ದೆಹಲಿ: ರಾಷ್ಟ್ರ ರಾಜಧಾನಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಲಘು ಭೂಕಂಪನದ ಅನುಭವವಾಗಿದೆ. ಹರ್ಯಾಣದ ಝಝರ್ ನಗರದಲ್ಲಿಯೂ ಭೂಕಂಪವಾಗಿದೆ ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ. ಭೂಕಂಪದಿಂದಾಗಿ ಮಲಗಿದ್ದ ಮಂಚಗಳು ಅಲುಗಾಡಿದವು ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.7 ಇತ್ತು ಎಂದು ಎನ್ಡಿಟಿವಿ ವರದಿ ಮಾಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Earthquake of Magnitude 3.7 hit 10-km north of Jhajjar, Haryana at 10:36 pm: National Center for Seismology pic.twitter.com/x8EUmqNYc8
— ANI (@ANI) July 5, 2021
(Earthquake in Dehli Harnaya Many People Inform on Twitter)
Published On - 11:07 pm, Mon, 5 July 21