ಕೊರೊನಾ ಸೋಂಕಿತರ ಸಂಕಷ್ಟ ನಿವಾರಣೆಗಾಗಿ ಸಜ್ಜಾದ ಡ್ರೈ ಫ್ರೂಟ್ಸ್ ಗಣೇಶ, ಎಲ್ಲಿ?

| Updated By: KUSHAL V

Updated on: Aug 22, 2020 | 12:21 PM

ಗಾಂಧಿನಗರ: ಕೊರೊನಾ ಸೋಂಕಿನ ಹಾವಳಿಯಿಂದ ದೇಶಾದ್ಯಂತ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಜೊತೆಗೆ, ನಾನಾ ಬಗೆಯ ಗಣೇಶನ ಮೂರ್ತಿಗಳು ಸಹ ಮಾರುಕಟ್ಟೆಯಲ್ಲಿ ಜನರನ್ನು ಆಕರ್ಷಿಸುತ್ತಿವೆ. ಇದೇ ರೀತಿ, ಗುಜರಾತಿನ ಸೂರತ್ ನಿವಾಸಿಯಾಗಿರುವ ಡಾಕ್ಟರ್ ಅದಿತಿ ಮಿತ್ತಲ್ ಗಣೇಶ ಚತುರ್ಥಿಯ ಪ್ರಯುಕ್ತ ಡ್ರೈ ಫ್ರೂಟ್ಸ್​ಗಳಿಂದ ಗಣೇಶನ ವಿಗ್ರಹವನ್ನು ತಯಾರಿಸಿದ್ದು ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ನಾನು ಈ ವಿಗ್ರಹವನ್ನು ಡ್ರೈ ಫ್ರೂಟ್ಸ್​ಗಳಿಂದ ತಯಾರಿಸಿದ್ದೇನೆ. ಜೊತೆಗೆ, ಈ ಮೂರ್ತಿಯನ್ನು ಕೊವಿಡ್​​ ಆಸ್ಪತ್ರೆಯಲ್ಲಿ ಪ್ರತಿಷ್ಠಾಪಿಸುತ್ತೇನೆ. ಪೂಜೆಯ […]

ಕೊರೊನಾ ಸೋಂಕಿತರ ಸಂಕಷ್ಟ ನಿವಾರಣೆಗಾಗಿ ಸಜ್ಜಾದ ಡ್ರೈ ಫ್ರೂಟ್ಸ್ ಗಣೇಶ, ಎಲ್ಲಿ?
Follow us on

ಗಾಂಧಿನಗರ: ಕೊರೊನಾ ಸೋಂಕಿನ ಹಾವಳಿಯಿಂದ ದೇಶಾದ್ಯಂತ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಜೊತೆಗೆ, ನಾನಾ ಬಗೆಯ ಗಣೇಶನ ಮೂರ್ತಿಗಳು ಸಹ ಮಾರುಕಟ್ಟೆಯಲ್ಲಿ ಜನರನ್ನು ಆಕರ್ಷಿಸುತ್ತಿವೆ.

ಇದೇ ರೀತಿ, ಗುಜರಾತಿನ ಸೂರತ್ ನಿವಾಸಿಯಾಗಿರುವ ಡಾಕ್ಟರ್ ಅದಿತಿ ಮಿತ್ತಲ್ ಗಣೇಶ ಚತುರ್ಥಿಯ ಪ್ರಯುಕ್ತ ಡ್ರೈ ಫ್ರೂಟ್ಸ್​ಗಳಿಂದ ಗಣೇಶನ ವಿಗ್ರಹವನ್ನು ತಯಾರಿಸಿದ್ದು ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ನಾನು ಈ ವಿಗ್ರಹವನ್ನು ಡ್ರೈ ಫ್ರೂಟ್ಸ್​ಗಳಿಂದ ತಯಾರಿಸಿದ್ದೇನೆ. ಜೊತೆಗೆ, ಈ ಮೂರ್ತಿಯನ್ನು ಕೊವಿಡ್​​ ಆಸ್ಪತ್ರೆಯಲ್ಲಿ ಪ್ರತಿಷ್ಠಾಪಿಸುತ್ತೇನೆ. ಪೂಜೆಯ ನಂತರ ವಿಗ್ರಹದಲ್ಲಿರುವ ಹಣ್ಣುಗಳನ್ನು ಸೋಂಕಿತರಿಗೆ ವಿತರಿಸಲಾಗುವುದು ಎಂದು ಡಾಕ್ಟರ್ ಅದಿತಿ ಮಿತ್ತಲ್ ತಿಳಿಸಿದ್ದಾರೆ.