AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid 19 Vaccination: ‘ದೇಶದಲ್ಲಿ ಮೂರನೇ ಅಲೆ ತಡೆಗಟ್ಟಬೇಕೆಂದರೆ ಒಂದು ದಿನದಲ್ಲಿ 86 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲೇಬೇಕು..’

ಸದ್ಯ ದೇಶದಲ್ಲಿ ಒಂದು ದಿನದಲ್ಲಿ 40 ಲಕ್ಷ ಜನರಿಗೆ ಕೊವಿಡ್​ 19 ಲಸಿಕೆ ನೀಡಲಾಗುತ್ತಿದೆ. ಭಾನುವಾರವಂತೂ ಕೇವಲ 15 ಲಕ್ಷ ಜನರು ಮಾತ್ರ ಕೊರೊನಾ ಲಸಿಕೆ ಪಡೆದಿದ್ದಾರೆ.

Covid 19 Vaccination: ‘ದೇಶದಲ್ಲಿ ಮೂರನೇ ಅಲೆ ತಡೆಗಟ್ಟಬೇಕೆಂದರೆ ಒಂದು ದಿನದಲ್ಲಿ 86 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲೇಬೇಕು..’
ಲಸಿಕೆ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on: Jul 06, 2021 | 9:47 AM

Share

ದೆಹಲಿ: ಕೊವಿಡ್​ 19 ಎರಡನೇ ಅಲೆಯ ಅತ್ಯಂತ ಭಯಂಕರವಾಗಿ ಭಾರತವನ್ನು ಕಾಡಿದೆ. ಹಾಗಾಗಿ ಮತ್ತೆ ಮೂರನೇ ಅಲೆ ಎಂದು ಕೇಳುತ್ತಿದ್ದಂತೆ ಸಹಜವಾಗಿಯೇ ಭಯಪಡುವಂತಾಗಿದೆ. ದೇಶದಲ್ಲಿ ಕೊರೊನಾ ಮೂರನೇ ಅಲೆ ಏಳದಿರಲಿ..ವೈರಸ್​ ನಿಯಂತ್ರಣವಾಗಲಿ ಎಂದು ಪ್ರತಿಯೊಬ್ಬರೂ ಪ್ರಾರ್ಥಿಸುತ್ತಿದ್ದಾರೆ. ಆದರೆ ಹೀಗೆ ಮೂರನೇ ಅಲೆ ನಿಯಂತ್ರಣ ಆಗಬೇಕೆಂದರೆ ಲಸಿಕೆ ನೀಡುವುದೊಂದೆ ಮಾರ್ಗ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗೇ, ದೇಶಾದ್ಯಂತ ಲಸಿಕೆ ಅಭಿಯಾನ ಚುರುಕಾಗಿ, ವೇಗವಾಗಿ ನಡೆಯುತ್ತಿದೆ. ಆದರೂ ಅಲ್ಲಲ್ಲಿ ಲಸಿಕೆಗಳ ಕೊರತೆ ಕಾಡುತ್ತಿರುವುದರಿಂದ ಕೆಲವೊಮ್ಮೆ ಅದರ ವೇಗಕ್ಕೆ ಕಡಿವಾಣ ಹಾಕಿದಂತಾಗುತ್ತಿದೆ.

ಭಾರತದ 130 ಕೋಟಿ ಜನರಿಗೆ ಎರಡೂ ಡೋಸ್​ ಲಸಿಕೆ ಹಾಕುವುದು ಅಷ್ಟು ಸುಲಭದ ಮಾತಲ್ಲ. ಆದರೆ ಕೊರೊನಾ ಮೂರನೇ ಅಲೆ ತಡೆಯಬೇಕೆಂದರೆ ಡಿಸೆಂಬರ್​ ಅಂತ್ಯಕ್ಕೆ 130 ಕೋಟಿ ಜನರ ಶೇ.60ರಷ್ಟು ಮಂದಿಗಾದರೂ ಲಸಿಕೆ ಕೊಟ್ಟು ಮುಗಿದಿರಬೇಕು ಎಂದು ಆರೋಗ್ಯ ತಜ್ಞರು ಅಂದಾಜಿಸಿದ್ದಾರೆ. ಹೀಗಾಗಬೇಕು ಎಂದರೆ ಪ್ರತಿದಿನ 86 ಲಕ್ಷ ಡೋಸ್​​ಗಳಷ್ಟು ಕೊವಿಡ್​ 19 ಲಸಿಕೆ ಕೊಡಬೇಕು ಎಂದು ಅಂದಾಜಿಸಲಾಗಿದೆ.

ಸದ್ಯ ದೇಶದಲ್ಲಿ ಒಂದು ದಿನದಲ್ಲಿ 40 ಲಕ್ಷ ಜನರಿಗೆ ಕೊವಿಡ್​ 19 ಲಸಿಕೆ ನೀಡಲಾಗುತ್ತಿದೆ. ಭಾನುವಾರವಂತೂ ಕೇವಲ 15 ಲಕ್ಷ ಜನರು ಮಾತ್ರ ಕೊರೊನಾ ಲಸಿಕೆ ಪಡೆದಿದ್ದಾರೆ. ಇದೇ ವೇಗದಲ್ಲಿ ಹೋದರೆ ಡಿಸೆಂಬರ್​ ಹೊತ್ತಿಗೆ ಯಾವ ಕಾರಣಕ್ಕೂ ಶೇ.60ರಷ್ಟು ಜನರಿಗೆ ಕೊರೊನಾ ಲಸಿಕೆ ಕೊಟ್ಟು ಮುಗಿಯುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ದೇಶದಲ್ಲಿ ನಿನ್ನೆ (ಸೋಮವಾರ) 39,796 ಹೊಸ ಕೊರೊನಾ ಕೇಸ್​​ಗಳು ಪತ್ತೆಯಾಗಿವೆ. ಕಳೆದ ಮೂರು ತಿಂಗಳಲ್ಲೇ ಇದು ಅತ್ಯಂತ ಕಡಿಮೆ. ಹಾಗಂತ ಕೊರೊನಾ ಕಡಿಮೆಯಾಯಿತು ಎಂದು ನಿಟ್ಟುಸಿರುವ ಬಿಡುವ ಸಂಖ್ಯೆಯಂತೂ ಖಂಡಿತ ಅಲ್ಲ. ಯಾವುದೇ ಕ್ಷಣದಲ್ಲಾದರೂ ಮತ್ತೊಮ್ಮೆ ಇದು ಉಲ್ಬಣಿಸಬಹುದು. ದೇಶದಲ್ಲಿ ಸದ್ಯ ಕೊವಿಶೀಲ್ಡ್​, ಕೊವ್ಯಾಕ್ಸಿನ್​, ಸ್ಪುಟ್ನಿಕ್​ ವಿ ಮತ್ತು ಮಾಡೆರ್ನಾ ಲಸಿಕೆಗಳು ಬಳಕೆಗೆ ಲಭ್ಯ ಇವೆ. ಆದರೆ ಉತ್ಪಾದನೆ ಮತ್ತು ನೀಡುವ ವೇಗವನ್ನು ಹೆಚ್ಚಿಸಬೇಕಿದೆ. ಇನ್ನು ಕೊರೊನಾ ಸೋಂಕಿನ ಮೂರನೇ ಅಲೆ ಮಕ್ಕಳಿಗೆ ಬಾಧಿಸುತ್ತದೆ ಎಂದೂ ಹೇಳಲಾಗುತ್ತಿದ್ದು, ಅದೊಂದು ಆತಂಕ ಶುರುವಾಗಿದೆ. ಹೀಗಾಗಿ  ಆದಷ್ಟು ಶೀಘ್ರದಲ್ಲೇ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಬೇಕು. ಜೈಡಸ್​ ಕ್ಯಾಡಿಲಾ ಲಸಿಕೆ ಮಕ್ಕಳ ಮೇಲೆ ಪ್ರಯೋಗ ನಡೆಯುತ್ತಿದ್ದು, ಅದು ಜುಲೈ ಅಂತ್ಯ ಅಥವಾ ಅಗಸ್ಟ್​​ನಲ್ಲಿ ಬಳಕೆಗೆ ಲಭ್ಯವಾಗುವ ಹೆಚ್ಚಿನ ಸಾಧ್ಯತೆ ಇದೆ.

ಇದನ್ನೂ ಓದಿ: Covid 19: ಕೊರೊನಾ ಮೂರನೇ ಅಲೆಯಲ್ಲಿ ದಿನಕ್ಕೆ 1.5 ಲಕ್ಷ ಪ್ರಕರಣ ದಾಖಲಾಗುವ ಸಾಧ್ಯತೆ; ನಿಯಮಾವಳಿ ಪಾಲಿಸಿದರೆ ಕಡಿಮೆ ಅಪಾಯ

8.6 Million Corona Vaccine Jabs Need a day for prevent The 3rd Wave of Coronavirus