ಒಡಿಶಾದ ಪುರಿ ಜಗನ್ನಾಥ ದೇವಾಲಯ(Puri Jagannath Temple)ಕ್ಕೆ ಭಕ್ತರು ಇನ್ನುಮುಂದೆ ಹರಿದ ಜೀನ್ಸ್, ಸ್ಕರ್ಟ್ ತೊಟ್ಟು ಬರುವಂತಿಲ್ಲ ಎಂದು ದೇವಸ್ಥಾನದ ಆಡಳಿತ ತಿಳಿಸಿದೆ. ದೇವಾಲಯವು ಜನವರಿ 1 ರಿಂದ ಭಕ್ತರಿಗೆ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇವಸ್ಥಾನದಲ್ಲಿ ಕೆಲವರು ಅಸಭ್ಯ ವಸ್ತ್ರಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ‘ನೀತಿ’ ಉಪಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ದೇವಸ್ಥಾನದ ಘನತೆ ಮತ್ತು ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ದುರದೃಷ್ಟವಶಾತ್, ಕೆಲವರು ಇತರರ ಧಾರ್ಮಿಕ ಭಾವನೆಗಳನ್ನು ಲೆಕ್ಕಿಸದೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಕಂಡುಬಂದಿದೆ ಎಂದು ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ರಂಜನ್ ಕುಮಾರ್ ದಾಸ್ ಹೇಳಿದ್ದಾರೆ.
ದೇವಸ್ಥಾನದಲ್ಲಿ ಹರಿದ ಜೀನ್ಸ್ ಪ್ಯಾಂಟ್, ಸ್ಲೀವ್ ಲೆಸ್ ಡ್ರೆಸ್, ಹಾಫ್ ಪ್ಯಾಂಟ್ ಹಾಕಿಕೊಂಡು ಸಮುದ್ರ ತೀರದಲ್ಲೋ, ಉದ್ಯಾನವನದಲ್ಲೋ ಅಡ್ಡಾಡುತ್ತಿರುವುದು ಕಂಡು ಬಂದಿದ್ದು, ದೇವಸ್ಥಾನ ದೇವರ ವಾಸಸ್ಥಾನವೇ ಹೊರತು ಮನರಂಜನಾ ಸ್ಥಳವಲ್ಲ ಎಂದು ಹೇಳಿದ್ದಾರೆ. ಯಾವ ರೀತಿಯ ಉಡುಪುಗಳನ್ನು ಅನುಮತಿಸಬೇಕು ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ಅಚ್ಚರಿಗಳ ಆಲಯ.. ಪುರಿ ದೇಗುಲದಲ್ಲಿ ವಿಜ್ಞಾನ ಲೋಕವೇ ಚಕಿತಗೊಳ್ಳುವ ಅಚ್ಚರಿ!
ಜನವರಿ 1, 2024 ರಿಂದ ದೇವಾಲಯದೊಳಗೆ ಡ್ರೆಸ್ ಕೋಡ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ದೇವಾಲಯದ ‘ಸಿಂಗ ದ್ವಾರ’ದಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಮತ್ತು ದೇವಾಲಯದೊಳಗಿನ ಪ್ರತೀಹಾರಿ ಸೇವಕರಿಗೆ ಕೋಡ್ ಅನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಹೇಳಿದ್ದಾರೆ.
ದೇವಾಲಯದ ಆಡಳಿತ ಮಂಡಳಿ ಮಂಗಳವಾರದಿಂದ ಭಕ್ತರಲ್ಲಿ ವಸ್ತ್ರ ಸಂಹಿತೆ ಕುರಿತು ಜಾಗೃತಿ ಮೂಡಿಸಲಿದೆ ಎಂದರು.
ಹಾಫ್ ಪ್ಯಾಂಟ್, ಶಾರ್ಟ್ಸ್, ಹರಿದ ಜೀನ್ಸ್, ಸ್ಕರ್ಟ್ ಮತ್ತು ಸ್ಲೀವ್‌ಲೆಸ್ ಡ್ರೆಸ್‌ಗಳನ್ನು ಧರಿಸಿದವರಿಗೆ ದೇವಸ್ಥಾನದೊಳಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ