Uttar Pradesh: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಕಾರು, 5 ಸಾವು, 5 ಮಂದಿಗೆ ಗಾಯ

ಕ್ಸೈಲೋ ಕಾರೊಂದು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದ್ದು, ಕಾರಿನಲ್ಲಿದ್ದ 5 ಮಂದಿ ಸಾವನ್ನಪ್ಪಿರುವ ಘಟನೆಯು ಉತ್ತರ ಪ್ರದೇಶದ ಲಖಿಂಪುರ ಖೇರಿಯ ಭೀರಾ ರಸ್ತೆಯಲ್ಲಿ ನಡೆದಿದೆ. ಕಾರು ಪಲ್ಟಿಯಾದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ.

Uttar Pradesh: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಕಾರು, 5 ಸಾವು, 5 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 22, 2022 | 11:26 AM

ಲಖಿಂಪುರ ಖೇರಿ: ಕ್ಸೈಲೋ ಕಾರೊಂದು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದ್ದು, ಕಾರಿನಲ್ಲಿದ್ದ 5 ಮಂದಿ ಸಾವನ್ನಪ್ಪಿರುವ ಘಟನೆಯು ಉತ್ತರ ಪ್ರದೇಶದ ಲಖಿಂಪುರ ಖೇರಿಯ ಭೀರಾ ರಸ್ತೆಯಲ್ಲಿ ನಡೆದಿದೆ. ಕಾರು ಪಲ್ಟಿಯಾದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ. ಒಟ್ಟು ಈ ಕಾರಿನಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದರು, ಇದರ 5 ಮಂದಿ ಸಾವನ್ನಪ್ಪಿದ್ದು 5 ಮದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಹಜಹಾನ್‌ಪುರದಿಂದ ಪಾಲಿಯಾಗೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ.

ಈ ಅಪಘಾತದ ನಂತರ ವಾಹನದ ಚಾಲಕ ತಲೆಮರೆಸಿಕೊಂಡಿದ್ದಾನೆ. ಯುಪಿ 26 ಎಂ 7999 ರ ಕ್ಸೈಲೋ ಕಾರು ಶಹಜಹಾನ್‌ಪುರದಿಂದ ಪ್ರಯಾಣಿಕರೊಂದಿಗೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪಾಲಿಯಾಗೆ ಹೊರಟಿತ್ತು. ವಾಹನದಲ್ಲಿ 11 ಮಂದಿ ಇದ್ದರು ಎನ್ನಲಾಗಿದೆ. ಇದರಲ್ಲಿ ಶಿಕ್ಷಕರು ಪ್ರಯಾಗ್‌ರಾಜ್‌ನಿಂದ ಇಲಾಖಾ ತರಬೇತಿ ಪಡೆದು ಕೆಲಸ ಪಡೆಯಲು ಸ್ಥಳಕ್ಕೆ ಹೋಗುತ್ತಿದ್ದರು ಎಂದು ಹೇಳಲಾಗಿದೆ.

ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ದಾರಿಯಲ್ಲಿ ಅಟಾರಿಯಾ ಗ್ರಾಮದ ಬಳಿ ಕಾರು ಬಂದಾಗ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ನೀಡಲು ಹೋಗಿ ಒಡೆದ ಮೋರಿಯ ಬದಿಯಲ್ಲಿ ನಿರ್ಮಿಸಿದ್ದ ಹೊಂಡಕ್ಕೆ ಕ್ಸೈಲೋ ಕಾರು ಪಲ್ಟಿಯಾಗಿದೆ. ಹೊಂಡದಲ್ಲಿ ನೀರು ತುಂಬಿತ್ತು. ಕಾರು ಪಲ್ಟಿಯಾದ ರಭಸಕ್ಕೆ ಅದರಲ್ಲಿದ್ದವರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಉಸಿರುಗಟ್ಟಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರು ಶಿಕ್ಷಕರು ಹಾಗೂ ಮೂವರು ಕಾರ್ಮಿಕರು ಎಂದು ಗುರುತಿಸಲಾಗಿದೆ. ಅಪಘಾತದ ನಂತರ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿ ಹೇಗೋ ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನು ಓದಿ: Accident: ಮುಂಬೈ-ಪುಣೆ ಎಕ್ಸ್​ಪ್ರೆಸ್​ವೇಯಲ್ಲಿ ಭೀಕರ ಅಪಘಾತ; ಐವರು ಸಾವು, 3 ಜನರ ಸ್ಥಿತಿ ಗಂಭೀರ

ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿದ್ದು, ನಂತರ ಎಸ್‌ಡಿಎಂ ಕಾರ್ತಿಕೇಯ ಸಿಂಗ್ ಮತ್ತು ತಹಸೀಲ್ದಾರ್ ಆಶಿಶ್ ಕುಮಾರ್ ಸಿಂಗ್ ಕೂಡ ಸ್ಥಳಕ್ಕೆ ಆಗಮಿಸಿದರು. ನೀರಿನಲ್ಲಿ ಮುಳುಗಿದ್ದ ವಾಹನವನ್ನು ಮೇಲಕ್ಕೆತ್ತಲು ಅಧಿಕಾರಿಗಳು ಕ್ರೇನ್ ಕರೆಸಿದರು. ಅಪಘಾತದಲ್ಲಿ ಮೃತಪಟ್ಟ ಶಿಕ್ಷಕ ಉಮೇಶ್ ಕುಮಾರ್ ಅವರನ್ನು ಫರ್ಸಯ್ಯ ತಾಂಡಾ ಶಾಲೆಯಲ್ಲಿ ಹಾಗೂ ಹರ್ನಾಮ್ ಸೂಡಾ ಪ್ರಾಥಮಿಕ ಶಾಲೆಯಲ್ಲಿ ವೃತ್ತಿಯನ್ನು ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.

ಗಾಯಗೊಂಡವರು ಮತ್ತು ಸತ್ತವರರು

1. ರಾಜಕಿಶೋರ್ s/o ಕೃಷ್ಣ ದತ್ ಶರ್ಮಾ, ವಿಕಾಸ್ ನಗರ ಹರ್ದೋಯಿ (ಮೃತ)

2. ಆಕಾಶ್ s/o ರಾಜಕಿಶೋರ್, ವಿಕಾಸ್ ನಗರ ಹರ್ದೋಯಿ (ಗಾಯಗೊಂಡವರು)

3. ರಾಜು s/o ರಾವುತ್, ಸುಖನ್‌ಪುರವಾ ನಿಘಸನ್ ನಿವಾಸಿ, (ಗಾಯಗೊಂಡವರು)

4. ವಿನಯ್ s/o ರಾವುತ್ r/o ಸುಖನ್ಪೂರ್ವ ನಿಘಸನ್ (ಮೃತ)

5. ರಾಮ್ ನರೇಶ್ s/o ಸಂಭಾರ್ r/o ಛಬ್ಬಪುರ್ವಾ, ಪಲಿಯಕಲನ್

6. ರಾಜೇಂದ್ರ ಶುಕ್ಲಾ s/o ರಾಮ್ ಸಿದ್ಧ ಶುಕ್ಲಾ, ತ್ರಿವೇಣಿ ಟರ್ಬೈನ್ ಲಿಮಿಟೆಡ್, ಪ್ರಯಾಗ್ರಾಜ್ (ಗಾಯಗೊಂಡವರು)

7. ಉಮೇಶ್ s/o ಪರಮ ಕೀರ್ತಿ ಬಿಲಾಸ್‌ಪುರ ಜಿಲ್ಲೆಯ ಮಕಾನ್‌ಪುರ ನಿವಾಸಿ, ರಾಂಪುರ (ಮೃತ ಶಿಕ್ಷಕ)

8. ಹರನಮ್ ಚಂದ್ರ s/o ನಾರಾಯಣ ಚಂದ್ರ ಹಿಮ್ಮತ್ ನಗರ (ಮೃತ ಶಿಕ್ಷಕ)

9. ಪ್ರಶಾಂತ್ ಗಂಗ್ವಾರ್ s/o ಹರಿಓಂ ಗಂಗ್ವಾರ್ ನಿವಾಸಿ ಸಂಧಾನ, ಕತ್ರಾ ಜಿಲ್ಲೆ ಷಹಜಹಾನ್‌ಪುರ (ಗಾಯಗೊಂಡವರು)

10. ಮತಿಯುಲ್ಲಾ ಖಾನ್ s/o ಸಫಕತುಲ್ಲಾ ಖಾನ್ r/o ಇಬ್ರಾಹಿಂಪುರ್, ಮೊಹಮ್ಮದಿ ಖೇರಿ (ಮೃತ)

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:51 am, Tue, 22 November 22

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ