ರಾಜಸ್ಥಾನದ ಬಿಕಾನೆರ್ನಲ್ಲಿ ಪ್ರಬಲ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ. ಸದ್ಯ ಯಾವುದೇ ಆಸ್ತಿಪಾಸ್ತಿ ಹಾನಿಯಾಗಿಲ್ಲ. ಜೀವ ಹೋದ ವರದಿಯೂ ಆಗಿಲ್ಲ. ನಿನ್ನೆ ಸಂಜೆ 6.56ರ ಹೊತ್ತಿಗೆ ಭೂಮಿ ಕಂಪಿಸಿದೆ. ಹೀಗೆ ಭೂಮಿ ನಡುಗುತ್ತಿದ್ದಂತೆ ಸ್ಥಳೀಯ ಜನರು ಗಾಬರಿಯಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಸಂಜೆ ಮನೆಯಲ್ಲಿ ಕುಳಿತಿದ್ದಾಗ ಒಮ್ಮೆಲೇ ಭೂಮಿ ಕಂಪನವಾಗಲು ಶುರುವಾಯಿತು. ಭಯದಿಂದ ಎಲ್ಲರೂ ಹೊರಗೆ ಓಡಿದೆವು. ಆದರೆ ಅದೃಷ್ಟಕ್ಕೆ ನಮ್ಮ ಮನೆ ಬೀಳಲಿಲ್ಲ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಇತ್ತೀಚೆಗಷ್ಟೇ ರಾಜಸ್ಥಾನದ ಜಾಲೋರ್ನಲ್ಲಿ ಭೂಕಂಪವಾಗಿತ್ತು. ಆಗಲೂ ಕೂಡ ಪ್ರಾಣ ಅಥವಾ ಆಸ್ತಿಪಾಸ್ತಿ ಹಾನಿಯಾಗಿರಲಿಲ್ಲ.
ರಾಜಸ್ಥಾನದ ಬಿಕಾನೆರ್ನಲ್ಲಿ ಭೂಮಿ ನಡುಗುವುದಕ್ಕೂ ಮೊದಲು ಮ್ಯಾನ್ಮಾರ್-ಭಾರತ ಗಡಿ ಕೂಡ ನಡುಗಿದೆ. ಮಿಝೋರಾಂನ ಥೆಂಜಾವ್ಲ್, ಪಶ್ಚಿಮ ಬಂಗಾಳದ ಕೋಲ್ಕತ್ತಗಳಲ್ಲಿಯೂ ಭೂಕಂಪನದ ಅನುಭವ ಆಗಿದೆ. ಅದರಲ್ಲೂ ಮಿಝೋರಾಂನ ಥೆಂಜಾವ್ಲ್ನಲ್ಲಿ ಭೂಕಂಪದ ತೀವ್ರತೆ 6.1ರಷ್ಟಿತ್ತು ಎನ್ನಲಾಗಿದೆ. ಭಾರತ-ಮೈನ್ಮಾರ್ ಗಡಿಯ ಭೂಕಂಪನದ ಕೇಂದ್ರ ಥೆಂಜಾವ್ಲ್ ಆಗಿತ್ತು ಎಂದು ಭಾರತೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ.
ಇದನ್ನೂ ಓದಿ: Virat Kohli: ವಿದೇಶಿ ತಂಡಕ್ಕೆ ನಡುಕ ಹುಟ್ಟಿಸಿದೆ ವಿರಾಟ್ ಕೊಹ್ಲಿ ಬಗ್ಗೆ ಗೌತಮ್ ಗಂಭೀರ್ ನೀಡಿದ ಆ ಒಂದು ಹೇಳಿಕೆ
Published On - 8:38 am, Mon, 13 December 21