Virat Kohli: ವಿದೇಶಿ ತಂಡಕ್ಕೆ ನಡುಕ ಹುಟ್ಟಿಸಿದೆ ವಿರಾಟ್ ಕೊಹ್ಲಿ ಬಗ್ಗೆ ಗೌತಮ್ ಗಂಭೀರ್ ನೀಡಿದ ಆ ಒಂದು ಹೇಳಿಕೆ

Gautam Gambhir: ಟೀಮ್ ಇಂಡಿಯಾದ ಏಕದಿನ ಹಾಗೂ ಟಿ20 ನಾಯಕತ್ವದಿಂದ ಕೆಳಕ್ಕಿಳಿದ ಬಳಿಕ ವಿರಾಟ್ ಕೊಹ್ಲಿ ಎದುರಾಳಿಗರಿಗೆ ಮತ್ತಷ್ಟು ಅಪಾಯಕಾರಿ ಬ್ಯಾಟರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಇದು ಎದುರಾಳಿ ತಂಡದ ಆತಂಕವನ್ನು ಹೆಚ್ಚಿಸಿದೆ.

Virat Kohli: ವಿದೇಶಿ ತಂಡಕ್ಕೆ ನಡುಕ ಹುಟ್ಟಿಸಿದೆ ವಿರಾಟ್ ಕೊಹ್ಲಿ ಬಗ್ಗೆ ಗೌತಮ್ ಗಂಭೀರ್ ನೀಡಿದ ಆ ಒಂದು ಹೇಳಿಕೆ
ಇನ್ನು ಟೀಮ್ ಇಂಡಿಯಾ ಮಾಜಿ ಬ್ಯಾಟರ್ ಗೌತಮ್ ಗಭೀರ್ ಕೂಡ ರೋಹಿತ್ಗೆ ನಾಯಕತ್ವದ ಜವಾಬ್ದಾರಿ ನೀಡಿದ್ದು ಒಳ್ಳೆಯ ನಿರ್ಧಾರ ಎಂದು ಮಾತನಾಡಿದ್ದಾರೆ.
Follow us
TV9 Web
| Updated By: Vinay Bhat

Updated on: Dec 13, 2021 | 8:29 AM

ಟೀಮ್ ಇಂಡಿಯಾ (Team India) ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿ (Virat Kohli) ಅವರನ್ನು ಕೆಳಗಿಳಿಸಿದ ಕುರಿತ ಚರ್ಚೆ ಇನ್ನೂ ತಣ್ಣಗಾಗಿಲ್ಲ. ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ (Social Media) ಈ ಬಗ್ಗೆ ಪರ – ವಿರೋಧದ ಮಾತುಗಳು ಕೇಳಿಬರುತ್ತಿವೆ. ಓಡಿಐ ಕ್ರಿಕೆಟ್​ನಲ್ಲಿ ನಾಯಕನಾಗಿ ಅತಿ ಹೆಚ್ಚು ಗೆಲುವಿನ ಸರಾಸರಿ ಹೊಂದಿರುವ ಕೊಹ್ಲಿ ಅವರನ್ನು ಯಾತಕ್ಕಾಗಿ ಕೆಳಗಿಳಿಸಿದಿರಿ ಎಂಬ ಪ್ರಶ್ನೆಗಳು ಎದ್ದಿತ್ತು. ಇದಕ್ಕೆ ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಸ್ಪಷ್ಟನೆ ಕೂಡ ನೀಡಿದ್ದರು. ಟಿ20 ಮತ್ತು ಏಕದಿನ ಮಾದರಿಯ ವೈಟ್ ಬಾಲ್ ಕ್ರಿಕೆಟ್​ಗೆ ಬೇರೆ ನೇರೆ ನಾಯಕ ಇರುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ (Rohit Sharma) ನಾಯಕನ ಪಟ್ಟ ನೀಡಲಾಯಿತು ಎಂದರು. ಸದ್ಯ ಇದೇ ವಿಚಾರವಾಗಿ ಟೀಮ್ ಇಂಡಿಯಾ ಮಾಜಿ ಬ್ಯಾಟರ್ ಗೌತಮ್ ಗಭೀರ್ (Gautam Gambhir) ಮಾತನಾಡಿದ್ದಾರೆ. ಇವರು ನೀಡಿರುವ ಹೇಳಿಕೆ ಎದುರಾಳಿ ತಂಡದಲ್ಲಿ ನಡುಕ ಹುಟ್ಟಿಸುವಂತೆ ಮಾಡಿದೆ.

ಟೀಮ್ ಇಂಡಿಯಾದ ಏಕದಿನ ಹಾಗೂ ಟಿ20 ನಾಯಕತ್ವದಿಂದ ಕೆಳಕ್ಕಿಳಿದ ಬಳಿಕ ವಿರಾಟ್ ಕೊಹ್ಲಿ ಎದುರಾಳಿಗರಿಗೆ ಮತ್ತಷ್ಟು ಅಪಾಯಕಾರಿ ಬ್ಯಾಟರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಗಂಭೀರ್, “ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ನಿಭಾಯಿಸುತ್ತಿರುವ ಪಾತ್ರವನ್ನು ಈಗ ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ನಿಭಾಯಿಸುವ ಅಗತ್ಯವಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಾಯಕ ಅಲ್ಲ ಎಂಬುದನ್ನು ಬಿಟ್ಟರೆ ಉಳಿದೆಲ್ಲವೂ ಕೊಹ್ಲಿ ಪರವಾಗಿದೆ. ಈಗ ನಾಯಕತ್ವ ಇಲ್ಲದೆ ಒತ್ತಡ ಮುಕ್ತವಾಗಿ ಬ್ಯಾಟಿಂಗ್‌ ಮಾಡಬಲ್ಲರು. ಇದು ಅವರನ್ನು ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ ಆಗಿ ಮಾಡಬಲ್ಲದು” ಎಂದು ಹೇಳಿದ್ದಾರೆ.

“ಖಂಡಿತಾ ವಿರಾಟ್ ಕೊಹ್ಲಿ ಭಾರತವನ್ನು ಹೆಮ್ಮೆ ಪಡುವಂತೆ ಮಾಡಲಿದ್ದಾರೆ. ವೈಟ್‌ ಬಾಲ್ ಕ್ರಿಕೆಟ್ ಆಗಿರಬಹುದು ಅಥವಾ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಆಗಿರಬಹುದು ಮತ್ತಷ್ಟು ಹೆಚ್ಚಿನ ರನ್‌ಗಳಿಸಲಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಪ್ರತ್ಯೇಕ ನಾಯಕರು ತಂಡಕ್ಕೆ ತಮ್ಮದೇ ಆದ ಯೋಜನೆ, ಗುರಿಯನ್ನು ನೀಡಲಿದ್ದಾರೆ. ನಾಯಕತ್ವದಿಂದ ಹೊರಗುಳಿದರೂ ಕೊಹ್ಲಿ ಅವರನ್ನು ತಂಡದಿಂದ ಕೈಬಿಡುವ ಪ್ರಶ್ನೆಯೇ ಉದ್ಭವಿಸದು” ಎಂಬುದು ಗಂಭೀರ್ ಅಭಿಪ್ರಾಯ.

ಟೀಮ್ ಇಂಡಿಯಾ ಡಿಸೆಂಬರ್ 16 ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್‌ ತಂಡದ ಸದಸ್ಯರು 3 ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಮುಂಬೈಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಫೈವ್‌ಸ್ಟಾರ್‌ ಹೊಟೇಲ್‌ ಒಂದರಲ್ಲಿ ಇವರಿಗೆ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಚಾರ್ಟರ್‌ ವಿಮಾನವೊಂದರಲ್ಲಿ ಭಾರತ ತಂಡ ಜೊಹಾನ್ಸ್‌ಬರ್ಗ್‌ಗೆ ತೆರಳಲಿದೆ.

IPL 2022 Auction: ಬಹುನಿರೀಕ್ಷಿತ ಐಪಿಎಲ್ 2022 ಮೆಗಾ ಆಕ್ಷನ್ ಬಗ್ಗೆ ಹೊರಬಿತ್ತು ನೂತನ ಮಾಹಿತಿ

(Gautam Gambhir feels Virat Kohli become more dangerous in limited-overs cricket after losing India ODI captaincy)