Earthquake: ಲಡಾಖ್​ನ ಲೇಹ್​ನಲ್ಲಿ 4.8 ತೀವ್ರತೆಯ ಭೂಕಂಪ

ಲಡಾಖ್​ನ ಲೇಹ್​ನಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಇಲಾಖೆ ಮಾಹಿತಿ ನೀಡಿದೆ.

Earthquake: ಲಡಾಖ್​ನ ಲೇಹ್​ನಲ್ಲಿ 4.8 ತೀವ್ರತೆಯ ಭೂಕಂಪ
Earthquake
Edited By:

Updated on: Sep 16, 2022 | 9:47 AM

ಲಡಾಖ್​ನ ಲೇಹ್​ನಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಇಲಾಖೆ ಮಾಹಿತಿ ನೀಡಿದೆ. ಶುಕ್ರವಾರ ಬೆಳಗಿನ ಜಾವ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದೆ. ಲೇಹ್‌ನ ಅಲ್ಚಿಯಿಂದ ಉತ್ತರಕ್ಕೆ 189 ಕಿಮೀ ದೂರದಲ್ಲಿ ನೆಲದಿಂದ 10 ಕಿಮೀ ಆಳದಲ್ಲಿ ಬೆಳಗಿನ ಜಾವ 4:19 ಕ್ಕೆ ಭೂಕಂಪ ಸಂಭವಿಸಿದೆ.

-ತೀವ್ರತೆಯ ಭೂಕಂಪ:4.8, 16-09-2022 ರಂದು ಸಂಭವಿಸಿದೆ
04:19:41 IST,

ಲ್ಯಾಟ್: 35.89

ಉದ್ದ: 77.57,

ಆಳ: 10 ಕಿಮೀ

ಸ್ಥಳ: ಅಲ್ಚಿ (ಲೇಹ್) ನ 189 ಕಿಮೀ ಉತ್ತರ

ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಕಳೆದ ವಾರದ ಆರಂಭದಲ್ಲಿ, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪವು ಜಮ್ಮು ಮತ್ತು ಕಾಶ್ಮೀರದ ಕತ್ರಾದಿಂದ 62 ಕಿಮೀ ಪೂರ್ವ-ಈಶಾನ್ಯಕ್ಕೆ ಸಂಭವಿಸಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು (NCS) ದೇಶದಲ್ಲಿ ಭೂಕಂಪದ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ.

ಮಾಹಿತಿಯ ಪ್ರಕಾರ, ಕೆಲವು ದಿನಗಳ ಹಿಂದೆ ಲೇಹ್‌ನ ಅಲ್ಚಿಯಲ್ಲಿ ಲಘು ಭೂಕಂಪನದ ಅನುಭವವಾಯಿತು. ಜನರು ಬೆಳಗಿನ ಕೆಲಸಗಳಲ್ಲಿ ನಿರತರಾಗಿದ್ದಾಗ, ಅದೇ ಸಮಯದಲ್ಲಿ ಭೂಕಂಪ ಸಂಭವಿಸಿತ್ತು. ಅಲ್ಚಿ ಪ್ರದೇಶದ ಮನೆಗಳ ಬಾಗಿಲು, ಕಿಟಕಿಗಳು ಅಲುಗಾಡಲಾರಂಭಿಸಿತ್ತು. ಜನರು ಭಯದಿಂದ ಮನೆಯಿಂದ ಹೊರಬಂದಿದ್ದರು.

ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿತ್ತು. ಸದ್ಯಕ್ಕೆ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿರಲಿಲ್ಲ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:42 am, Fri, 16 September 22