IPL 2022 Auction: ಬಹುನಿರೀಕ್ಷಿತ ಐಪಿಎಲ್ 2022 ಮೆಗಾ ಆಕ್ಷನ್ ಬಗ್ಗೆ ಹೊರಬಿತ್ತು ನೂತನ ಮಾಹಿತಿ

ಈ ಹಿಂದೆ ಮುಂದಿನ ವರ್ಷ ಜನವರಿಯ ಮೊದಲ ವಾರದಲ್ಲಿ ದೊಡ್ಡ ಹರಾಜು ಪ್ರಕ್ರಿಯೆ ನಡೆಸಲು ನಿಗದಿ ಮಾಡಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇದೀಗ ದಿನಾಂಕವನ್ನು ಮುಂದೂಡಿದೆ. ಮೂಲಗಳ ಪ್ರಕಾರ, ಐಪಿಎಲ್ 2022 ಮೆಗಾ ಆಕ್ಷನ್ ಜನವರಿ ಎರಡನೇ ವಾರದಲ್ಲಿ ಜರುಗಲಿದೆ.

IPL 2022 Auction: ಬಹುನಿರೀಕ್ಷಿತ ಐಪಿಎಲ್ 2022 ಮೆಗಾ ಆಕ್ಷನ್ ಬಗ್ಗೆ ಹೊರಬಿತ್ತು ನೂತನ ಮಾಹಿತಿ
IPL 2022 Mega Auctions
Follow us
TV9 Web
| Updated By: Vinay Bhat

Updated on: Dec 13, 2021 | 7:16 AM

ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) 15ನೇ ಆವೃತ್ತಿಯ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಈ ಹಿಂದೆ ಮುಂದಿನ ವರ್ಷ ಜನವರಿಯ ಮೊದಲ ವಾರದಲ್ಲಿ ದೊಡ್ಡ ಹರಾಜು ಪ್ರಕ್ರಿಯೆ ನಡೆಸಲು ನಿಗದಿ ಮಾಡಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇದೀಗ ದಿನಾಂಕವನ್ನು ಮುಂದೂಡಿದೆ. ಮೂಲಗಳ ಪ್ರಕಾರ, ಐಪಿಎಲ್ 2022 ಮೆಗಾ ಆಕ್ಷನ್ (IPL 2022 Mega Auction) ಜನವರಿ ಎರಡನೇ ವಾರದಲ್ಲಿ ಜರುಗಲಿದೆ. ಐಪಿಎಲ್ 2022 ಟೂರ್ನಿಯಲ್ಲಿ ಅಹ್ಮದಾಬಾದ್ ಮತ್ತು ಲಖನೌ ಫ್ರಾಂಚೈಸಿಗಳು ಹೊಸ ತಂಡಗಳಾಗಿ ಕಣಕ್ಕಿಳಿಯಲಿದ್ದು, ಈ ತಂಡಗಳಿಗೆ ಡಿಸೆಂಬರ್‌ 25ರವರೆಗೆ ಹರಾಜಿಗೆ ಬಿಡುಗಡೆ ಆಗಿರುವ ಆಟಗಾರರಲ್ಲಿ ಗರಿಷ್ಠ ಮೂವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಅವಕಾಶವಿದೆ. ಹೀಗಾಗಿ ಮುಂದಿನ ಜನವರಿ ಎರಡನೇ ವಾರದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ.

ನೂತನ ಎರಡು ಫ್ರಾಂಚೈಸಿಗಳು ತಲಾ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಕೆಲವು ಷರತ್ತುಗಳನ್ನು ವಿಧಿಸಿದೆ. ಅಂದರೆ 34 ಕೋಟಿ ರೂ. ಮೊತ್ತದ ಒಳಗೆ ಈ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಅದರಂತೆ ಮೊದಲ ಆಟಗಾರನಿಗೆ 15 ಕೋಟಿ ರೂ., 2ನೇ ಆಟಗಾರನಿಗೆ 11 ಕೋಟಿ ರೂ. ಹಾಗೂ 3ನೇ ಆಟಗಾರನಿಗೆ 8 ಕೋಟಿ ರೂ. ವ್ಯಯಿಸಬೇಕಾಗುತ್ತದೆ.

ಈ ಮೂಲಕ ಈಗಾಗಲೇ ಹಳೆಯ ಫ್ರಾಂಚೈಸಿಗಳು ರಿಲೀಸ್‌ ಮಾಡಿರುವ ಇಬ್ಬರು ಭಾರತೀಯ ಆಟಗಾರರು ಪ್ಲಸ್‌ ಒಬ್ಬ ವಿದೇಶಿ ಆಟಗಾರನನ್ನು ನೂತನ ತಂಡಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಈ ಆಯ್ಕೆ ಪ್ರಕ್ರಿಯೆಗೆ ಹೊಸ ಫ್ರಾಂಚೈಸಿಗಳು ಹೆಚ್ಚಿನ ಸಮಯಾವಕಾಶ ಕೇಳಿವೆ. ಹೀಗಾಗಿ ಮೆಗಾ ಹರಾಜು ಪ್ರಕ್ರಿಯೆ ಸಹಜವಾಗಿಯೇ ಮುಂದೂಡಲ್ಪಡಲಿದೆ.

ಇನ್ನು ಐಪಿಎಲ್ 2022ರ ಹರಾಜಿಗಾಗಿ ಬಿಸಿಸಿಐ ತಂಡಗಳ ಸ್ಯಾಲರಿ ಪರ್ಸ್‌ಅನ್ನು 85ರಿಂದ 90 ಕೋಟಿಗೆ ಹೆಚ್ಚಳಗೊಳಿಸಿದೆ. ಅಂದರೆ ಈ ಹಿಂದಿನ ಮಿನಿ ಹರಾಜಿನಲ್ಲಿ ತಂಡಗಳ ಪರ್ಸ್‌ಅನ್ನು 85 ಕೋಟಿ ನಿಗದಿ ಪಡಿಸಲಾಗಿತ್ತು. ಅದರಲ್ಲಿ ಐದು ಕೋಟಿ ಏರಿಕೆ ಮಾಡಲಾಗಿದೆ. ಈ ಆಟಗಾರರಲ್ಲಿ ತಂಡಗಳು ಮೊದಲಿಗೆ ಗರಿಷ್ಠ ನಾಲ್ಕು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು ಈ ಪ್ರಕ್ರಿಯೆ ಈಗಾಗಲೇ ಅಂತ್ಯವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮೂವರು ಆಟಗಾರರನ್ನು ತಮ್ಮ ತಂಡದಲ್ಲಿಯೇ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ಪಂಜಾಬ್ ಕಿಂಗ್ಸ್ ತಂಡ ಮಾತ್ರ ಇಬ್ಬರು ಆಟಗಾರರನ್ನು ಮಾತ್ರವೇ ರೀಟೈನ್ ಮಾಡಿಕೊಂಡಿದೆ. ಈ ಮೂಲಕ ಮುಂದಿನ ಹರಾಜಿನಲ್ಲಿ ಹೆಚ್ಚಿನ ಮೊತ್ತದೊಂದಿಗೆ ಹರಾಜು ಪ್ರಕ್ರಿಯೆಗೆ ಕಣಕ್ಕಿಳಿಯುತ್ತಿದೆ ಪಂಜಾಬ್ ಕಿಂಗ್ಸ್.

Vijay Hazare Trophy: ಮುಂಬೈ ವಿರುದ್ಧ ಅಬ್ಬರಿಸಿದ ಆರ್​ಸಿಬಿ ಮಾಜಿ ಆಲ್​ರೌಂಡರ್! ಬಂಗಾಳಕ್ಕೆ ಜಯದ ಮಾಲೆ

(IPL 2022 Auction Indian Premier League 2022 Auction has been delayed Because of this reasons)

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ