AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBC India: BBC ವಿರುದ್ಧ ಪ್ರಕರಣ ದಾಖಲಿಸಿ ಇಡಿ

ವಿದೇಶಿ ವಿನಿಮಯ ಉಲ್ಲಂಘನೆ ಆರೋಪದ ಮೇಲೆ ಬಿಬಿಸಿ ಇಂಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ ಗುರುವಾರ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

BBC India: BBC ವಿರುದ್ಧ ಪ್ರಕರಣ ದಾಖಲಿಸಿ ಇಡಿ
ಬಿಬಿಸಿ ಕಚೇರಿ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Apr 13, 2023 | 2:13 PM

Share

ದೆಹಲಿ: ವಿದೇಶಿ ವಿನಿಮಯ ಉಲ್ಲಂಘನೆ ಆರೋಪದ ಮೇಲೆ ಬಿಬಿಸಿ ಇಂಡಿಯಾ (BBC India) ವಿರುದ್ಧ ಜಾರಿ ನಿರ್ದೇಶನಾಲಯ ಗುರುವಾರ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. UK-ಹೆಡ್‌ಕ್ವಾರ್ಟರ್‌ ಬ್ರಾಡ್‌ಕಾಸ್ಟರ್ ಭಾರತೀಯ ಏಜೆನ್ಸಿ ತನಿಖೆಗೆ ಒಳಪಟ್ಟಿರುವುದು ಇದೇ ಮೊದಲಲ್ಲ. ಫೆಬ್ರವರಿಯಲ್ಲಿ, ಆದಾಯ ತೆರಿಗೆ ಅಧಿಕಾರಿಗಳು ತನಿಖೆಯ ಭಾಗವಾಗಿ ಭಾರತದಲ್ಲಿನ ಬಿಬಿಸಿ ಕಚೇರಿಗಳನ್ನು ಶೋಧಿಸಿದ್ದರು. ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಮೋದಿ ಸಾಕ್ಷ್ಯಚಿತ್ರದ ಕುರಿತು ಬಿಬಿಸಿ ವಿವಾದದಲ್ಲಿ ಸಿಲುಕಿಕೊಂಡಿದೆ, ಇದು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಟೀಕಿಸಿದಂತೆ ಇತ್ತು ಎಂದು ಹೇಳಲಾಗಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (FEMA) ನಿಬಂಧನೆಗಳ ಅಡಿಯಲ್ಲಿ ಕೆಲವು ಕಂಪನಿಯ ಕಾರ್ಯನಿರ್ವಾಹಕರ ದಾಖಲೆಗಳು ಮತ್ತು ಹೇಳಿಕೆಗಳನ್ನು ದಾಖಲಿಸಲು ED ಪ್ರಕರಣ ದಾಖಲಿಸಿಕೊಂಡಿದೆ. ಎಫ್‌ಡಿಐ ಉಲ್ಲಂಘನೆಗಾಗಿ ಬಿಬಿಸಿ ತನಿಖೆ ನಡೆಸಲಿದೆ ಎಂದು ವರದಿಗಳು ಹೇಳಿವೆ. FEMA ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯಾಗಿದ್ದು ಅದು ವಿದೇಶಿ ವಿನಿಮಯದ ಒಳಹರಿವು ಮತ್ತು ಹೊರಹರಿವನ್ನು ನಿಯಂತ್ರಿಸುತ್ತದೆ.

ಫೆಬ್ರವರಿಯಲ್ಲಿ ಬಿಬಿಸಿಗೆ ಸಂಬಂಧಿಸಿದಂತೆ ಅನೇಕ ಕಡೆ ದಾಳಿಗಳು ನಡೆದಿತ್ತು. ಆದಾಯ ತೆರಿಗೆ ಅಧಿಕಾರಿಗಳು ಬಿಬಿಸಿಯ ಲೆಕ್ಕಪತ್ರಗಳಲ್ಲಿ ಅಕ್ರಮಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಿದರು. ಕೆಲವೊಂದು ವಿದೇಶಿ ಘಟಕಗಳಿಗೆ ರವಾನೆಯಾದ ಹಣಗಳಿಗೆ ಲೆಕ್ಕವೇ ಇಲ್ಲ, ಇದು ಭಾರತಕ್ಕೆ ಆದಾಯವನ್ನು ತರುವ ವ್ಯವಸ್ಥೆ ಎಂದು ಹಲವು ದಾಖಲೆಗಳನ್ನು ನೀಡದೆ ಮತ್ತು ವಿದೇಶಿದಿಂದ ಬಂದ ಹಣಗಳನ್ನು ಈ ವರೆಗೂ ತೆರಿಗೆ ಇಲಾಖೆಗೆ ಪಾವತಿ ಮಾಡಿಲ್ಲ ಎಂದು ಹೇಳಿದೆ. ಈ ಆರೋಪಗಳಿಗೆ ಬಿಬಿಸಿ ಇನ್ನೂ ಪ್ರತಿಕ್ರಿಯಿಸಿಲ್ಲ.

Published On - 11:56 am, Thu, 13 April 23