂದ ಮುನ್ನಡೆಯುವಂತೆ ಅವರು ಸಂಸದರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಟ್ರೆಂಡ್ ಫಾಲೋ ಮಾಡಿದ ಪ್ರಧಾನಿ; ಮೋದಿಯವರ ಎಕ್ಸ್ ಪೋಸ್ಟ್ ನೋಡಿ ಅಚ್ಚರಿಯಾಯಿತೆ?
ಬಿಜೆಪಿ ತನ್ನ ಆಡಳಿತ ಮಾದರಿಯಿಂದಾಗಿ ಆದ್ಯತೆಯ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ಹೇಳಿದ್ದಾರೆ. ಪಕ್ಷದ ಪರವಾದ ಆಡಳಿತದ ನಿಲುವಿನಿಂದಾಗಿ ಬಿಜೆಪಿ ಆಡಳಿತ ವಿರೋಧಿ ನಿಲುವನ್ನು ನಿರಾಕರಿಸಿದೆ. ಪಕ್ಷವು ಸತತ ಎರಡನೇ ಬಾರಿಗೆ 57 ಶೇಕಡಾ, ಕಾಂಗ್ರೆಸ್ ಶೇಕಡಾ 20 ರಷ್ಟು ಆಯ್ಕೆಯಾಗುತ್ತದೆ ಎಂದು ಅವರು ಹೇಳಿದರು. ಪ್ರಾದೇಶಿಕ ಪಕ್ಷಗಳಿಗೆ ಇದು ಶೇಕಡಾ 49 ರಷ್ಟಿದೆ ಎಂದು ಅವರು ಹೇಳಿದರು.
ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಸಂದೇಶವನ್ನು ಜನಸಾಮಾನ್ಯರಿಗೆ ಕೊಂಡೊಯ್ಯುವ ಉದ್ದೇಶದಿಂದ ಮುಂಬರುವ ವಿಕಸಿತ್ ಭಾರತ್ ಯಾತ್ರೆಯಲ್ಲಿ ಸಂಸದರು ಭಾಗವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಅದೇ ವೇಳೆ ಪ್ರಧಾನಿ ಮೋದಿ ಮೇಡ್-ಇನ್-ಇಂಡಿಯಾ ತೇಜಸ್ ಯುದ್ಧ ವಿಮಾನವನ್ನು ಹೊಗಳಿದರು. ಮೇಕ್ ಇನ್ ಇಂಡಿಯಾ ಉಪಕ್ರಮವು ಜಾಗತಿಕವಾಗಿ ಮಾತನಾಡುತ್ತಿದೆ ಎಂದು ಹೇಳಿರುವ ಅವರು ಸ್ಥಳೀಯ ಉತ್ಪಾದನೆ ಮತ್ತು ನಿರ್ಮಾಣವನ್ನು ಉತ್ತೇಜಿಸಲು ಹೇಳಿದ್ದಾರೆ.
2024 ರ ಸಾರ್ವತ್ರಿಕ ಚುನಾವಣೆಗೆ ತಿಂಗಳುಗಳ ಮುಂಚೆಯೇ ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ತೆಲಂಗಾಣ ಮತ್ತು ಮಿಜೋರಾಂನಲ್ಲಿ ಪಕ್ಷವು ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:32 pm, Thu, 7 December 23