AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DY Chandrachud: ನನ್ನ ಅಧಿಕಾರದಲ್ಲಿ ಚೆಲ್ಲಾಟವಾಡಬೇಡಿ, ವಕೀಲರಿಗೆ ಖಡಕ್ ಉತ್ತರ ನೀಡಿದ ಸಿಜೆಐ ಡಿ.ವೈ ಚಂದ್ರಚೂಡ್

supreme court: ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್​​ ನನ್ನ ಅಧಿಕಾರದಲ್ಲಿ ಚೆಲ್ಲಾಟವಾಡಬೇಡಿ ಎಂದು ಹೇಳಿದ್ದಾರೆ. ನ್ಯಾಯಲಯಕ್ಕೆ ಒಂದು ವ್ಯವಸ್ಥೆ ಇದೆ ಎಂದು ಹೇಳಿದ್ದಾರೆ.

DY Chandrachud: ನನ್ನ ಅಧಿಕಾರದಲ್ಲಿ ಚೆಲ್ಲಾಟವಾಡಬೇಡಿ, ವಕೀಲರಿಗೆ ಖಡಕ್ ಉತ್ತರ ನೀಡಿದ ಸಿಜೆಐ ಡಿ.ವೈ ಚಂದ್ರಚೂಡ್
ಅಕ್ಷಯ್​ ಪಲ್ಲಮಜಲು​​
|

Updated on:Apr 11, 2023 | 2:24 PM

Share

ದೆಹಲಿ: ಸುಪ್ರೀಂ ಕೋರ್ಟ್​​ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (DY Chandrachud) ಅವರಿಗೆ ವಕೀಲರೊಬ್ಬರು ವಿಚಾರಣೆ ದಿನಾಂಕ ನೀಡಿರುವ ಬಗ್ಗೆ ಗೊಂದಲ ಸೃಷ್ಟಿಸಿದ್ದಾರೆ, ಈ ಕಾರಣಕ್ಕೆ ಡಿ.ವೈ ಚಂದ್ರಚೂಡ್ ಕೋಪಗೊಂಡು ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳ ಪ್ರಸ್ತಾಪದ ಸಂದರ್ಭದಲ್ಲಿ, ವಕೀಲರೊಬ್ಬರು ತಮ್ಮ ವಿಚಾರಣೆಯ ದಿನಾಂಕವನ್ನು ಏ.14ಕ್ಕೆ ನೀಡಬೇಕು ಎಂದು ಇನ್ನೊಂದು ಪೀಠಕ್ಕೆ ಮನವಿ ಮಾಡಿದ್ದಾರೆ, ಆದರೆ ಈ ಮೊದಲೇ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್ ವಿಚಾರಣೆಗೆ ದಿನಾಂಕ ನೀಡಿದ್ದಾರೆ. ಪ್ರಕರಣದ ಬಗ್ಗೆ ಈಗಾಗಲೇ ವಿಚಾರಣೆಯನ್ನು ಪಟ್ಟಿ ಮಾಡಲಾಗಿದೆ. ಆದರೆ ವಕೀಲರು ತಮ್ಮ ವಿಚಾರಣೆ ಬೇಗ ಮುಗಿಸಲು ಏ. 14ಕ್ಕೆ ವಿಚಾರಣೆ ಮಾಡುವಂತೆ ಇನ್ನೊಂದು ಪೀಠಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಕಾರಣಕ್ಕೆ ಕೋಪಗೊಂಡ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನನ್ನ ಅಧಿಕಾರದಲ್ಲಿ ಚೆಲ್ಲಾಟವಾಡಬೇಡಿ ಎಂದು ಹೇಳಿದ್ದಾರೆ. ನ್ಯಾಯಲಯಕ್ಕೆ ಒಂದು ವ್ಯವಸ್ಥೆ ಇದೆ, ಆ ಮೂಲಕನೇ ನಡೆದುಕೊಳ್ಳಿ, ನನಗೆ ಗೊಂದಲ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಮೊದಲೇ ನೀವು ದಿನಾಂಕವನ್ನು ಪಡೆಯಬೇಕಿತ್ತು. ಈಗಾಗಲೇ ನಾನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಯನ್ನು ಪಟ್ಟಿ ಮಾಡಲಾಗಿದೆ. ನೀವು ಮತ್ತೊಂದು ಪೀಠದ ಮುಂದೆ ಪ್ರಕರಣವನ್ನು ಉಲ್ಲೇಖಿಸಲು ಪ್ರಯತ್ನಿಸಿದ್ದೀರಾ? ಇದು ಸರಿಯೇ ಎಂದು ವಕೀಲರನ್ನು ಪ್ರಶ್ನೆ ಮಾಡಿದ್ದಾರೆ.

ನಾನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಿ ಮಾಡಿದ್ದಾನೆ, ಜತೆಗೆ ದಿನಾಂಕವನ್ನು ನೀಡಲಾಗಿದೆ ಏ.14ಕ್ಕೆ ವಿಚಾರಣೆಗೆ ಬರಲಿದೆ. ಬೇರೆ ಪೀಠಕ್ಕೆ ಪ್ರಸ್ತಾಪಿಸಬೇಡಿ ಮತ್ತು ಇನ್ನೂ ಮುಂದೆ ಮುಂಚಿತವಾಗಿ ದಿನಾಂಕವನ್ನು ಪಡೆದುಕೊಳ್ಳಿ ಎಂದು ಸಿಜೆಐ ಹೇಳಿದರು. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ವಕೀಲರು ಉತ್ತರಿಸಿದ್ದಾರೆ.

ಇದನ್ನೂ ಓದಿ: BBC Documentary Row: ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಸಮ್ಮತಿ; ಫೆ. 6ಕ್ಕೆ ವಿಚಾರಣೆ

ನಿಮ್ಮನ್ನು ಸಂಪೂರ್ಣವಾಗಿ ಕ್ಷಮಿಸಲಾಗಿದೆ. ಆದರೆ ನನ್ನನ್ನು ಕ್ಷಮಿಸಿ. ನಾನು ಏ. 17ಕ್ಕೆ ದಿನಾಂಕ ನೀಡಿದ್ದೇನೆ, ಏ.17ಕ್ಕೆ ಅಂದರೆ 17ಕ್ಕೆ, ನನ್ನ ಅಧಿಕಾರದೊಂದಿಗೆ ಚೆಲ್ಲಾಟವಾಡಬೇಡಿ ಎಂದು ಸಿಜೆಐ ಖಡಕ್​ ಮಾತಿನಲ್ಲಿ ತಿಳಿಸಿದ್ದಾರೆ. ಮುಖ್ಯ ನ್ಯಾಯಾಧೀಶರ ನ್ಯಾಯಾಲಯವು ಮಾರ್ಚ್‌ನಲ್ಲಿ ಒಂದು ನಿರ್ದಿಷ್ಟ ದಿನಾಂಕದಂದು ಮಂಡಳಿಯಲ್ಲಿ ಮೊದಲ ಪ್ರಕರಣಕ್ಕೆ ಸಂಬಂಧಸಿದಂತೆ ಪಟ್ಟಿಯನ್ನು ಮಾಡಿರುತ್ತದೆ ಎಂದು ಹೇಳಿದರು. ಮುಖ್ಯ ನ್ಯಾಯಾಧೀಶರಿಗೆ ಬೆದರಿಕೆ ಹಾಕಬೇಡಿ. ನಿಮ್ಮಿಂದ ನಾನು ಹೆದರುವುದಿಲ್ಲ ಎಂದು ಸಿಜೆಐ ವಕೀಲರಿಗೆ ಹೇಳಿದ್ದರು.

Published On - 1:52 pm, Tue, 11 April 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!