- Kannada News Photo gallery Cricket photos Indian ODI team contender Prithvi shaw venkatesh iyer ruturaj gaikwad devdutt padikkal IND vs SA ODI
IND vs SA ODI: ಭಾರತ ಏಕದಿನ ತಂಡದಲ್ಲಿ ನಾಲ್ವರು ಯುವ ಆಟಗಾರರಿಗೆ ಚಾನ್ಸ್ ಸಿಗುವ ಸಾಧ್ಯತೆ..!
ಲಿಸ್ಟ್ ಎ ವೃತ್ತಿಜೀವನದಲ್ಲಿ 44 ಪಂದ್ಯಗಳಲ್ಲಿ ಎಂಟು ಶತಕಗಳು ಮತ್ತು ಎಂಟು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಪೃಥ್ವಿ ಶಾ ಅವರ ಗರಿಷ್ಠ ಸ್ಕೋರ್ ಅಜೇಯ 227. ಹೀಗಾಗಿ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಶಾ ಕೂಡ ಅವಕಾಶ ಪಡೆಯಬಹುದು.
Updated on: Dec 12, 2021 | 10:10 PM

ಭಾರತ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿದ್ದಾರೆ. ಮುಂದಿನ ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಹಿಟ್ಮ್ಯಾನ್ಗೆ ಪಟ್ಟ ಕಟ್ಟಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿಯೇ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಟೀಮ್ ಇಂಡಿಯಾದಲ್ಲಿ ಪ್ರಮುಖ ಕಂಡು ಬರುವ ಸಾಧ್ಯತೆಯಿದೆ. ಮುಂಬರುವ ವಿಶ್ವಕಪ್ಗಳಿಗಾಗಿ ಈಗಲೇ ತಂಡವನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಕಾರಣ ಭಾರತೀಯ ಆಯ್ಕೆ ಸಮಿತಿ ದಕ್ಷಿಣ ಆಫ್ರಿಕಾ ಸರಣಿಗೆ ಯುವ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆಯಿದೆ. ಅದರಂತೆ ಈ ಆಟಗಾರರು ಟೀಮ್ ಇಂಡಿಯಾದಲ್ಲಿ ಚಾನ್ಸ್ ಪಡೆಯಬಹುದು. ಅವರೆಂದರೆ...

ದೇವದತ್ ಪಡಿಕ್ಕಲ್- ಕರ್ನಾಟಕದ ಎಡಗೈ ಬ್ಯಾಟರ್ ಇಲ್ಲಿಯವರೆಗೆ 20 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 86.68 ಸರಾಸರಿಯಲ್ಲಿ 1387 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ 86.85 ಇದ್ದು, ಹೀಗಾಗಿ ಸ್ಥಿರ ಪ್ರದರ್ಶನವನ್ನು ಎದುರು ನೋಡಬಹುದು. ಇನ್ನು 21 ವರ್ಷದ ದೇವದತ್ ಪಡಿಕ್ಕಲ್ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಆರು ಶತಕ ಮತ್ತು ಎಂಟು ಅರ್ಧಶತಕಗಳನ್ನು ಬಾರಿಸಿದ್ದಾರೆ. 152 ರನ್ ಅವರ ಗರಿಷ್ಠ ಸ್ಕೋರ್. ಕಳೆದ ಎರಡು ವಿಜಯ್ ಹಜಾರೆ ಟ್ರೋಫಿಗಳಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಆಟಗಾರರಲ್ಲಿ ಪಡಿಕ್ಕಲ್ ಕೂಡ ಒಬ್ಬರು. ಇದರೊಂದಿಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅವರ ಸ್ಥಿರ ಪ್ರದರ್ಶನ ಕಾರಣದಿಂದ ಇದೀಗ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದು, ಇದೀಗ ದಕ್ಷಿಣ ಆಫ್ರಿಕಾ ಎ ವಿರುದ್ದ ಆಡುತ್ತಿದ್ದಾರೆ.

ಪೃಥ್ವಿ ಶಾ - ಮುಂಬೈನ ಸ್ಪೋಟಕ ಬ್ಯಾಟರ್ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಆರಂಭಿಕ ಎಂದು ಪರಿಗಣಿಸಲಾಗುತ್ತಿದೆ. ಅಷ್ಟೇ ಅಲ್ಲದೆ ನಾಯಕನಾಗಿಯೂ ಪೃಥ್ವಿ ಶಾ ಮಿಂಚಿದ್ದಾರೆ. ಪೃಥ್ವಿ ನಾಯಕತ್ವದಲ್ಲಿ ಭಾರತ 2018ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದಿತ್ತು. ಇದುವರೆಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 44 ಪಂದ್ಯಗಳನ್ನು ಆಡಿರುವ ಪೃಥ್ವಿ ಶಾ 56.48 ಸರಾಸರಿಯಲ್ಲಿ 2316 ರನ್ ಕಲೆಹಾಕಿದ್ದಾರೆ. ಇನ್ನು 50 ಓವರ್‌ಗಳ ಕ್ರಿಕೆಟ್‌ನಲ್ಲಿ, ಪೃಥ್ವಿ ಶಾ 124.98 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಲಿಸ್ಟ್ ಎ ವೃತ್ತಿಜೀವನದಲ್ಲಿ 44 ಪಂದ್ಯಗಳಲ್ಲಿ ಎಂಟು ಶತಕಗಳು ಮತ್ತು ಎಂಟು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಪೃಥ್ವಿ ಶಾ ಅವರ ಗರಿಷ್ಠ ಸ್ಕೋರ್ ಅಜೇಯ 227. ಹೀಗಾಗಿ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಶಾ ಕೂಡ ಅವಕಾಶ ಪಡೆಯಬಹುದು.

ವೆಂಕಟೇಶ್ ಅಯ್ಯರ್- ಮಧ್ಯಪ್ರದೇಶದ ಯುವ ಕ್ರಿಕೆಟಿಗ ವೆಂಕಿ ಕಳೆದ 9-10 ತಿಂಗಳುಗಳಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ವೆಂಕಟೇಶ್ ಅಯ್ಯರ್ ಫೆಬ್ರವರಿ-ಮಾರ್ಚ್ 2021 ರಲ್ಲಿ 198 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಗಮನ ಸೆಳೆದರು. ನಂತರ ಐಪಿಎಲ್ 2021 ರ ದ್ವಿತೀಯಾರ್ಧದಲ್ಲಿ ಕೆಕೆಆರ್ ಅನ್ನು ತನ್ನ ಬ್ಯಾಟಿಂಗ್ ಮೂಲಕ ಫೈನಲ್‌ಗೆ ಕೊಂಡೊಯ್ದಿದ್ದರು. ಇದೀಗ ಮತ್ತೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ವೆಂಕಟೇಶ್ ಅಯ್ಯರ್ ಇದುವರೆಗೆ 28 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 54.40 ರ ಸರಾಸರಿಯೊಂದಿಗೆ 1197 ರನ್ ಗಳಿಸಿದ್ದಾರೆ. ಇನ್ನು ಅವರ ಸ್ಟ್ರೈಕ್ ರೇಟ್ ಕೂಡ 107.74 ಇದ್ದು, ಜೊತೆ ಬೌಲಿಂಗ್ನಲ್ಲೂ ಮಿಂಚುತ್ತಿದ್ದಾರೆ. ಹೀಗಾಗಿ ಆಲ್ರೌಂಡರ್ ಆಗಿ ವೆಂಕಟೇಶ್ ಅಯ್ಯರ್ ಸ್ಥಾನ ಪಡೆಯಬಹುದು.

ರುತುರಾಜ್ ಗಾಯಕ್ವಾಡ್- ಐಪಿಎಲ್ 2020 ರಿಂದ ಭರ್ಜರಿ ಫಾರ್ಮ್ನಲ್ಲಿರುವ ರುತುರಾಜ್ ಗಾಯಕ್ವಾಡ್ ಕಳೆದ ಸೀಸನ್ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ವಿನ್ನರ್ ಆಗಿದ್ದರು. ಇದೀಗ ವಿಜಯ್ ಹಜಾರೆ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಶತಕ ಬಾರಿಸಿದ್ದಾರೆ. ಇದುವರೆಗೆ 63 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ರುತುರಾಜ್ 52.81 ಸರಾಸರಿಯಲ್ಲಿ 3116 ರನ್ ಗಳಿಸಿದ್ದಾರೆ. 98.95 ಸ್ಟ್ರೈಕ್ ರೇಟ್ ಹೊಂದಿರುವ ರುತುರಾಜ್ ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ 10 ಶತಕ ಮತ್ತು 16 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ರುತುರಾಜ್ ಗಾಯಕ್ವಾಡ್ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.
