ಗ್ಯಾಂಗ್ಟಕ್: ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್ ನಗರದಲ್ಲಿ ಸೋಮವಾರ ರಾತ್ರಿ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 5.4 ದಾಖಲಾಗಿದೆ. ಗ್ಯಾಂಗ್ಟಕ್ ನಗರಕ್ಕೆ 25 ಕಿಮೀ ಪೂರ್ವದಲ್ಲಿ ಭೂಕಂಪದ ಕೇಂದ್ರವಿತ್ತು ಎಂದು ಭೂವಿಜ್ಞಾನಿಗಳು ಹೇಳಿದ್ದಾರೆ.
ಭೂಮಿಯ 10 ಕಿಮೀ ಆಳದಲ್ಲಿ ಭಾರತೀಯ ಕಾಲಮಾನ ರಾತ್ರಿ 8.49ಕ್ಕೆ ಭೂಮಿಯು ಕಂಪಿಸಿದೆ ಎಂದು ಭೂತರಂಗಾತರ ತಜ್ಞರು ಮಾಹಿತಿ ನೀಡಿದ್ದಾರೆ. ಸಿಕ್ಕಿಂ ಜೊತೆಗೆ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿಯೂ ಭೂಮಿಯು ಕಂಪಿಸಿರುವುದು ವರದಿಯಾಗಿದೆ. ನೇಪಾಳದ ಕೆಲ ಊರುಗಳಲ್ಲಿಯೂ ಜನರಿಗೆ ಭೂಕಂಪನದ ಅನುಭವವಾಗಿದೆ.
ಪಾಟ್ನಾ, ಅರಾರಿಯಾ ಮತ್ತು ಕಿಶನ್ಗಂಜ್ಗಳ ನಾಗರಿಕರು ಭೂಮಿ ಕಂಪಿಸಿರುವುದನ್ನು ದೃಢಪಡಿಸಿದ್ದಾರೆ. ಭೂಕಂಪದಿಂದ ಆಸ್ತಿ ಮತ್ತು ಪ್ರಾಣಹಾನಿ ಆಗಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಫೆಬ್ರುವರಿ 15ಂದು 3.5 ತೀವ್ರತೆಯ ಭೂಕಂಪ ಪಾಟ್ನಾದಲ್ಲಿ ಸಂಭವಿಸಿತ್ತು. ಈ ಭೂಕಂಪದ ಕೇಂದ್ರ ನಳಂದ ಪಟ್ಟಣದ 20 ಕಿಮೀ ವಾಯವ್ಯಕ್ಕೆ ಮತ್ತು ಭೂಮಿಯ 5 ಕಿಮೀ ಆಳದಲ್ಲಿ ಇತ್ತು.
ನ್ಯೂಝಿಲೆಂಡ್ನಲ್ಲಿ ಪ್ರಬಲ ಭೂಕಂಪ
ನ್ಯೂಝಿಲೆಂಡ್ನ ಉತ್ತರ ದ್ವೀಪದಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6 ಎಂದು ನಮೂದಾಗಿದೆ. ಆಸ್ತಿ ಮತ್ತು ಪ್ರಾಣ ಹಾನಿಯ ಮಾಹಿತಿ ಇನ್ನೂ ಸಿಕ್ಕಿಲ್ಲ.
moderate #earthquake shakes #Sikkim, #India 9 min ago. More info at: https://t.co/C6ITviTjc8 pic.twitter.com/Os8T0hMM9N
— EMSC (@LastQuake) April 5, 2021
(Earthquake in Sikkim Nepal border tremors felt in Bihar Assam and West Bengal)
ಇದನ್ನೂ ಓದಿ: Japan Earthquake: ಜಪಾನ್ನಲ್ಲಿ 7.1 ತೀವ್ರತೆಯ ಭೂಕಂಪ: ಸುನಾಮಿ ಮುನ್ಸೂಚನೆ ಇಲ್ಲ ಎಂದ ಅಧಿಕಾರಿಗಳು
ಇದನ್ನೂ ಓದಿ: ದಕ್ಷಿಣ ಪೆಸಿಫಿಕ್‌ನಲ್ಲಿ 7.7 ತೀವ್ರತೆಯ ಭೂಕಂಪ, ಸುನಾಮಿ ಖಚಿತ ಪಡಿಸಿದ ಆಸ್ಟ್ರೇಲಿಯಾ ಹವಾಮಾನ ಇಲಾಖೆ