ನೋವು ನಿವಾರಕ ಮೆಫ್ಟಾಲ್‌ನ ಹೊಸ ಅಡ್ಡ ಪರಿಣಾಮ ಬಗ್ಗೆ ಸರ್ಕಾರ ಎಚ್ಚರಿಕೆ; ತಜ್ಞರು ಏನಂತಾರೆ?
ಫಾರ್ಮಾಕೋವಿಜಿಲೆನ್ಸ್ ಪ್ರೋಗ್ರಾಂ ಆಫ್ ಇಂಡಿಯಾ ಅದರ 'ಪ್ರಾಥಮಿಕ ವಿಶ್ಲೇಷಣೆ'ಯಲ್ಲಿ ಔಷಧ ಮೆಫೆನಾಮಿಕ್ ಆಮ್ಲವು ಇಯೊಸಿನೊಫಿಲಿಯಾ ಮತ್ತು ವ್ಯವಸ್ಥಿತ ರೋಗಲಕ್ಷಣಗಳೊಂದಿಗೆ ಔಷಧ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ ಎಂದು ಕಂಡುಹಿಡಿದಿದ್ದು ಇದನ್ನು DRESS ಸಿಂಡ್ರೋಮ್ ಅಂತಾರೆ. ಇದೊಂದು ಗಂಭೀರ ಅಲರ್ಜಿ ಪ್ರತಿಕ್ರಿಯೆ.
ದೆಹಲಿ ಡಿಸೆಂಬರ್ 07: ಫಾರ್ಮಾ ಸ್ಟ್ಯಾಂಡರ್ಡ್ ಸಂಸ್ಥೆ ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್ (IPC) ಸಾಮಾನ್ಯವಾಗಿ ಬಳಸುವ ನೋವು ನಿವಾರಕ ಮೆಫೆನಾಮಿಕ್ ಆಮ್ಲದ(mefenamic acid) ಬಳಕೆಯ ಬಗ್ಗೆ ವೈದ್ಯರು ಮತ್ತು ರೋಗಿಗಳಿಗೆ ಡ್ರಗ್ ಸುರಕ್ಷತಾ ಎಚ್ಚರಿಕೆಯನ್ನು ನೀಡಿದೆ. ಈ ಔಷಧಿ ಮೆಫ್ಟಾಲ್ ಬ್ರಾಂಡ್ ಹೆಸರಿನಲ್ಲಿ ಜನಪ್ರಿಯವಾಗಿ ಮಾರಾಟ ಮಾಡಲಾಗುತ್ತದೆ. ಫಾರ್ಮಾಕೋವಿಜಿಲೆನ್ಸ್ ಪ್ರೋಗ್ರಾಂ ಆಫ್ ಇಂಡಿಯಾ (PvPI), ಪ್ರತಿಕೂಲ ಔಷಧ ಪ್ರತಿಕ್ರಿಯೆಗಳು (ADRs) ಮತ್ತು ಔಷಧೀಯ ಉತ್ಪನ್ನಗಳಿಗೆ ಸಂಬಂಧಿಸಿದ ಪ್ರತಿಕೂಲ ಘಟನೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ. ಅದರ ‘ಪ್ರಾಥಮಿಕ ವಿಶ್ಲೇಷಣೆ’ಯಲ್ಲಿ ಔಷಧ ಮೆಫೆನಾಮಿಕ್ ಆಮ್ಲವು ಇಯೊಸಿನೊಫಿಲಿಯಾ ಮತ್ತು ವ್ಯವಸ್ಥಿತ ರೋಗಲಕ್ಷಣಗಳೊಂದಿಗೆ ಔಷಧ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ ಎಂದು ಕಂಡುಹಿಡಿದಿದೆ. ಇದನ್ನುDRESS ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.
ಔಷಧಿಯು ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಬಹುದಾದ OTC ಉತ್ಪನ್ನವಲ್ಲವಾದರೂ, ಋತುಚಕ್ರದ ನೋವು, ತಲೆನೋವು ಮತ್ತು ಸ್ನಾಯು ಮತ್ತು ಕೀಲು ನೋವುಗಳನ್ನು ನಿವಾರಿಸಲು ವಿವಿಧ ಕಾರಣಗಳಿಗಾಗಿ ಇದನ್ನು ಭಾರತೀಯರು ವ್ಯಾಪಕವಾಗಿ ಬಳಸುತ್ತಾರೆ. ಅಲ್ಲದೆ, ತೀವ್ರ ಜ್ವರದ ಸಂದರ್ಭಗಳಲ್ಲಿ ಮಕ್ಕಳಲ್ಲಿ ಔಷಧದ ಬಳಕೆಯು ವಿಪರೀತವಾಗಿದೆ.
ಬ್ಲೂ ಕ್ರಾಸ್ ಲ್ಯಾಬೊರೇಟರೀಸ್‌ನ ಮೆಫ್ಟಲ್, ಮ್ಯಾನ್‌ಕೈಂಡ್ ಫಾರ್ಮಾದ ಮೆಫ್‌ಕೈಂಡ್ ಪಿ, ಫಿಜರ್‌ನ ಪೊನ್‌ಸ್ಟಾನ್, ಸೀರಮ್ ಇನ್‌ಸ್ಟಿಟ್ಯೂಟ್‌ನ ಮೆಫಾನಾರ್ಮ್ ಮತ್ತು ಡಾ ರೆಡ್ಡೀಸ್ ಐಬುಕ್ಲಿನ್ ಪಿ ಈ ವರ್ಗದಲ್ಲಿ ಅಗ್ರ ಬ್ರಾಂಡ್‌ಗಳನ್ನು ಒಳಗೊಂಡಿದೆ.
DRESS ಸಿಂಡ್ರೋಮ್ ಎಂದರೇನು?
DRESS ಸಿಂಡ್ರೋಮ್, ಇಸಿನೊಫಿಲಿಯಾ ಮತ್ತು ಸಿಸ್ಟಮಿಕ್ ರೋಗಲಕ್ಷಣಗಳೊಂದಿಗೆ ಡ್ರಗ್ ರಾಶ್ ಕಾಣಿಸಿಕೊಳ್ಳುತ್ತದೆ, ಇದು ಗಂಭೀರ ಅಲರ್ಜಿಯ ಪ್ರತಿಕ್ರಿಯೆಯಾಗಿದೆ. ಇದು ಮಾರಣಾಂತಿಕವಾಗಬಹುದು, ಸುಮಾರು 10 ಪ್ರತಿಶತದಷ್ಟು ಜನರು ಈ ರೀತಿ ಆಗುತ್ತದೆ. ನಿಮ್ಮ ದೇಹವು ಕೆಲವು ಔಷಧಿಗಳಿಗೆ ಬಲವಾಗಿ ಪ್ರತಿಕ್ರಿಯಿಸಿದಾಗ ಈ ಸಿಂಡ್ರೋಮ್ ಸಂಭವಿಸುತ್ತದೆ. ಇದು ಚರ್ಮದ ದದ್ದುಗೆ ಕಾರಣವಾಗಿನಿಮ್ಮ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರಬಹುದು. ಈ ತೀವ್ರ ರಿಯಾಕ್ಷನ್ ತಪ್ಪಿಸಲು ಔಷಧಿಗಳ ಬಗ್ಗೆ ಜಾಗರೂಕರಾಗಿರುವುದು ಅತ್ಯಗತ್ಯ.
ಅಡ್ಡಪರಿಣಾಮಗಳು ಅಪರೂಪ, ಈಗಾಗಲೇ ತಿಳಿದಿರುವಂತದ್ದು: ವೈದ್ಯರು
ಎಚ್ಚರಿಕೆಯು ಆರೋಗ್ಯ ವೃತ್ತಿಪರರು ಮತ್ತು ರೋಗಿಗಳಿಗೆ ಔಷಧದ ಅಡ್ಡಪರಿಣಾಮಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಕೇಳಿದೆ. ಆರೋಗ್ಯ ವೃತ್ತಿಪರರು, ರೋಗಿಗಳು ಮತ್ತು ಗ್ರಾಹಕರು ಮೇಲಿನ ಶಂಕಿತ ಔಷಧದ ಬಳಕೆಗೆ ಸಂಬಂಧಿಸಿದ ಮೇಲಿನ ಪ್ರತಿಕೂಲ ಔಷಧ ಪ್ರತಿಕ್ರಿಯೆಗಳ (ADR) ಸಾಧ್ಯತೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಸಲಹೆ ನೀಡಲಾಗುತ್ತದೆ ಎಂದು ಎಚ್ಚರಿಕೆಯು ಹೇಳಿದೆ.ಅಂತಹ ಪ್ರತಿಕ್ರಿಯೆಯು ಎದುರಾದರೆ, ಆ ಪ್ರತಿಕೂಲ ಔಷಧ ಪ್ರತಿಕ್ರಿಯೆಗಳನ್ನು ಸಲ್ಲಿಸುವ ಮೂಲಕ ದಯವಿಟ್ಟು IPC ಗೆ ತಿಳಿಸಿ ಎಂದಿದೆ.
ಆದಾಗ್ಯೂ, ಅನೇಕ ವೈದ್ಯರು ನ್ಯೂಸ್ 18 ಗೆ DRESS ಸಿಂಡ್ರೋಮ್ ಅನೇಕ nonsteroidal anti-inflammatory drugs (NSAIDs) ಸಾಮಾನ್ಯವಾಗಿ ತಿಳಿದಿರುವ ಅಡ್ಡ ಪರಿಣಾಮವಾಗಿದೆ ಎಂದು ಹೇಳಿದರು. ಆದ್ದರಿಂದ, IPC ಯ ಪ್ರಾಥಮಿಕ ವಿಶ್ಲೇಷಣೆಗೆ ಮುಂಚೆಯೇ ಇದು ಈಗಾಗಲೇ ಸಾಮಾನ್ಯ ಜ್ಞಾನವಾಗಿತ್ತು.
ಕೆಲವು ಇತರ ಔಷಧ ವರ್ಗಗಳಂತೆ ಸಾಮಾನ್ಯವಲ್ಲದಿದ್ದರೂ, ಐಬುಪ್ರೊಫೇನ್ ಮತ್ತು ನ್ಯಾಪ್ರೋಕ್ಸೆನ್‌ನಂತಹ NSAID ಗಳು ಕೆಲವು ಸಂದರ್ಭಗಳಲ್ಲಿ DRESS ಸಿಂಡ್ರೋಮ್‌ಗೆ ಕಾರಣವಾಗುತ್ತವೆ ಎಂದು ದೆಹಲಿಯ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದಲ್ಲಿ ಕೆಲಸ ಮಾಡುವ ವೈದ್ಯಕೀಯ ತಜ್ಞರು ಹೇಳಿದರು.
ಇದನ್ನೂ ಓದಿ: ಈ ಹಣ್ಣು ನಿಮ್ಮ ಕಿಡ್ನಿ ಆರೋಗ್ಯಕ್ಕೆ ಪವಾಡದ ಔಷಧಿ.. ದಿನಕ್ಕೊಂದು ತಿಂದರೆ ಸಾಕು!
“ಔಷಧಿಗಳಿಗೆ ವೈಯಕ್ತಿಕ ಪ್ರತಿಕ್ರಿಯೆಗಳು ಬದಲಾಗಬಹುದು ಮತ್ತು NSAID ಗಳನ್ನು ತೆಗೆದುಕೊಳ್ಳುವ ಪ್ರತಿಯೊಬ್ಬರೂ ಈ ತೀವ್ರವಾದ ಅಲರ್ಜಿಯ ಪ್ರತಿಕ್ರಿಯೆಯನ್ನು ಅನುಭವಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ” ಎಂದು ಅವರು ಹೇಳಿದರು. ತಮ್ಮ 20 ವರ್ಷಗಳ ಕ್ಲಿನಿಕಲ್ ಪ್ರಾಕ್ಟೀಸ್ ವೇಳೆ ತಾನು ಈ ಔಷಧದಿಂದ ಪರಿಣಾಮಗಳನ್ನು ಯಾವುದೇ ರೋಗಿ ಎದುರಿಸುತ್ತಿರುವುದನ್ನು ನೋಡಿಲ್ಲ ಎಂದಿದ್ದಾರೆ.
ಮತ್ತೊಬ್ಬ ವೈದ್ಯ, ಗುರುಗ್ರಾಮ್ ಮೂಲದ ಆಸ್ಪತ್ರೆಯ ಸ್ತ್ರೀರೋಗತಜ್ಞ, ನ್ಯೂಸ್ 18 ಗೆ “ಮೆಫ್ಟಾಲ್‌ನಂತಹ NSAID ಗಳೊಂದಿಗೆ DRESS ಸಿಂಡ್ರೋಮ್ ಸಂಭವಿಸುವುದನ್ನು ಸಾಮಾನ್ಯವಾಗಿ ಅಪರೂಪವೆಂದು ಪರಿಗಣಿಸಲಾಗುತ್ತದೆ” ಎಂದು ಹೇಳಿದರು.
“ಒಟ್ಟಾರೆ ಘಟನೆಗಳು ಕಡಿಮೆಯಾಗಿದ್ದರೂ, NSAID ಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳು DRESS ಸಿಂಡ್ರೋಮ್ನಂತಹ ಅಪರೂಪದ ಆದರೆ ತೀವ್ರವಾದ ಪ್ರತಿಕ್ರಿಯೆಗಳನ್ನು ಒಳಗೊಂಡಂತೆ ಸಂಭಾವ್ಯ ಅಡ್ಡ ಪರಿಣಾಮಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ.”
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ