- Kannada News Photo gallery Cricket photos Vijay Hazare Trophy Bengla beat Mumbai to register 3rd win Shahbaz Ahmed stars with bat and ball
Vijay Hazare Trophy: ಮುಂಬೈ ವಿರುದ್ಧ ಅಬ್ಬರಿಸಿದ ಆರ್‌ಸಿಬಿ ಮಾಜಿ ಆಲ್ರೌಂಡರ್! ಬಂಗಾಳಕ್ಕೆ ಜಯದ ಮಾಲೆ
Vijay Hazare Trophy: ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಳೆದ ಋತುವಿನವರೆಗೆ ಆರ್‌ಸಿಬಿ ಪರ ಆಡಿದ ಈ ಆಟಗಾರ ಕೇವಲ 97 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 106 ರನ್ ಬಾರಿಸಿದರು.
Updated on: Dec 12, 2021 | 10:40 PM

ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂಗಾಳ ಮತ್ತು ಮುಂಬೈ ತಂಡಗಳು ಸದ್ಯಕ್ಕೆ ಉತ್ತಮ ಫಾರ್ಮ್‌ನಲ್ಲಿಲ್ಲ. ಎರಡೂ ತಂಡಗಳು ತಲಾ ಎರಡೆರಡು ಗೆಲುವನ್ನು ಪಡೆದಿದ್ದು, ಅಷ್ಟೇ ಸೋಲು ಕಂಡಿವೆ. ಅಂತಹ ಪರಿಸ್ಥಿತಿಯಲ್ಲಿ, ಡಿಸೆಂಬರ್ 12 ರ ಭಾನುವಾರದಂದು ಇಬ್ಬರೂ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಂಗಾಳದ ಶಹಬಾಜ್ ಅಹ್ಮದ್ ಅವರ ಆಲ್ರೌಂಡ್ ಆಟದ ಆಧಾರದ ಮೇಲೆ ಡಕ್ವರ್ತ್-ಲೂಯಿಸ್ ನಿಯಮದ ಪ್ರಕಾರ 67 ರನ್ಗಳಿಂದ ಮುಂಬೈ ಅನ್ನು ಸೋಲಿಸಿದ ಬಂಗಾಳ ಜಯದ ಮಾಲೆ ಮುಡಿಯಿತು.

ಶಹಬಾಜ್ ಅಹ್ಮದ್ ಬಂಗಾಳ ಪರ ವಿಶೇಷವಾಗಿ ಅಬ್ಬರಿಸಿದರು. ಎಡಗೈ ಸ್ಪಿನ್ ಬೌಲಿಂಗ್‌ಗೆ ಹೆಸರಾದ ಈ ಆಟಗಾರ ಮೊದಲ ಬ್ಯಾಟ್‌ನಿಂದಲೇ ಬಿರುಗಾಳಿ ಎಬ್ಬಿಸಿದರು. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಳೆದ ಋತುವಿನವರೆಗೆ ಆರ್‌ಸಿಬಿ ಪರ ಆಡಿದ ಈ ಆಟಗಾರ ಕೇವಲ 97 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 106 ರನ್ ಬಾರಿಸಿದರು. ಶಹಬಾಜ್ ಹೊರತಾಗಿ, ಅನುಭವಿ ಬ್ಯಾಟ್ಸ್‌ಮನ್ ಅನುಸ್ತಪ್ ಮಜುಂದಾರ್ ಕೂಡ ಉತ್ತಮ ಶತಕ ಗಳಿಸಿ 122 ಎಸೆತಗಳಲ್ಲಿ 110 ರನ್ ಗಳಿಸಿದರು. ಮುಂಬೈ ಪರ ವೇಗಿ ಮೋಹಿತ್ ಅವಸ್ತಿ 4 ವಿಕೆಟ್ ಪಡೆದರು.

ಬಂಗಾಳ 7 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿತು, ಆದರೆ ಮಳೆ ಬಾಧಿತ ಪಂದ್ಯದಲ್ಲಿ ಮುಂಬೈ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 41 ಓವರ್ಗಳಲ್ಲಿ 291 ರನ್ಗಳ ಗುರಿಯನ್ನು ಪಡೆಯಿತು. ಮುಂಬೈ ಪರ ಸೂರ್ಯಕುಮಾರ್ ಯಾದವ್ ಕೇವಲ 34 ಎಸೆತಗಳಲ್ಲಿ 49 ರನ್ ಗಳಿಸಿದರು. ಆದರೆ D/L ನಿಯಮದ ಪ್ರಕಾರ 67 ರನ್‌ಗಳಿಂದ ಸೋತಿತು.

ಭಾನುವಾರವೇ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಶಹಬಾಜ್ ಅಹ್ಮದ್ ಕೇವಲ ಬ್ಯಾಟಿಂಗ್‌ನಿಂದ ತೃಪ್ತರಾಗಲಿಲ್ಲ. ಅಮೋಘ ಬೌಲಿಂಗ್ ಪ್ರದರ್ಶಿಸಿ 8 ಓವರ್ಗಳಲ್ಲಿ ಕೇವಲ 38 ರನ್ ನೀಡಿ 1 ವಿಕೆಟ್ ಪಡೆದು ಬೆಂಗಾಲ್ ಗೆಲುವಿಗೆ ಗಣನೀಯ ಕೊಡುಗೆ ನೀಡಿದರು. ಬಂಗಾಳ ಪರ ಪ್ರದೀಪ್ ಪ್ರಮಾಣಿಕ್ 33 ರನ್ ನೀಡಿ 3 ವಿಕೆಟ್ ಪಡೆದರು.




