ಸಾಂಬಾ: ಜಮ್ಮು-ಕಾಶ್ಮೀರ (Jammu-Kashmir)ದ ಸಾಂಬಾ ಜಿಲ್ಲೆಯ (Samba District) ಬ್ಯಾರಿ ಬ್ರಾಹ್ಮಣ ಏರಿಯಾದ ನಾಲ್ಕು ಕಡೆಗಳಲ್ಲಿ ಭಾನುವಾರ ರಾತ್ರಿ ಡ್ರೋನ್ (Drone)ಗಳು ಚಲಿಸಿರುವ ಶಂಕೆ ಇದೆ ಎಂದು ಸಾಂಬಾದ ಎಸ್ಎಸ್ಪಿ ರಾಜೇಶ್ ಶರ್ಮಾ ತಿಳಿಸಿದ್ದಾರೆ. ಕಳೆದ 56ಗಂಟೆಯಲ್ಲಿ ಜಮ್ಮು-ಕಾಶ್ಮೀರದ ಹಲವು ಕಡೆಗಳಲ್ಲಿ ಹೀಗೆ ಡ್ರೋನ್ ಹಾರಾಡಿದೆ ಎನ್ನಲಾಗುತ್ತಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಬ್ಯಾರಿ ಬ್ರಾಹ್ಮಣ ಪ್ರದೇಶದಲ್ಲಿ ವಾಸವಾಗಿರುವ ಜನರು ಹೇಳುವಂತೆ, ರಾತ್ರಿ ಅವರಿಗೆ ಬೆಳಕು ಮಿನುಗುವುದು ಕಂಡಿದೆ. ತುಂಬ ಹೊತ್ತುಗಳ ಕಾಲ ಹೀಗೆ ಬೆಳಕು ಕಂಡ ತಕ್ಷಣ ಅವರು ಹತ್ತಿರದ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಲ್ಲಿಗೆ ಭದ್ರತಾ ಪಡೆಗಳು ಆಗಮಿಸಿವೆ. ಜೂನ್ನಲ್ಲಿ ಜಮ್ಮುವಿನ ವಾಯುನೆಲೆ ಬಳಿ ಡ್ರೋನ್ ದಾಳಿ ನಡೆದಿತ್ತು. ಅದಾದ ಬಳಿಕವಂತೂ ಜಮ್ಮು-ಕಾಶ್ಮೀರದ ಅನೇಕ ಕಡೆಗಳಲ್ಲಿ ಹೀಗೆ ಡ್ರೋನ್ ಚಲನೆ ಹೆಚ್ಚುತ್ತಿದೆ. ಇತ್ತೀಚೆಗೆ ಕಾಲಚಕ್ ಏರಿಯಾದಲ್ಲಿ ಹಾರಾಟ ನಡೆಸುತ್ತಿದ್ದ ಡ್ರೋನ್ನ್ನು ಭದ್ರತಾಪಡೆಗಳು ಹೊಡೆದುರುಳಿಸಿದ್ದವು. ಈಗೀಗಂತೂ ಭದ್ರತಾಪಡೆಗಳು ಡ್ರೋನ್ ಬಗ್ಗೆ ತುಂಬ ಅಲರ್ಟ್ ಆಗಿವೆ.
ಮೇಡ್ ಇನ್ ಚೀನಾ ಡ್ರೋನ್ಗಳು ಜೂನ್ನಲ್ಲಿ ಜಮ್ಮುವಿನ ವಾಯುನೆಲೆ ಮೇಲೆ ಡ್ರೋನ್ ಮೂಲಕ ಎರಡು ದಾಳಿ ಆಗಿತ್ತು. ದಾಳಿಯಲ್ಲಿ ಬಳಸಲಾದ ಎರಡೂ ಡ್ರೋನ್ಗಳೂ ಚೀನಾದಲ್ಲಿ ತಯಾರಾಗಿದ್ದವು. ಈ ಡ್ರೋನ್ಗಳ ಮುಖಾಂತರ ಜಮ್ಮುವಿನ ಐಎಫ್ ಸ್ಟೇಶನ್ ಮೇಲೆ ಆರ್ಡಿಎಕ್ಸ್ ಮತ್ತು ನೈಟ್ರೇಟ್ಗಳನ್ನು ಸ್ಫೋಟಿಸಲಾಗಿತ್ತು. ಅದೃಷ್ಟವಶಾತ್ ಯಾವುದೇ ದೊಡ್ಡ ಹಾನಿ ಆಗಿರಲಿಲ್ಲ. ಅಂದಿನಿಂದಲೂ ಜಮ್ಮು-ಕಾಶ್ಮೀರದಾದ್ಯಂತ ಡ್ರೋನ್ ಹಾವಳಿ ಹೆಚ್ಚಾಗಿದ್ದು, ಅದರ ನಿಯಂತ್ರಣಕ್ಕೆ ಭಾರತೀಯ ಸೇನೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಹಾಗೇ ಸೈನಿಕರೂ ಫುಲ್ ಅಲರ್ಟ್ ಆಗಿದ್ದಾರೆ.
ಇದನ್ನೂ ಓದಿ: ಪೊಲೀಸರು ವಶಪಡಿಸಿಕೊಂಡಿದ್ದ ಸ್ಫೋಟಕಗಳು ನಾಪತ್ತೆ, ಗೋದಾಮು ಮಾಲೀಕ ಎಸ್ಕೇಪ್
Drone movements reported at four places in the Bari Brahmana area of Jammu Kashmir