ಪೊಲೀಸರು ವಶಪಡಿಸಿಕೊಂಡಿದ್ದ ಸ್ಫೋಟಕಗಳು ನಾಪತ್ತೆ, ಗೋದಾಮು ಮಾಲೀಕ ಎಸ್ಕೇಪ್
ಕಲ್ಲು ಗಣಿಗಾರಿಕೆಗೆ ಬಳಸುವ ಸ್ಫೋಟಕ ಪೊಲೀಸರ ವಶದಲ್ಲಿದ್ದಾಗಲೇ ಇಂತಹದೊಂದು ಅಕ್ರಮ ಜರುಗಿದೆ. ಇನ್ನು ಗೋದಾಮು ಮಾಲೀಕ ನಜಿಮುಲ್ಲಾ ಷರೀಫ್‌ನಿಂದ ಈ ಸ್ಫೋಟಕಗಳು ಮಾರಾಟವಾಗಿದ್ದು ಸ್ಫೋಟಕ ನಾಶಪಡಿಸಲು BDDS ತಂಡ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಂಡ್ಯ: ಪೊಲೀಸರು ವಶಪಡಿಸಿಕೊಂಡಿದ್ದ ಭಾರಿ ಪ್ರಮಾಣದ ಸ್ಫೋಟಕಗಳು ಮ್ಯಾಗಜೀನ್ ಹೌಸ್‌ನಿಂದ ನಾಪತ್ತೆಯಾಗಿದೆ. 14,400 ಜಿಲೆಟಿನ್ ಕಡ್ಡಿ, 4,000 ಎಲೆಕ್ಟ್ರಿಕ್ ಡಿಟೋನೇಟರ್, 540 ನಾನ್ ಎಲೆಕ್ಟ್ರಿಕ್ ಡಿಟೊನೇಟರ್‌ಗಳು ಸೇರಿ ಭಾರಿ ಪ್ರಮಾಣದ ಸ್ಫೋಟಕಗಳು ನಾಪತ್ತೆಯಾಗಿದ್ದು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಲ್ಲು ಗಣಿಗಾರಿಕೆಗೆ ಬಳಸುವ ಸ್ಫೋಟಕ ಪೊಲೀಸರ ವಶದಲ್ಲಿದ್ದಾಗಲೇ ಇಂತಹದೊಂದು ಅಕ್ರಮ ಜರುಗಿದೆ. ಇನ್ನು ಗೋದಾಮು ಮಾಲೀಕ ನಜಿಮುಲ್ಲಾ ಷರೀಫ್‌ನಿಂದ ಈ ಸ್ಫೋಟಕಗಳು ಮಾರಾಟವಾಗಿದ್ದು ಸ್ಫೋಟಕ ನಾಶಪಡಿಸಲು BDDS ತಂಡ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ, ಆದ್ರೆ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಗೋದಾಮು ಮಾಲೀಕ ನಾಪತ್ತೆಯಾಗಿದ್ದಾನೆ. ಹೀಗಾಗಿ ಪ್ರಕರಣದಲ್ಲಿ ಈತನ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಜೂನ್ 18ರಂದು ಸ್ಫೋಟಕ ನಾಪತ್ತೆ ವಿಚಾರ ಬಯಲಾಗಿತ್ತು. ಆದರೆ ಸ್ಫೋಟಕ ನಾಪತ್ತೆ ಬಗ್ಗೆ ಪೊಲೀಸರು ಗೌಪ್ಯವಾಗಿಟ್ಟಿದ್ದರು. ಹೀಗಾಗಿ ಮಂಡ್ಯ ಪೊಲೀಸರೂ ಶಾಮೀಲಾಗಿದ್ದಾರೆಂದು ಪೊಲೀಸರ ವಿರುದ್ಧ RTI ಕಾರ್ಯಕರ್ತ ರವೀಂದ್ರ ಆರೋಪ ಮಾಡಿದ್ದಾರೆ. ಮಂಡ್ಯ ಜಿಲ್ಲೆ K.R.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಬಳಿ ಜನವರಿ 21ರಂದು ಅಕ್ರಮವಾಗಿ ಸಾಗಿಸುತ್ತಿದ್ದ ಸ್ಫೋಟಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ವಶ ಪಡಿಸಿಕೊಂಡಿದ್ದ ಸ್ಪೋಟಕಗಳನ್ನು ಮ್ಯಾಗಜೀನ್ ಹೌಸ್‌ನಲ್ಲಿ ಇರಿಸಿದ್ದರು.
ಇದನ್ನೂ ಓದಿ: ಮತ್ತೆ ಬರಲಿದೆ ಸಾಂಸ್ಥಿಕ ಕ್ವಾರಂಟೈನ್; ಬಿಬಿಎಂಪಿ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ