Earthquake: ಅರುಣಾಚಲ ಪ್ರದೇಶದಲ್ಲಿ ಮತ್ತೆ ಕಂಪಿಸಿದ ಭೂಮಿ; 4.1 ತೀವ್ರತೆ ದಾಖಲು
Arunachal Pradesh: ಸೆಪ್ಟೆಂಬರ್ 19ರಂದು ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಪ್ರದೇಶದಲ್ಲಿ 4.4 ತೀವ್ರತೆಯಲ್ಲಿ ಭೂಕಂಪನವಾಗಿತ್ತು.
ಇಟಾನಗರ್: ಅರುಣಾಚಲ ಪ್ರದೇಶದ ಬಸಾರ್ನಲ್ಲಿ ಇಂದು ಬೆಳಗ್ಗೆ 10.15ರ ಹೊತ್ತಿಗೆ ಭೂಮಿ ಕಂಪಿಸಿದೆ. ಭೂಕಂಪದ (Earthquake) ತೀವ್ರತೆ ರಿಕ್ಟರ್ ಮಾಪಕ (Richter scale)ದಲ್ಲಿ 4.1ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದ್ದು, ಬಸಾರ್ನಿಂದ ಉತ್ತರ-ವಾಯುವ್ಯಕ್ಕೆ 143 ಕಿಮೀ ದೂರದಲ್ಲಿ, ಭೂಮಿಯಿಂದ 10 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂದೂ ಮಾಹಿತಿ ನೀಡಿದೆ. ಭೂಕಂಪನದಿಂದ ಯಾವುದೇ ಆಸ್ತಿಪಾಸ್ತಿ, ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಈ ಹಿಂದೆ ಸೆಪ್ಟೆಂಬರ್ 25ರಂದು ಅರುಣಾಚಲ ಪ್ರದೇಶದಲ್ಲಿ ಭೂಕಂಪವಾಗಿತ್ತು. ಅಂದು ಪ್ಯಾಂಗಿನ್ನ ಉತ್ತರದಿಂದ ಈಶಾನ್ಯಕ್ಕೆ 237ಕಿಮೀ ದೂರದಲ್ಲಿ ಬೆಳಗ್ಗೆ 10.11ಗಂಟೆಗೆ ಭೂಮಿ ಕಂಪನವಾಗಿತ್ತು. ಅಂದು 4.5ರಷ್ಟು ತೀವ್ರತೆ ದಾಖಲಾಗಿದ್ದಾಗಿ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿತ್ತು. ಅವತ್ತೂ ಸಹ ಯಾವುದೇ ಹಾನಿಯಾಗಿರಲಿಲ್ಲ. ಅದಕ್ಕೂ ಮೊದಲು ಸೆಪ್ಟೆಂಬರ್ 19ರಂದು ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಪ್ರದೇಶದಲ್ಲಿ 4.4 ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಅಂದು ಚಾಂಗ್ಲಾಂಗ್ನಿಂದ ಉತ್ತರದಿಂದ ಪೂರ್ವಕ್ಕೆ 70 ಕಿಮೀ ದೂರದಲ್ಲಿ, ಮಧ್ಯಾಹ್ನ 3.6ಗಂಟೆಗೆ ಭೂಮಿ ನಡುಗಿತ್ತು. ಹೀಗೆ ಅರುಣಾಚಲ ಪ್ರದೇಶದಲ್ಲಿ ಪದೇಪದೆ ಭೂಕಂಪನವಾಗುತ್ತಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ.
Earthquake of Magnitude:4.1, Occurred on 02-10-2021, 10:15:40 IST, Lat: 29.12 & Long: 93.99, Depth: 10 Km ,Location: 143 km NNW of Basar, Arunachal Pradesh, India for more information Download the BhooKamp App https://t.co/yYtpVJTsCm pic.twitter.com/aNsn8Y4GXk
— National Center for Seismology (@NCS_Earthquake) October 2, 2021
ಇದನ್ನೂ ಓದಿ: Gandhi Jayanti 2021 : ‘ಭಿನ್ನಾಭಿಪ್ರಾಯಗಳು ವಿಷಯಗಳನ್ನು ಕುರಿತು ಇರಬೇಕೇ ಹೊರತು, ವ್ಯಕ್ತಿಗಳ ನಡುವೆ ಇರಬಾರದು‘
Video: 1000 ಕೆಜಿ ತೂಕದ ಖಾದಿ ತ್ರಿವರ್ಣಧ್ವಜ ಲೇಹ್ನಲ್ಲಿ ಅನಾವರಣ; ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜವಿದು
Published On - 11:47 am, Sat, 2 October 21