ತೂತುಕುಡಿಯಲ್ಲಿ ಡಿಆರ್​ಐ ಕಾರ್ಯಾಚರಣೆ; ಭಾರೀ ಮೊತ್ತದ ಚೀನೀ ಪಟಾಕಿಗಳು ಜಪ್ತಿ; ನಾಲ್ವರ ಬಂಧನ

DRI Seizes Chinese Firecrackers Worth Rs 5 Cr, 4 Arrested: ದೀಪಾವಳಿ ಹಬ್ಬದ ಸಡಗರದ ಮಧ್ಯೆಯೇ ಚೀನಾ ಪಟಾಕಿ ಕಳ್ಳಸಾಗಣೆ ದಂಧೆಗೆ ಡಿಆರ್​ಐ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬಂದರಿಗೆ ಅಕ್ರಮವಾಗಿ ತಂದಿದ್ದ ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ಚೀನಾ ಪಟಾಕಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ದಂಧೆಯ ಹಿಂದಿದ್ದ ಪ್ರಮುಖ ನಾಲ್ವರನ್ನು ಬಂಧಿಸಿದ್ದಾರೆ.

ತೂತುಕುಡಿಯಲ್ಲಿ ಡಿಆರ್​ಐ ಕಾರ್ಯಾಚರಣೆ; ಭಾರೀ ಮೊತ್ತದ ಚೀನೀ ಪಟಾಕಿಗಳು ಜಪ್ತಿ; ನಾಲ್ವರ ಬಂಧನ
ಚೀನೀ ಪಟಾಕಿ
Edited By:

Updated on: Oct 19, 2025 | 10:34 PM

ಬೆಂಗಳೂರು, ಅಕ್ಟೋಬರ್ 19: ದೀಪಾವಳಿ ಹಬ್ಬ ಆರಂಭವಾಗುತ್ತಿದ್ದಂತೆಯೇ ಭಾರತದಲ್ಲಿ ಚೀನಾ ಪಟಾಕಿಗಳ ಹಾವಳಿ ಹೆಚ್ಚಿರುತ್ತೆ. ಚೀನಾ ಪಟಾಕಿಗಳ ಕಳ್ಳಸಾಗಾಣಿಕೆ (fire crackers smuggling) ದಂಧೆಗೆ ಡಿಆರ್‌ಐ ಅಧಿಕಾರಿಗಳು ಶಾಕ್ ನೀಡಿದ್ದಾರೆ. ತೂತುಕುಡಿ ಬಂದರಿನಲ್ಲಿ ಡಿಆರ್​ಐ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ಅಕ್ರಮ ಪಟಾಕಿ ಆಮದನ್ನು ತಡೆಯಲು ಡಿಆರ್​ಐ ಆಪರೇಷನ್ ಫೈರ್ ಟ್ರೇಲ್ (Operation Fire Trail) ಕಾರ್ಯಾಚರಣೆ ನಡೆಸಿದ್ದು, ಚೀನಾದಿಂದ ಅಕ್ರಮವಾಗಿ ತಂದಿದ್ದ ಪಟಾಕಿ ಜಪ್ತಿ ಮಾಡಿದ್ದಾರೆ.

ತಮಿಳುನಾಡಿನ ತೂತುಕುಡಿ ಬಂದರಿನಲ್ಲಿ (Tuticorn port) 40 ಅಡಿಯ ಎರಡು ಕಂಟೈನರ್‌ಗಳನ್ನು ಡಿಆರ್​ಐ ಅಧಿಕಾರಿಗಳು ತಡೆದು ಪರಿಶೀಲಿಸಿದ್ದಾರೆ. ಎಂಜಿನಿಯರಿಂಗ್ ಸರಕುಗಳೆಂದು ಹೇಳಿಕೊಂಡಿದ್ದ ಎರಡು ಕಂಟೈನರ್​ಗಳಲ್ಲಿ ಬರೋಬ್ಬರಿ 83,520 ಚೀನೀ ಪಟಾಕಿಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಈ ಚೀನಿ ಪಟಾಕಿಗಳ ಮೌಲ್ಯ ₹5.01 ಕೋಟಿ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ‘ನಮಕ್ ಹರಾಮ್’ಗಳ ಮತಗಳು ಬೇಕಿಲ್ಲ: ಬಿಹಾರದಲ್ಲಿ ಗಿರಿರಾಜ್ ಸಿಂಗ್ ಗುಡುಗು; ಮುಸ್ಲಿಮರನ್ನು ಕುಟುಕಿದ ಮಾಡಿದ ಕೇಂದ್ರ ಸಚಿವ

ಚೀನಾ ಪಟಾಕಿ ಆಮದು: ಏಕೆ ಅಕ್ರಮ?

ವಿದೇಶಿ ವ್ಯಾಪಾರ ನೀತಿಯ ಅಡಿಯಲ್ಲಿ ಪಟಾಕಿಗಳ ಆಮದನ್ನು ಸಂಪೂರ್ಣ ಭಾರತದಲ್ಲಿ ನಿರ್ಬಂಧಿಸಲಾಗಿದೆ. ಪಟಾಕಿ ಆಮದಿಗೆ DGFT ಹಾಗೂ PESO ನಿಂದ ಕಡ್ಡಾಯ ಪರವಾನಗಿ ಬೇಕು. ಈ ಅಕ್ರಮ ಆಮದು ಈ ಕಾನೂನುಗಳನ್ನು ಉಲ್ಲಂಘಿಸಿರುವುದು ಮಾತ್ರವಲ್ಲದೆ, ಚೀನಾ ಪಟಾಕಿಗಳ ಅತಿಹೆಚ್ಚು ದಹನಶೀಲತೆಯಿಂದಾಗಿ ಸಾರ್ವಜನಿಕ ಸುರಕ್ಷತೆ ಮತ್ತು ಬಂದರು ಮೂಲಸೌಕರ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿತ್ತು. ಕಳ್ಳಸಾಗಣೆಯನ್ನು ತಡೆಯಲು ಡಿಆರ್‌ಐ ಬದ್ಧವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ದಂಧೆಯ ಹಿಂದಿದ್ದ 4 ಆರೋಪಿಗಳ ಬಂಧನ

ಈ ಅಕ್ರಮ ಕಳ್ಳಸಾಗಣೆ ದಂಧೆಯ ಹಿಂದಿದ್ದವರನ್ನು ಡಿಆರ್‌ಐ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ತೂತುಕುಡಿಯಲ್ಲಿ ಆಮದುದಾರನನ್ನು ಬಂಧಿಸಿದ ಬಳಿಕ, ತನಿಖೆಯಿಂದ ದೊರೆತ ಮಾಹಿತಿ ಮೇರೆಗೆ ಚೆನ್ನೈ ಮತ್ತು ತೂತುಕುಡಿಯಿಂದ ಇಬ್ಬರು ಮುಂಬೈ ಮೂಲದವರು ಸೇರಿದಂತೆ ಇನ್ನೂ ಮೂವರನ್ನು ಬಂಧಿಸಲಾಗಿದೆ. ಈ ನಾಲ್ವರು ಆರೋಪಿಗಳನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಅಯೋಧ್ಯೆಗೆ ಬೆಳಕಿನ ಮೆರಗು ಕೊಟ್ಟ ದೀಪಾರತಿ; 2 ಗಿನ್ನೆಸ್ ದಾಖಲೆಗಳ ನಿರ್ಮಾಣ

ಒಟ್ಟಿನಲ್ಲಿ, ಡಿಆರ್‌ಐ ಈ ದೊಡ್ಡ ಕಳ್ಳಸಾಗಣೆ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಆಮದು ನಿಯಮಗಳನ್ನು ಉಲ್ಲಂಘಿಸಿ, ಸಾರ್ವಜನಿಕ ಸುರಕ್ಷತೆಗೆ ಅಪಾಯ ತಂದೊಡ್ಡುವ ಇಂತಹ ಕೃತ್ಯಗಳ ವಿರುದ್ಧ ಡಿಆರ್‌ಐ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದಾಗಿ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ