ಗ್ರೇಟರ್ ನೋಯ್ಡಾದಲ್ಲಿ (Greater Noida)ರಸ್ತೆ ಮಧ್ಯದಲ್ಲಿ ಪಟಾಕಿ ತುಂಬಿದ ಇ-ರಿಕ್ಷಾಕ್ಕೆ (e-rickshaw) ಬೆಂಕಿ ಹೊತ್ತಿಕೊಂಡಿದ್ದು, ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ. ಈ ಪ್ರದೇಶದಲ್ಲಿ ಜಗನ್ನಾಥ ಯಾತ್ರೆ ವೇಳೆ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಪೊಲೀಸ್ ಸಿಬ್ಬಂದಿ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಮಂಗಳವಾರ ನಡೆದ ಈ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ. ಇ ರಿಕ್ಷಾಗೆ ಬೆಂಕಿ ಹತ್ತಿ ಪಟಾಕಿ ಸಿಡಿಯುತ್ತಿರುವ ದೃಶ್ಯ ರಸ್ತೆಯಲ್ಲಿರುವ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೊದಲ್ಲಿ, ಇ-ರಿಕ್ಷಾ ಗ್ರೇಟರ್ ನೋಯ್ಡಾದ ದಾದ್ರಿ ಪ್ರದೇಶದ ಸಣ್ಣ ಅಂಗಡಿಯೊಂದರ ಮುಂದೆ ನಿಂತಿದ್ದು ಅಲ್ಲೇ ಪಕ್ಕದಲ್ಲಿ ಜನರು ಹಾದು ಹೋಗುತ್ತಿರುವುದು ಕಾಣಿಸುತ್ತದೆ. ಈ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಭಾರೀ ಸ್ಫೋಟ ಸಂಭವಿಸಿದೆ. ಜನರು ಓಡಲಾರಂಭಿಸಿದ್ದು ಆಗ ಸೈಕಲ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಕೆಳಗೆ ಬಿದ್ದಿದ್ದಾರೆ. ಮೊದಲಿಗೆ ಜನರು ಗಾಬರಿಯಿಂದ ಓಡಿದ್ದರಿಂದ ರಸ್ತೆ ನಿರ್ಜನವಾಗಿತ್ತು, ಆದರೆ ನಂತರ ಕೆಲವರು ಸಹಾಯಕ್ಕಾಗಿ ಧಾವಿಸಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ವಿಡಿಯೊ ಪೋಸ್ಟ್ ಮಾಡಿದ ಗ್ರೇಟರ್ ನೋಯ್ಡಾದ ಎಡಿಸಿಪಿ 27.02.2023 ರಂದು ದಾದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ದಾದ್ರಿ ಪಟ್ಟಣದಲ್ಲಿ ಜಗನ್ನಾಥ ಶೋಭಾ ಯಾತ್ರೆ ಸಾಂಪ್ರದಾಯಿಕವಾಗಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೆಲವರು ಪಟಾಕಿ ಸಿಡಿಸುತ್ತಿದ್ದರು. ಮುಂದೆ ಸಾಗುತ್ತಿದ್ದ ಇ-ರಿಕ್ಷಾದ ಮೇಲೆ ಒಂದು ಪಟಾಕಿ ಬಿದ್ದಿತು, ಅದರಲ್ಲಿ ಇತರ ಪಟಾಕಿಗಳನ್ನು ಇರಿಸಲಾಗಿತ್ತು, ಇದರಿಂದಾಗಿ ಉಳಿದವುಗಳಿಗೆ ಬೆಂಕಿ ಹಚ್ಚಿಕೊಂಡಿತು ಎಂದಿದ್ದಾರೆ.
थाना दादरी क्षेत्रांतर्गत कस्बा दादरी में जगन्नाथ शोभा यात्रा के दौरान आतिशबाजी के समान में आग लग गई। इस घटना में 02 व्यक्ति घायल हो गए जिनको इलाज हेतु हॉस्पिटल भेजा गया है, आवश्यक कार्यवाही की जा रही है।
उक्त प्रकरण में एडीसीपी ग्रेटर नोएडा द्वारा दी गयी बाइट। pic.twitter.com/UFYa1NfukL— POLICE COMMISSIONERATE GAUTAM BUDDH NAGAR (@noidapolice) February 27, 2023
ಅಪಘಾತದಲ್ಲಿ ಪಟಾಕಿ ಹಚ್ಚುತ್ತಿದ್ದ ಸಲ್ಮಾನ್ ಮತ್ತು ಇ-ರಿಕ್ಷಾ ಚಾಲಕ ಪಪ್ಪು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ ಜಲಫಿರಂಗಿಗಳನ್ನು ತಂದು ಬೆಂಕಿಯನ್ನು ನಂದಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:20 pm, Tue, 28 February 23