ವಿಜಯ್ ಹಜಾರೆ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ತಮಿಳುನಾಡು ತಂಡಕ್ಕೆ ಪುದುಚೇರಿ ತಂಡವು ಶಾಕ್ ನೀಡಿದೆ. ಬಲಿಷ್ಠ ಆಟಗಾರರನ್ನೇ ತುಂಬಿರುವ ತಮಿಳುನಾಡು ತನ್ನ ನೆರೆಯ ಪುದುಚೇರಿ ವಿರುದ್ದ ಕೇವಲ 1 ರನ್‌ಗಳಿಂದ ಸೋಲನುಭವಿಸಿದೆ. ಇತ್ತೀಚೆಗಷ್ಟೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದುಕೊಂಡಿದ್ದ ತಮಿಳುನಾಡು ತಂಡ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಅಮೋಘ ಪ್ರದರ್ಶನ ಮುಂದುವರೆಸಿತ್ತು. ಆದರೆ ನಾಲ್ಕನೇ ಪಂದ್ಯದಲ್ಲಿ ಪುದುಚೇರಿ ಸೋಲುಣಿಸುವ ಮೂಲಕ ಜಯ ನಾಗಾಲೋಟಕ್ಕೆ ಕಡಿವಾಣ ಹಾಕಿದೆ.